fbpx
ಮನೋರಂಜನೆ

ಲಂಡನ್ ನಲ್ಲಿ ವಸಿಷ್ಠ ಮತ್ತು ಮಾನ್ವಿತಾರನ್ನು ಪೊಲೀಸರು ಅರೆಸ್ಟ್ ಮಾಡಿದ್ದು ಯಾಕೆ?

ನಟಿ ಮಾನ್ವಿತಾ ಹರೀಶ್ ಮತ್ತು ನಟ ವಸಿಷ್ಠ ಸಿಂಹ ಅವರನ್ನು ಲಂಡನ್ ಪೊಲೀಸರು ಅರೆಸ್ಟ್ ಮಾಡಿದ್ದು ನಂತರ ಅವರಿಬ್ಬರನ್ನು ಬಿಡುಗಡೆ ಮಾಡಿರುವ ವಿಚಾರ ಬಹಿರಂಗವಾಗಿದೆ. ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದ ಚಿತ್ರೀಕರಣಕ್ಕಾಗಿ ಲಂಡನ್ ನಲ್ಲಿ ಬೀದರ ಹೂಡಿರುವ ಇವರು ನೆನ್ನೆ ಲಂಡನ್ ನಲ್ಲಿ ಬಂಕಿಂಗ್ ಹ್ಯಾಮ್ ಪ್ಯಾಲೇಸ್ ಮುಂದೆ ಹಾಡಿ ಕುಣಿದಿದ್ದಕ್ಕೆ ಇಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

 

 

ಮಾನ್ವಿತಾ ಮತ್ತು ವಸಿಷ್ಠ ಬಂಕಿಂಗ್ ಹ್ಯಾಮ್ ಪ್ಯಾಲೇಸ್ ಮುಂದೆ ಹಾಡು, ನೃತ್ಯ ಜೊತೆಗೆ ಪ್ರೀತಿ ಮಾಡುತ್ತಿದ್ದರು. ಇದನ್ನು ನೋಡಿದ್ದೇ ತಡ ಲಂಡನ್‌ ಪೊಲೀಸರು ಇಬ್ಬರನ್ನು ಕೂಡಲೇ ಅರೆಸ್ಟ್‌ ಮಾಡಿದ್ದಾರೆ. ಇದು ಸಾರ್ವಜನಿಕ ಸ್ಥಳ, ಇಲ್ಲಿ ಹೀಗೆಲ್ಲಾ ಕುಣಿಯಲು ಅನುಮತಿ ಇಲ್ಲ. ಇದು ಅಪರಾಧ ಅಂತ ಹೇಳಿ, ಅರೆಸ್ಟ್ ಮಾಡಲು ಮುಂದಾಗಿದ್ದಾರೆ. ನಂತರ ಇದು ಸಿನಿಮಾ ಶೂಟಿಂಗ್ ಎಂದು ಹೇಳಿದ್ದಕ್ಕೆ ಇಬ್ಬರನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಈ ಬಗ್ಗೆ ಖುದ್ದು ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ಮತ್ತು ನಟಿ ಮಾನ್ವಿತಾ ಹರೀಶ್ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ. ಅಂದಹಾಗೆ ಇನ್ನೂ ಹೆಸರಿಡದ ಈ ಚಿತ್ರಕ್ಕೆ ನಾಗತಿಹಳ್ಳಿ ಚಂದ್ರಶೇಖರ್ ಅವರ ಮಗಳು ಕನಸು ಅವರೇ ಕತೆ ಬರೆದಿದ್ದು ಮಾನ್ವಿತಾ ಮತ್ತು ವಸಿಷ್ಠ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಳ್ಳಿತ್ತಿದ್ದಾರೆ. ಚಿತ್ರದ ಬಹುತೇಕ ಶೂಟಿಂಗ್ ಲಂಡನ್ ನಲ್ಲಿ ಮಾಡಲಾಗಿದ್ದು, 40 ದಿನಗಳ ಕಾಲ ಲಂಡನ್ ನಲ್ಲಿ ಚಿತ್ರತಂಡ ಉಳಿದುಕೊಂಡಿದೆ. ಉಳಿದಂತೆ ಚಿತ್ರಕ್ಕೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ನಿರ್ದೇಶನ ಮಾಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top