ಮನೋರಂಜನೆ

ನಿಶ್ಚಿತಾರ್ಥದ ಬಗ್ಗೆ ಕೊನೆಗೂ ಮೌನ ಮುರಿದ ಪಿಗ್ಗಿ ಪ್ರಿಯಕರ ನಿಕ್ ಜೊನಾಸ್.

ಬಾಲಿವುಡ್ ಬ್ಯುಟಿ ಪ್ರಿಯಾಂಕಾ ಚೋಪ್ರಾ ಮದುವೆಯಾಗ್ತಾಳಂತೆ ಎಂಬ ಸುದ್ದಿ ಚಾಲ್ತಿಗೆ ಬಂದು ವರ್ಷಗಳೇ ಕಳೆದಿವೆ.. ಬಾಲಿವುಡ್ಡಿನ ಕೆಲವೊಂದಿಷ್ಟು ನಟರ ಜೊತೆಗೆ ಈಕೆಯ ಹೆಸರನ್ನು ತಳುಕು ಹಾಕಿಸಿ ಪಿಗ್ಗಿ ಇವರನ್ನು ಮದ್ವೆಯಾಗ್ತಾಳಂತೆ, ಅವರನ್ನು ಮದ್ವೆಯ್ಗ್ತಾಳಂತೆ ಎಂಬ ಗಾಳಿಸುದ್ದಿಗಳು ಹಬ್ಬಿ ಸುಳ್ಳಾಗಿರೋದು ಗೊತ್ತಿರೋ ವಿಷಯವೇ. ಇಂಥಾ ಸುದ್ದಿಗಳಲ್ಲಿ ಮತ್ತೊಮ್ಮೆ ಪಿಗ್ಗಿ ಮದುವೆ ವಿಚಾರ ಅಖಾಡಕ್ಕೆ ಸಿಲುಕಿರೋದು ಅಮೇರಿಕನ್ ಸಿಂಗರ್ ನಿಕ್ ಜೊನಾಸ್ ವಿಚಾರವಾಗಿ..

 

 

ಈಗ ಚಾಲ್ತಿಯಲ್ಲಿರುವ ವಿಚಾರವನ್ನು ಗಮನಿಸಿದರೆ ಪಿಗ್ಗಿ ನಿಜವಾಗಿಯೂ ಲವ್ವಲ್ಲಿ ಬಿದ್ದಿದ್ದಾಳೆ ಎಂದು ಮೇಲ್ನೋಟಕ್ಕೆ ಕಾಣುವುದಂತೂ ನಿಜ. ಯಾಕೆಂದರೆ ಅಮೆರಿಕಾ ಸಿಂಗರ್​ ನಿಕ್​ ಜೋನಾಸ್​ನ ಜತೆ ಡೇಟ್​ ಮಾಡ್ತಿದ್ದಾರೆ ಎನ್ನುವ ಗುಸು ಗುಸು ಬಾಲಿವುಡ್ ಅಂಗಳದಲ್ಲಿ ಜೋರಾಗಿ ಮಾರ್ದನಿಸುತ್ತಿದೆ.. ಅದಕ್ಕೆ ಪುಷ್ಟಿ ನೀಡುವಂತೆ ನಿಕ್ ಮತ್ತು ಪಿಗ್ಗಿ ಸಖತ್​ ಕ್ಲೋಸ್​ ಆಗಿ ಕಾಲಕಳೆಯುತ್ತಿರುವ ರಾಶಿ ರಾಶಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ..

ನಿಕ್ ಮತ್ತು ಪಿಗ್ಗಿ ನಿಶ್ಚಿತಾರ್ಥ ಕೂಡ ಈಗಾಗಲೇ ಮುಗಿದಿದೆ ಎಂಬ ಸುದ್ದಿಗಳು ಕೂಡ ಬಾಲಿವುಡ್ ತುಂಬಾ ಹರಡಿಕೊಂಡಿದ್ದು ಇತ್ತೀಚಿಗೆ ಬರ್ತಡೇ ಆಚರಿಸಿಕೊಂಡ ಪಿಗ್ಗಿ ಅಂದೇ ತನ್ನ ಪ್ರಿಯಕರನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ ಎಂದು ಪೀಪಲ್​ ಮ್ಯಾಗಜೀನ್​ ಅಂಡ್​ ಇ ವರದಿ ಮಾಡಿದೆ. ಎಂಗೇಜ್‍ಮೆಂಟ್ ಉಂಗುರ ಖರೀದಿಸುವ ಸಲುವಾಗಿ ನ್ಯೂಯಾರ್ಕ್‌ನ ಟಿಫಾನಿ ಸ್ಟೋರ್‌ನಲ್ಲಿ ಇಡೀ ಮಳಿಗೆಯನ್ನೇ ಒಂದು ದಿನದ ಮಟ್ಟಿಗೆ ಬುಕ್ ಮಾಡಿಕೊಳ್ಳಲಾಗಿದ್ದು ಬೇರೆಯರಿಗೆ ಪ್ರವೇಶ ನಿಷೇಧಿಸಲಾಗಿತ್ತು ಎಂಬ ಸುದ್ದಿ ಕೂಡ ಚಾಲ್ತಿಯಲ್ಲಿದೆ..

ಈ ಬಗ್ಗೆ ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸಿದ್ದ ಪ್ರಿಯಾಂಕಾ ಚೋಪ್ರಾ “ನಾನೇನು ಚುನಾವಣೆಗೆ ಸ್ಪರ್ಧೆ ಮಾಡ್ತಿಲ್ಲ. ಇದು ನನ್ನ ಖಾಸಗಿ ವಿಚಾರ” ಎಂದು ಹೇಳಿದ್ದರು. ಇನ್ನು ಇದೆ ವಿಚಾರವಾಗಿ ನಿಕ್ ಜೋನಸ್ ಅವರು “ನನ್ನದೊಂದು ಕುಟುಂಬ ನಿರ್ಮಾಣ ಮಾಡುವುದು ನನ್ನ ಗುರಿ” ಎಂದು ಹೇಳಿದ್ದಾರೆ. ಅಲ್ಲದೇ ಪತ್ರಕರ್ತರೊಬ್ಬರು ನಿಕ್’ಗೆ ನಿಶ್ಚಿತಾರ್ಥ ವಿಚಾರವಾಗಿ ಶುಭಹಾರೈಸಿದ್ದಾರೆ ಇದಕ್ಕೆ ಪ್ರತಿಕ್ರಿಯಿಸಿದ್ದ ನಿಕ್ ಜೋನಸ್ ‘ಧನ್ಯವಾದ’ ಹೇಳಿ ಮುಗುಳ್ನಕ್ಕಿದ್ದಾರೆ. ನಿಕ್ ಜೊನಾಸ್ ಕೊಟ್ಟಿರೋ ಈ ರಿಯಾಕ್ಷನ್ ನೋಡಿ ಜನರು ಪಿಗ್ಗಿ ಜೊತೆ ನೀಶ್ಚಿತಾರ್ಥ ಮಾಡಿಕೊಂಡಿರುವುದನ್ನು ನಿಕ್ ಒಪ್ಪಿಕೊಂಡಿದ್ದಾರೆ ಎನ್ನುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top