ಸಮಾಚಾರ

ಸಾಲದ ಹೊರೆಯಲ್ಲಿ ಮುಳುಗುತ್ತಿರುವ ಕೆಪಿಸಿಸಿ, ಅಬ್ಬಬ್ಬಾ ಇವರು ಮಾಡಿದ ಸಾಲ ಎಷ್ಟು ಗೊತ್ತೇ

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಈಗ ಸಾಲದ ಸುಳಿಯಲ್ಲಿ ಸಿಲುಕಿದೆ ಎಂದು ತಿಳಿದು ಬಂದಿದೆ. ಹೋದ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು ಈಗಲೂ ಸಮಿಶ್ರ ಸರ್ಕಾರದ ಭಾಗವಾಗಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಅಂದಹಾಗೆ ಕೆಪಿಸಿಸಿ 25 ಕೋಟಿ ಸಾಲ ಬಾಕಿ ಉಳಿದುಕೊಂಡಿದೆ ಎಂದು ತಿಳಿದು ಬಂದಿದೆ.

ಮುಂಬರುವ ಸ್ಥಳೀಯ ಚುನಾವಣೆಗೆ ಕೂಡ ಆರ್ಥಿಕ ಮುಗ್ಗಟ್ಟು ಎದುರಾಗಿದೆ ಎನ್ನಲಾಗಿದೆ. . ಇದರಿಂದ, ಪಕ್ಷವನ್ನು ಆರ್ಥಿಕ ಹೊರೆಯಿಂದ ಪಾರು ಮಾಡುವುದು ಹೇಗೆ? ಎಲ್ಲಿಂದ ಹಣ ಹೊಂದಿಸುವುದು ಮತ್ತು ಸಾಲ ನೀಡಿರುವ ಏಜೆನ್ಸಿಗಳನ್ನು ಸಮಾಧಾನಪಡಿಸುವುದು ಹೇಗೆ ಎಂಬ ಬಗ್ಗೆ ಕಾಂಗ್ರೆಸ್ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

 

 

ಮೂಲಗಳ ಮಾಹಿತಿ ಪ್ರಕಾರ ರಾಜ್ಯ ಕಾಂಗ್ರೆಸ್‌ ಕಳೆದ ವಿಧಾನಸಭಾ ಚುನಾವಣೆ ವೇಳೆ ಜಾಹೀರಾತಿಗಾಗಿ ಪಕ್ಷ ಮಾಡಿದ ವೆಚ್ಚದ ಪೈಕಿ 11 ಕೋಟಿ ರು.ಗಳನ್ನು ಜಾಹೀರಾತು ಏಜೆನ್ಸಿಗಳಿಗೆ ಇನ್ನೂ ಕೊಡುವುದು ಬಾಕಿಯಿದೆ. ಈ ಏಜೆನ್ಸಿಗಳು ಈಗ ಬಾಕಿ ಪಾವತಿಗೆ ಒತ್ತಾಯ ಮಾಡುತ್ತಿವೆ ಎನ್ನಲಾಗಿದೆ. ಇದಿಷ್ಟೇ ಅಲ್ಲ, ಚುನಾವಣೆ ವೇಳೆ ಖರೀದಿ ಮಾಡಲಾಗಿದ್ದ ಪ್ರಚಾರ ಸಾಮಗ್ರಿ, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸೇರಿದಂತೆ ದೆಹಲಿಯಿಂದ ಆಗಮಿಸಿದ್ದ ನಾಯಕರು ಬಳಸಿದ ಹೆಲಿಕಾಪ್ಟರ್‌ ಹಾಗೂ ಇತರೆ ವಾಹನಗಳ ವೆಚ್ಚವಾಗಿ ಸುಮಾರು 10 ಕೋಟಿ ರು. ಹಣವನ್ನು ಪಾವತಿಸುವುದು ಬಾಕಿಯಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಸದ್ಯ ಬೆಂಗಳೂರಿನ ಕ್ವೀನ್ ರಸ್ತೆಯಲ್ಲಿ ಕಾಂಗ್ರೆಸ್ ಕಚೇರಿ ಇದ್ದು ಇದರ ಪಕ್ಕದಲ್ಲೇ ಹೊಸ ಕಟ್ಟಡ ನಿರ್ಮಾಣವಾಗುತ್ತಿದ್ದು ಈ ಕಟ್ಟಡಕ್ಕೆ ಸಂಭಂದ ಪಟ್ಟಂತೆ 4 ಕೋಟಿ ಹೊರೆ ಇದೆ ಎನ್ನಲಾಗಿದೆ. ಹೀಗೆ ಒಟ್ಟಾರೆಯಾಗಿ ಒಟ್ಟು 25 ಕೋಟಿ ಹೊರೆ ಇದೆ ಎನ್ನುವ ಮಾತುಗಳು ಕೇಳಿಬರುತ್ತಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top