ಸಮಾಚಾರ

ಅತಿಯಾದ ರೋಮ್ಯಾನ್ಸ್ ಮಾಡಿದ ರಶ್ಮಿಕಾ ವಿರುದ್ಧ ರೊಚ್ಚಿಗೆದ್ದ ನೆಟ್ಟಿಗರು

ಕಿರಿಕ್ ಪಾರ್ಟಿ ಎಂಬ ‘ಕನ್ನಡ’ ಚಿತ್ರದ ಮೂಲಕ ಹೆಸರು ಮತ್ತು ಯಶಸ್ಸಿನೊಂದಿಗೇ ಎಲ್ಲರೂ ಅಚ್ಚರಿಯಾಗುವಂತೆ ಅವಕಾಶಗಳನ್ನು ಬಾಚಿಕೊಳ್ಳುತ್ತಿರುವಾಕೆ ನಟಿ ರಶ್ಮಿಕಾ ಮಂದಣ್ಣ. ರಶ್ಮಿಕಾ ಈಗ ಕನ್ನಡಕ್ಕಿಂತ ತೆಲುಗಿನಲ್ಲೆ ಮುಳುಗಿಹೋಗಿದ್ದಾಳೆ. ಈಗಾಗಲೇ ಎರಡು ತೆಲುಗು ಚಿತ್ರಗಳಲ್ಲಿ ನಟಿಸಿರುವ ಕಿರಿಕ್ ಹುಡುಗಿ ಮತ್ತೊಂದೊಷ್ಟು ತೆಲುಗು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾಳಂತೆ.

ಕೆಲವು ದಿನಗಳ ಹಿಂದೆ ರಶ್ಮಿಕಾ ಮಂದಣ್ಣ ಅಭಿನಯದ ಗೀತಾ ಗೋವಿಂದಂ ಸಿನಿಮಾ ಪೋಸ್ಟರ್ ಒಂದನ್ನ ಬಿಡುಗಡೆ ಮಾಡಿದ್ದು, ಈ ಪೋಸ್ಟರ್ ನಲ್ಲಿ ವಿಜಯ್ ದೇವರಕೊಂಡ ಬೆನ್ನಿನ ಮೇಲೆ ರಶ್ಮಿಕಾ ಕುಳಿತುಕೊಂಡಿದ್ದು ಇದಕ್ಕೆ ಅಭಿಮಾನಿಗಳು ಟ್ವೀಟ್ ಮಾಡುವ ಮೂಲಕ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

 

 

ತಾವು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಇದೀಗ ಬೇರೆ ನಟನ ಜೊತೆ ಅತಿಯಾದ ಮಾಡುವುದು ಸರಿನಾ, ರಕ್ಷಿತ್ ಶೆಟ್ಟಿ ಯಾವತ್ತೂ ಅತಿಯಾದ ರೋಮ್ಯಾನ್ಸ್ ಮಾಡಲೇ ಇಲ್ಲ ನೀವು ಹೇಗೆ ಹೀಗೆಲ್ಲ ಮಾಡ್ತೀರಾ ಎಂದು ಎಂದು ಜನರು ಪ್ರಶ್ನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ರಕ್ಷಿತ್ ಶೆಟ್ಟಿ ಕೊಟ್ಟಿರುವ ಸ್ವಾತಂತ್ಯವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದೀರಾ ಎಂದು ಜನರು ಹೇಳಿದ್ದಾರೆ, ಹೇಗೆಲ್ಲ ಟ್ವೀಟ್ ಮಾಡಿದವರಿಗೆ ಪ್ರತ್ಯುತ್ತರ ಕೊಟ್ಟಿದ್ದಾರೆ ರಶ್ಮಿಕಾ, ಮದುವೆಯಾಗಿದ್ದು ರೋಮ್ಯಾನ್ಸ್ ಮಾಡುವ ಹಿರೊಗಳನ್ನ ಇದೆ ಈರೀತಿ ಪ್ರಶ್ನೆ ಮಾಡುವ ತಾಕತ್ತು ನಿಮಗೆ ಇದೆಯಾ ಎಂದು ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ.

ಈ ಜನರೇ ಹಾಗೆ ಒಬ್ಬರು ಎತ್ತರಕ್ಕೆ ಬೆಳೆಯುತ್ತಿದ್ದಾರೆ ಅವರನ್ನೇ ಹೇಗಾದರೂ ಮಾಡಿ ಕೆಳಗೆ ಇಳಿಸಬೇಕು ಎಂದು ಅವರ ತೇಜೋವಧೆಯಲ್ಲಿ ತೊಡಗಿಕೊಳ್ಳುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top