ಕಥೆ

ರಾಮಲಕ್ಷ್ಮಣ, ಹನುಮಂತ ಹಾಗೂ ಸುಗ್ರೀವನ ಸ್ನೇಹ ಹಾಗೂ ಅದರ ಹಿಂದೆ ಇರುವ ಈ ರೋಚಕ ಕಥೆಯನ್ನು ತಪ್ಪದೆ ತಿಳ್ಕೊಳ್ಳಿ.

ಸುಗ್ರೀವನು ಕಿಷ್ಕಿಂದ ರಾಜ್ಯದ ದೊರೆಯಾದ ವಾಲಿಯ ಸಹೋದರನು. ವಾಲಿಯೊಂದಿಗೆ ವೈಮನಸ್ಸು ಹೊಂದಿದ ನಂತರ ಸುಗ್ರೀವನು ಋಷ್ಯಮೂಕ ಪರ್ವತವನ್ನು ಆಶ್ರಯಿಸಿದ್ದನು. ಈ ಪ್ರದೇಶದಲ್ಲಿ ವಾಲಿಯು ಬರುತ್ತಿರಲಿಲ್ಲ. ಅಲ್ಲಿರುವ ಋಷಿಯಿಂದ ಶಾಪ ಪಡೆಯುವ ಹೆದರಿಕೆಯಿಂದಾಗಿ ವಾಲಿಯು ಕೇವಲ ಋಶ್ಯಮೂಕ ಪರ್ವತವನ್ನು ಪ್ರವೇಶಿಸುತ್ತಿರಲಿಲ್ಲ. ಸುಗ್ರೀವ ಮತ್ತು ಅವನ ಮತ್ತು ಅವನ ಕೆಲವು ಗೆಳೆಯರು ಅಲ್ಲಿಯೇ ವಾಸವಾಗಿದ್ದರು.

ವಾಲಿ ಸುಗ್ರೀವರು ಋಕ್ಷರಜಾ ಎಂಬ ಕಪಿ ರಾಜನ ಮಕ್ಕಳಾಗಿದ್ದರು. ವಾಲಿ ರಾಜನಾಗಿಯೂ ಸುಗ್ರೀವನು ಯುವರಾಜನನ್ನಾಗಿಸಿ ಋಕ್ಷರಾಜನು ಮರಣ ಹೊಂದಿದನು. ಆದರೆ ವಾಲಿಯ ಸುಷೇಣನೆಂಬ ಕಪಿವೀರನ ಪುತ್ರಿ ತಾರೆಯನ್ನು ಮದುವೆಯಾದನು. ಅಂಗದನೆಂಬ ಮಗನನ್ನು ಪಡೆದಿದ್ದನು. ಸುಗ್ರೀವನು ಸಹಿತ ಆಡಳಿತದಲ್ಲಿ ಉತ್ತಮ ಸಹಾಯ ಸಹಕಾರವನ್ನು ನೀಡುತ್ತಿದ್ದನು.
ಸುಗ್ರೀವನು ತಾರಾ ಎಂಬ ಕಪಿ ರಾಜನ ಮಗಳಾದ ರುಮೆ ಎಂಬುವವಳನ್ನು ಮದುವೆ ಆಗಿದ್ದನು. ಒಮ್ಮೆ ಅರಮನೆಗೆ ಮಾಯಾವಿ ಎಂಬ ರಾಕ್ಷಸನು ಬಂದಾಗ ಅದರಿಂದಾಗಿ ವಾಲಿಗೆ ನಿದ್ರಾಭಂಗವಾಯಿತು. ಮಾಯಾವಿಯೊಡನೆ ಯುದ್ಧಕ್ಕೆ ಸುಗ್ರೀವನು ಸಹ ಹೋದನು. ಮಾಯಾವಿಯು ದೊಡ್ಡ ಗವಿಯನ್ನು ಪ್ರವೇಶಿಸಿದನು. ವಾಲಿಯೂ ಅವನ ಹಿಂದೆಯೇ ಒಳಹೊಕ್ಕನು. ಸುಗ್ರೀವನಿಗೆ ಬಾಗಿಲಲ್ಲಿಯೇ ಇರಲು ತಿಳಿಸಿದನು .
ಸುಗ್ರೀವನು ಹಲವು ದಿನಗಳವರೆಗೆ ಅಣ್ಣನ ಬರುವನೆಂದು ಕಾದನು. ಒಂದು ವರ್ಷದವರೆಗೆ ಕಾದನು. ಒಮ್ಮೆ ಗವಿಯಿಂದ ರಾಕ್ಷಸನ ಆರ್ಭಟ ಕೇಳಿ ಬಂತು ಅಲ್ಲದೆ ರಕ್ತವೇ ಹರಿದು ಬಂದಿತ್ತು. ಅಣ್ಣ ವಾಲಿಯನ್ನು ರಾಕ್ಷಸರು ಕೊಂದರು ಎಂದು ಕಣ್ಣೀರು ಸುರಿಸುತ್ತಾ ಆ ಗವಿಯ ಬಾಗಿಲಿಗೆ ಬಂಡೆಗಲ್ಲನ್ನು ಇಟ್ಟು ಸುಗ್ರೀವನು ಅರಮನೆಗೆ ಬಂದು ಆಡಳಿತ ನಡೆಸಲು ಆರಂಭಿಸಿದನು.ವಾಲಿ ಸತ್ತನೆಂದು ಪ್ರಜೆಗಳಿಗೂ ಸಹ ದುಃಖವಾಯಿತು . ಆದರೆ ಒಂದು ದಿನ ವಾಲಿಯೂ ಕಿಷ್ಕಿಂದೆಗೆ ಬಂದಾಗ ಎಲ್ಲರಿಗೂ ಆಶ್ಚರ್ಯವಾಯಿತು .

 

 

ಸುಗ್ರೀವನು ಅಣ್ಣನಿಗೆ ವಂದಿಸಿ ರಾಜ್ಯವನ್ನು ಹಿಂತಿರುಗಿಸಿದನು. ನಾವೆಲ್ಲರೂ ನಿನ್ನ ಸೇವಕರು ಎಂದನು. ಆದರೆ ವಾಲಿಯು ತೃಪ್ತನಾಗದೇ ಈ ಸುಗ್ರೀವ ಮೋಸಗಾರ ಇವನನ್ನು ರಾಜ್ಯದಿಂದ ಓಡಿಸಬೇಕು ಎಂದನು. ಮಂತ್ರಿಗಳು ಸುಗ್ರೀವನ ಪರವಾಗಿ ಒಳ್ಳೆಯ ಮಾತನಾಡಿದರೂ ಸಹ ವಾಲಿಯೂ ಗಮನಿಸಲಿಲ್ಲ.
ವಾಲಿಯು ಗವಿಯ ಬಾಗಿಲಿಗೆ ಬಂಡೆಗಲ್ಲನ್ನು ಇಟ್ಟಿದ್ದು ಸುಗ್ರೀವನ ತಪ್ಪೆಂದು ವಾದಿಸಿದನು. ಒಂದು ವರ್ಷದವರೆಗೆ ಕತ್ತಲ ಗುಹೆಯಲ್ಲಿ ಮಾಯಾವಿಯನ್ನು ಹುಡುಕಿ ಕೊಂದು ಬಂದರೆ ಹೊರಗೆ ಬರಬಾರದೆಂದು ಬಾಗಿಲನ್ನೇ ಮುಚ್ಚಿದ್ದಾನೆ ಎಂದು ಆಪಾದಿಸಿದನು. ಆದರೆ ಸುಗ್ರೀವನು ಈ ರೀತಿ ಹೇಳಿದನು. ರಾಕ್ಷಸನ ಆರ್ಭಟ ಕೇಳಿತು. ರಕ್ತದ ಹರಿವು ಕಂಡು ನೀನೇ ಸತ್ತಿರಬಹುದೆಂದು ತಿಳಿದೆ. ರಾಕ್ಷಸನು ಹೊರಗೆ ಬರದಿರಲೆಂದು ಬಾಗಿಲನ್ನು ಮುಚ್ಚಿದ್ದೆ ಎಂದು ಹೇಳಿದನು.

ಆದರೂ ವಾಲಿಯು ಬಿಡದೆ ಸುಗ್ರೀವನ ಹೆಂಡತಿಯಾದರೂ ರುಮೆಯನ್ನು ಸಹ ಅರಮನೆಗೆ ಒಯ್ದನು. ಸುಗ್ರೀವನನ್ನು ರಾಜ್ಯದಿಂದ ಓಡಿಸಿದನು. ವಾಲಿಯನ್ನು ಕಂಡರೆ ಹೆದರುತ್ತಿದ್ದ ಸುಗ್ರೀವನು ರಾಮಲಕ್ಷ್ಮಣರು ಯಾರೆಂದು ತಿಳಿಯುವುದಕ್ಕಾಗಿ ಹನುಮಂತನನ್ನು ಕಳಿಸಿದನು.

ಹನುಮಂತನು ವಾಯುದೇವ ಮತ್ತು ಅಂಜನಾದೇವಿಯರ ಪುತ್ರ . ಸೂರ್ಯ ಲೋಕಕ್ಕೆ ಹಾರಿದವನು. ಇಂದ್ರನು ವಜ್ರಾಯುಧದಿಂದ ಹೊಡೆದಾಗ ಕೆನ್ನೆಯ ಮೇಲೆ ಉಬ್ಬು ಉಂಟಾಯಿತು. ಅದಕ್ಕಾಗಿ ‘ಹನು’ ಮಂತ ಎಂದು ಕರೆಯುವರು. ವಾಯುದೇವನ ವರದಿಂದಾಗಿ ಹನುಮಂತ ಚಿರಂಜೀವಿಯಾದನು.ಸುಗ್ರೀವನ ಮಂತ್ರಿ ಸಹ ಆಗಿದ್ದು ಬಲಶಾಲಿಯಾಗಿದ್ದನು. ದೂರಕ್ಕೆ ಜಿಗಿಯ ಬಲ್ಲವನಾಗಿದ್ದನು.
ಹನುಮಂತ ರಾಮಲಕ್ಷ್ಮಣರನ್ನು ಕಂಡು ನೀವು ಯಾರು ? ಎಲ್ಲಿಗೆ ಹೋಗುವಿರಿ ? ನೀವು ಇಲ್ಲಿಗೆ ಬಂದಿರುವುದೇಕೆ ? ರಾಜಕುಮಾರರಂತೆ ಕಾಣುವಿರಿ . ದಯವಿಟ್ಟು ಹೇಳಿರಿ ಎಂದು ಬ್ರಹ್ಮಚಾರಿ ರೂಪದಿಂದ ಬಂದು ಕೇಳಿದನು. ರಾಮಲಕ್ಷ್ಮಣರು ಹನುಮಂತನ ವಿನಯಕ್ಕೆ ಬೆರಗಾಗಿರುವಾಗ ರಾಮನು ಹನುಮಂತನ ಪಾಂಡಿತ್ಯ, ಮಾತಿನ ಸೊಗಸಿನ ಬಗೆಗೆ ಲಕ್ಷ್ಮಣನಿಗೆ ವಿವರಿಸಿದನು . ರಾಮ-ಲಕ್ಷ್ಮಣರ ಪರಿಚಯ ಪಡೆದ ಹನುಮಂತನು ಸುಗ್ರೀವನಿಗೆ ಸಹಾಯವಾಗಬಹುದೆಂದು ಭಾವಿಸಿದನು. ಸುಗ್ರೀವನು ಇದ್ದ ಋಷ್ಯಮೂಕ ಪರ್ವತಕ್ಕೆ ಕರೆದೊಯ್ದು ಕಿಷ್ಕಿಂದೆಯ ರಾಜ ಕಪಿವೀರ ವಾಲಿಯ ಬಗೆಗೆ ಸಹ ತಿಳಿಸಿದನು.ಹೀಗೆ ರಾಮ ಲಕ್ಷ್ಮಣನಿಗೆ ಸುಗ್ರೀವ ಹನುಮಂತರು ಸ್ನೇಹಿತರಾದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top