ಹೆಚ್ಚಿನ

ಸಂಖ್ಯಾಶಾಸ್ತ್ರದ ಪ್ರಕಾರ ನಿಮ್ಮ ಜನ್ಮ ನಕ್ಷತ್ರದ ಆಧಾರದ ಮೇಲೆ ನಿಮ್ಮ ಅದೃಷ್ಟ ಸಂಖ್ಯೆ ಯಾವುದು ಎಂದು ತಿಳ್ಕೊಳ್ಳಿ.

ನಿಮ್ಮ ಹುಟ್ಟಿದ ದಿನ ಮತ್ತು ಸಮಯಕ್ಕೆ ಅನುಗುಣವಾಗಿ ನಿಮ್ಮ ಜನ್ಮ ನಕ್ಷತ್ರ ಮತ್ತು ರಾಶಿ ಇರುತ್ತದೆ.ಇಂದು ಜನ್ಮ ನಕ್ಷತ್ರಕ್ಕೆ ಅನುಗುಣವಾಗಿ ಯಾವ ಸಂಖ್ಯೆ ನಿಮಗೆ ಅದೃಷ್ಟ ಸಂಖ್ಯೆಯಾಗಲಿದೆ ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಟ್ಟು 27 ನಕ್ಷತ್ರಗಳಿವೆ. ಈ ಪ್ರಪಂಚದಲ್ಲಿ ಯಾವುದೇ ಒಬ್ಬ ವ್ಯಕ್ತಿಯಾದರೂ ಇಪ್ಪತ್ತೇಳು ನಕ್ಷತ್ರಗಳಲ್ಲಿಯೇ ಯಾವುದಾದರೂ ಒಂದು ನಕ್ಷತ್ರದಲ್ಲಿ ಜನಿಸಬೇಕು . 28 ನೇ ನಕ್ಷತ್ರ ಎನ್ನುವುದು ಇಲ್ಲವೇ ಇಲ್ಲ .ಪ್ರತಿಯೊಂದು ನಕ್ಷತ್ರಕ್ಕೂ 4 ಪಾದಗಳು ಇವೆ ಎಂದು ಜ್ಯೋತಿಷ್ಯ ಶಾಸ್ತ್ರದ ವಿಂಗಡಿಸಲಾಗಿದೆ. 27 ನಕ್ಷತ್ರಗಳಿಗೆ 4 ಪಾದದಂತೆ 108 ಪಾದಗಳನ್ನು ಮತ್ತು ಹನ್ನೆರಡು ರಾಶಿಗಳಿಗೆ ವಿಂಗಡಿಸಲಾಗಿದೆ. ಪ್ರತಿಯೊಂದು ರಾಶಿಗೂ ಎರಡು ನಕ್ಷತ್ರಗಳನ್ನು ವಿಂಗಡಿಸಲಾಗಿದೆ. ಈಗ ನೀವು ಯಾವ ನಕ್ಷತ್ರದಲ್ಲಿ ಜನಿಸಿದ್ದೀರಿ ? ಆ ನಕ್ಷತ್ರದ ಅಧಿಪತಿ ಯಾರು ? ಆ ನಕ್ಷತ್ರದ ಸಂಖ್ಯೆಯೇ ನಿಮ್ಮ ಅದೃಷ್ಟ ಸಂಖ್ಯೆಯಾಗಿದೆ.

 

 

ಅಶ್ವಿನಿ, ಮಘ, ಮೂಲ ನಕ್ಷತ್ರಗಳ ಅಧಿಪತಿ ಕೇತು ಅದೃಷ್ಟ ಸಂಖ್ಯೆ 7.ಭರಣಿ, ಪುಬ್ಬ , ಪೂರ್ವಾಷಾಡ ನಕ್ಷತ್ರಗಳ ಅಧಿಪತಿ ಶುಕ್ರ ಅದೃಷ್ಟ ಸಂಖ್ಯೆ 6. ಕೃತಿಕಾ, ಉತ್ತರಾಷಾಡ, ಉತ್ತರ ನಕ್ಷತ್ರಗಳ ಅಧಿಪತಿ ರವಿ ಅದೃಷ್ಟ ಸಂಖ್ಯೆ 1.,ರೋಹಿಣಿ ,ಹಸ್ತ, ಶ್ರವಣ ನಕ್ಷತ್ರಗಳ ಅಧಿಪತಿ ಚಂದ್ರ ಅದೃಷ್ಟ ಸಂಖ್ಯೆ 2 .ಮೃಗಶಿರ, ಚಿತ್ತ, ಧನಿಷ್ಠಾ ನಕ್ಷತ್ರಗಳ ಅಧಿಪತಿ ಕುಜ ಅದೃಷ್ಟ ಸಂಖ್ಯೆ 9 .ಆರಿದ್ರಾ, ಸ್ವಾತಿ ,ಶತಭಿಷ ನಕ್ಷತ್ರಗಳ ಅಧಿಪತಿ ರಾಹು ಅದೃಷ್ಟ ಸಂಖ್ಯೆ 4 .ಪುನರ್ವಸು, ವಿಶಾಖ, ಪೂರ್ವಭಾದ್ರಪದ ನಕ್ಷತ್ರಗಳ ಅಧಿಪತಿ ಗುರು ,ಅದೃಷ್ಟ ಸಂಖ್ಯೆ 3 .ಪುಷ್ಯ, ಅನುರಾಧಾ ,ಉತ್ತರಾಭಾದ್ರಪದ ನಕ್ಷತ್ರಗಳ ಅಧಿಪತಿ ಶನಿ ,ಅದೃಷ್ಟ ಸಂಖ್ಯೆ 8 .ಆಶ್ಲೇಷ ,ಜ್ಯೇಷ್ಠ , ರೇವತಿ ನಕ್ಷತ್ರಗಳ ಅಧಿಪತಿ ಬುಧ , ಅದೃಷ್ಟ ಸಂಖ್ಯೆ 5 .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top