ಮನೋರಂಜನೆ

ಸೀತಾರಾಮ ಕಲ್ಯಾಣದಲ್ಲಿ ತೆಲುಗು ಚಿತ್ರಗಳ ಕಾಪಿ ಮಾಡಲಾಗಿದೆ ಎಂದು ಟೀಕಿಸಿದವರಿಗೆ ಉತ್ತರ ಕೊಟ್ಟ ನಿಖಿಲ್ ಕುಮಾರ್.

ಜಾಗ್ವಾರ್ ಚಿತ್ರದ ನಂತರ ನಿಖಿಲ್ ಕುಮಾರಸ್ವಾಮಿಯ ಮುಂದಿನ ಚಿತ್ರ ‘ಸೀತಾರಾಮ ಕಲ್ಯಾಣ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.. ಕುಮಾರಸ್ವಾಮಿ ಹೋಮ್ ಬ್ಯಾನರ್ ನಲ್ಲಿಯೇ ತಯಾರಾಗಿರುವ ಈ ಚಿತ್ರವೂ ಅದ್ಧೂರಿಯಾಗಿ ಮೂಡಿಬರುತ್ತಿದೆ. ನೃತ್ಯ ನಿರ್ದೇಶಕರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಎ ಹರ್ಷ ಅವರೀಗ ಸೀತಾರಾಮ ಕಲ್ಯಾಣ ಚಿತ್ರದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರ ಅಪ್ಪಟ ಸ್ವಮೇಕ್ ಅಂತಲೂ ಸುದ್ದಿ ಮಾಡಿದೆ. ಆದರೆ ಈ ಚಿತ್ರದ ಕಥೆ ತೆಲುಗು ಚಿತ್ರಗಳಿಂದ ಭಟ್ಟಿ ಇಳಿಸಿದ್ದಾ ಅಂತೊಂದು ಅನುಮಾನ ಹರಿದಾಡಲಾರಂಭಿಸಿತ್ತು.

 

 

ನೃತ್ಯ ನಿರ್ದೇಶಕರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಎ ಹರ್ಷ ಅವರೀಗ ಸೀತಾರಾಮ ಕಲ್ಯಾಣ ಚಿತ್ರದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರ ಅಪ್ಪಟ ಸ್ವಮೇಕ್ ಅಂತಲೂ ಸುದ್ದಿ ಮಾಡಿದೆ. ಆದರೆ ಈ ಚಿತ್ರದ ಕಥೆ ತೆಲುಗು ಚಿತ್ರಗಳಿಂದ ಭಟ್ಟಿ ಇಳಿಸಿದ್ದಾ ಅಂತೊಂದು ಅನುಮಾನ ಹರಿದಾಡಲಾರಂಭಿಸಿದೆ. ಯಾವಾಗ ಚಿತ್ರದ ಟೀಸರ್ ಬಿಡುಗಡೆಯಾಯಿತು ಆ ಅನುಮಾನಗಳು ಮತ್ತಷ್ಟು ಜೋರಾಯಿತು.. ತೆಲುಗು ಚಿತ್ರಗಳ ಸ್ಟಿಲ್ಲುಗಳು ಮತ್ತು ಸೀತಾರಾಮ ಕಲ್ಯಾಣದ ಸ್ಟಿಲ್ಲುಗಳು ಒಂದಕ್ಕೊಂದು ಮ್ಯಾಚ್ ಆಗುವ ಕಾರಣಕ್ಕಾಗಿಯೋ ಏನೋ ಇಂಥಾ ಅನುಮಾನಗಳೇ ರೂಮರುಗಳಾಗಿ ಗಾಂಧಿನಗರದಾದ್ಯಂತ ಹರಿದಾಡುತ್ತಿವೆಯಲ್ಲಾ? ಅದನ್ನಾಧರಿಸಿ ಹೇಳೋದಾದರೆ, ಈ ಚಿತ್ರದ ಕಥೆ ತೆಲುಗಿನ ‘ಸರೈನೋಡು’, ‘ಗೋವಿಂದುಡು ಅಂದರಿವಾದಲೇ’ ಮತ್ತು ‘ರಾರಂಡೈ ವೇಡುಕ ಚೂದ್ದಾಂ’ ಚಿತ್ರಗಳಿಂದ ಎತ್ತಿಕೊಂಡು ಮಾಡಲಾಗಿದೆ, ಇವೆರಡು ಚಿತ್ರಗಳನ್ನು ನಿರ್ದೇಶಕರು ಸ್ಫೂರ್ತಿಯಾಗಿ ಪರಿಗಣಿಸಿದ್ದಾರೆಂಬ ಸಮರ್ಥನೆ ಮುಂದಿನ ದಿನಗಳಲ್ಲಿ ಕೇಳಿ ಬಂದರೂ ಅಚ್ಚರಿಯೇನಿಲ್ಲ.

ಇಈ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿರುವ ಚಿತ್ರದ ನಾಯಕ ನಿಖಿಲ್ ಕುಮಾರ್ ಇದು ತೆಲುಗಿನ ಸಿನಿಮಾಗಳಿಗೆ ಸಾಹಸ ಸಂಯೋಜಿಸಿದ್ದ ಸಾಹಸ ನಿರ್ದೇಶಕನೇ ನಿರ್ದೇಶನ ಮಾಡಿರುವ ದೃಶ್ಯಗಳು. ಪ್ರತಿಯೊಬ್ಬ ಸ್ಟಂಟ್ ಮಾಸ್ಟರ್’ಗೂ ತಮ್ಮದೇ ಸ್ವಂತ ಸ್ಟೈಲ್ ಇರುತ್ತೆ. ತೆಲುಗಿನಲ್ಲಿ ಅವರ ಸಾಹಸ ಸಂಯೋಜನೆಯನ್ನು ಕನ್ನಡ ಪ್ರೇಕ್ಷಕರು ನೋಡಿ ಇಷ್ಟಪಟ್ಟಿದ್ದಾರೆ. ತೆಲುಗಿಗಿಂತ ಉತ್ತಮವಾಗಿ ಕನ್ನಡದಲ್ಲಿ ಸಾಹಸ ದೃಶ್ಯಗಳನ್ನು ತೆಗೆಯಲಾಗಿದೆ. ಇದು ರಿಮೇಕ್ ಸಿನಿಮಾ ಅಲ್ಲ, ನಮ್ಮ ಪ್ರಯತ್ನ ಕನ್ನಡದ ಪ್ರೇಕ್ಷಕರನ್ನು ಮನರಂಜಿಸುವುದು. ಈ ಟೀಸರ್ ನಿಂದ ನಮಗೆ ಟೀಕೆಗಳಿಗಿಂತ ಪ್ರೋತ್ಸಾಹವೇ ಹೆಚ್ಚು ಸಿಕ್ಕಿದೆ. ಟೀಸರ್ ನಿಂದ ಹಾಗೇನಾದರೂ ಅಭಿಮಾನಿಗಳಿಗೆ ಅಸಮಾಧಾನವಾಗಿದ್ದರೆ, ಚಿತ್ರದ ಟ್ರೇಲರ್ ಮತ್ತು ಚಿತ್ರವನ್ನು ಮತ್ತಷ್ಟು ಉತ್ತಮವಾಗಿ ನೀಡಲು ಪ್ರಯತ್ನಿಸುತ್ತೇವೆ” ಎಂದು ಹೇಳಿದರು.

ಅದೇನೇ ಇರಲಿ ಹರ್ಷ ಪ್ರತಿಭಾವಂತ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅವರ ಈ ವರೆಗಿನ ಚಿತ್ರಗಳಲ್ಲಿ ಪರಭಾಷಾ ಚಿತ್ರಗಳ ಛಾಯೆ ಈ ವರೆಗೂ ಆಳವಾಗಿಯೇ ಎದ್ದು ಕಾಣಿಸುತ್ತಿತ್ತು. ಆದರೆ ಸೀತಾರಾಮ ಕಲ್ಯಾಣ ಚಿತ್ರದ ವಿಚಾರದಲ್ಲಿ ಚಿತ್ರೀಕರಣದ ಹಂತದಲ್ಲಿಯೇ ಇಂಥಾ ವಿಚಾರ ಹೊರ ಬಿದ್ದಿದೆ. ಈಗ ಎದ್ದಿರೋ ಗುಮಾನಿಗಳ ಅಸಲೀಯತ್ತು ಸದರಿ ಚಿತ್ರ ತೆರೆ ಕಂಡ ಮೇಲೆ ಜಾಹೀರಾಗಲಿದೆ! ಯಾವ ಸಿನಿಮಾವನ್ನಾದರೂ ಸ್ಫೂರ್ತಿಯಾಗಿಸಿಕೊಂಡರೂ ಪರವಾಗಿಲ್ಲ. ಜನ ಮೆಚ್ಚುವಂತಾ ಸಿನಿಮಾ ಆದರೆ ಸಾಕು. ಹರ್ಷ ಅವರಿಗೆ ಅದು ಕಷ್ಟದ ಕೆಲಸವೂ ಅಲ್ಲ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top