ಮನೋರಂಜನೆ

ವೈರಲ್ ಆಯ್ತು ರಾಘಣ್ಣನ ಕಮ್ ಬ್ಯಾಕ್ ಚಿತ್ರದ ಫರ್ಸ್ಟ್ ಲುಕ್ ಫೋಟೋಗಳು.

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಟಾಪ್ ನಂತರ ಸಾಲಿನಲ್ಲಿ ಮಿರ ಮಿರ ಮಿಂಚುತ್ತಿದ್ದ ರಾಘವೇಂದ್ರ ರಾಜಕುಮಾರ್ ಪ್ರತಿಭಾನ್ವಿತ ಕಲಾವಿದ ಎನ್ನುವುದರಲ್ಲಿ ಎರಡು ಮಾತಿಲ್ಲ. ತಮ್ಮ ಮನೋಜ್ಞ ನಟನೆಯ ಮೂಲಕವೇ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡುತ್ತಿದ್ದರೂ ಆರೋಗ್ಯ ಕೈಕೊಟ್ಟ ಕಾರಣ ಚಿಕಿತ್ಸೆ ಪಡೆಯುವ ಸಲುವಾಗಿ ನಟನೆಯಿಂದ ಸುಮಾರು ಒಂದೂವರೆ ದಶಕಗಳ ದೂರ ಉಳಿದಿದ್ದರು. ಆದರೆ ಇದೀಗ ಅವರು ತಮ್ಮ ನೆಚ್ಚಿನ ನಟನಾ ಕ್ಷೇತ್ರಕ್ಕೆ ರೀ ಎಂಟ್ರಿ ಕೊಡುತ್ತಿದ್ದು ರಾಘಣ್ಣನ ಕಂಬ್ಯಾಕ್ ಗಾಗಿ ಕಾದು ಕುಳಿತಿದ್ದ ದೊಡ್ಮನೆ ಅಭಿಮಾನಿಗಳಿಗೆ ಮಾತ್ರವಲ್ಲದೆ ಪ್ರತಿ ಕನ್ನಡ ಸಿನಿರಸಿಕನಿಗೂ ಸಂತಸವನ್ನುಂಟುಮಾಡಿದೆ.

 

 

ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದ ನಿಖಿಲ್ ಮಂಜು ನಿರ್ದೇಶನ ಮಾಡುತ್ತಿರುವ ‘ಅಮ್ಮನ ಮನೆ’ ಚಿತ್ರದಲ್ಲಿ ಸದ್ಯ ರಾಘವೇಂದ್ರ ರಾಜ್ ಕುಮಾರ್ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತಂದೆ ತಾಯಿಯ ಪ್ರೀತಿಯ ಬಗ್ಗೆಯೇ ಹೇಳುವ ಸಿನಿಮಾ ಇದಾಗಿದೆ. ಆಗಸ್ಟ್ 15 ರಂದು ನಟ ರಾಘವೇಂದ್ರ ರಾಜ್ ಕುಮಾರ್ ಅವರ ಹುಟ್ಟು ಹಬ್ಬವಿದ್ದು.ಅಂದೇ ಸದರಿ ಚಿತ್ರದ ಮೂಹೂರ್ತ ನೆರವೇರಲಿದೆ ಎಂದು ನಿರ್ದೇಶಕ ನಿಖಿಲ್ ಮಂಜು ತಿಳಿಸಿದ್ದಾರೆ. ಈ ಚಿತ್ರದ ಫರ್ಸ್ಟ್ ಲುಕ್ ಫೋಟೋಗಳು ಅದಾಗಲೇ ರಿವೀಲ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.

ಕೆಲವು ದಿನಗಳ ಹಿಂದೆಯಷ್ಟೇ ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯಿಸುತ್ತಿರುವ ‘ಚೀಲಂ’ ಚಿತ್ರದ ಪ್ರಮುಖಪಾತ್ರವೊಂದರಲ್ಲಿ ರಾಘಣ್ಣ ನಟಿಸಲಿದ್ದಾರೆನ್ನುವ ಸುದ್ದಿ ಗಾಂಧಿನಗರದೆಲ್ಲೆಡೆ ಹರಿದಾಡಿತ್ತು. ಆದರೆ ಚಿತ್ರದಲ್ಲಿ ನೆಗಿಟಿವ್ ಶೆಡ್ ಇರೋದ್ರಿಂದ ಅಭಿಮಾನಿಗಳ ಒತ್ತಡಕ್ಕೆ ಮಣಿದು ಚಿತ್ರದಿಂದ ಸ್ವತಃ ರಾಘಣ್ಣ ಅವರೇ ಹೊರಬಂದಿದ್ದರು

ಒಟ್ಟಿನಲ್ಲಿ ಕಳೆದ ಹದಿನೈದು ವರ್ಷಗಳಿಂದ ಸಂಪೂರ್ಣವಾಗಿ ತೆರೆಮರೆಗೆ ಸರಿದಿದ್ದ ರಾಘವೇಂದ್ರ ರಾಜಕುಮಾರ್ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಪ್ರತ್ಯಕ್ಷವಾಗುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಚಿತ್ರಗಳಲ್ಲಿ ಸಕ್ರಿಯರಾಗಿ ಅಭಿಮಾನಿಗಳನ್ನು ರಂಜಿಸಲಿ ಎಂಬುದೇ ಅವರ ಅಭಿಮಾನಿಗಳೆಲ್ಲರ ಆಶಯ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top