ಅರೋಗ್ಯ

ಮಜ್ಜಿಗೆಯಲ್ಲಿ ಇದನ್ನು ಬೆರೆಸಿ ಕುಡಿಯೋದ್ರಿಂದ ದೇಹದ ಬೊಜ್ಜು ಬಹುಬೇಗ ಕರಗುತ್ತದೆ.

ಹೊಟ್ಟೆ ಕೊಬ್ಬು ಎಂಬುದು ತಮಷೆಯ ಮಾತಲ್ಲ.ಹೊಟ್ಟೆ ಕೊಬ್ಬು ನಮ್ಮ ದೇಹದ ಆಕೃತಿಯನ್ನು ವಿಕಾರ ಮಾಡುವುದಲ್ಲದೆ , ಅದು ಅನೇಕ ಅರೋಗ್ಯ ಸಮಸ್ಯೆಗಳನ್ನು ತಂದು ಕೊಡುತ್ತದೆ.ನಮ್ಮ ದೇಹದ ತೂಕ ಹಿಗ್ಗಿ ಹೊಟ್ಟೆಯ ಸುತ್ತಲಿನ ಕೊಬ್ಬು ಹೆಚ್ಚಾದರೆ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು, ಸಕ್ಕರೆ ಕಾಯಿಲೆ ಮತ್ತು ಕ್ಯಾನ್ಸೆರ್ ಬರುವ ಸಾಧ್ಯತೆ ತುಂಬ ಜಾಸ್ತಿ ಎಂದು ವೈದ್ಯರು ಹೇಳುತ್ತಾರೆ.ಆಹಾರ ಪದ್ದತಿಯನ್ನು ಬದಲಾಯಿಸುವ ಮೂಲಕ ಹೊಟ್ಟೆಯ ಸುತ್ತಲಿರುವ ಕೊಬ್ಬನ್ನು ಶೇ.70 ರಷ್ಟು ಕಡಿಮೆ ಮಾಡಬಹುದು.ಉಳಿದ ಶೇ.30 ರಷ್ಟನ್ನು ವ್ಯಾಯಾಮ ಮಾಡುವ ಮೂಲಕ ಕಡಿಮೆ ಮಾಡಿಕೊಳ್ಳಬಹುದು.
ಮಜ್ಜಿಗೆಯಿಂದ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಬಹುದು.

ಈಗ ನಾವು ಹೇಳುವ ಉಪಾಯದಿಂದ ಹೊಟ್ಟೆಯ ಕೊಬ್ಬು,ಎದೆಯಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ.ತೂಕ ಕಡಿಮೆಯಾಗಲು ಸಹ ಸಹಕಾರಿಯಾಗಿದೆ.
ಇದಕ್ಕೆ ಬೇಕಾಗುವ ಪದಾರ್ಥಗಳು :
ಒಂದು ಗ್ಲಾಸ್- ಕೆನೆಯಿಲ್ಲದ ಮಜ್ಜಿಗೆ
ಓಂ ಕಾಳಿನ ಪುಡಿ- ಅರ್ಧ ಸ್ಪೂನ್
ಶುಂಠಿ- 2 ಸ್ಪೂನ್
ಕರಿಬೇವು – 6 ಎಲೆಗಳು

 

 

ಮಾಡುವ ವಿಧಾನ:
ಮೊದಲಿಗೆ ಒಂದು ಗ್ಲಾಸ್ ಕೆನೆಯಿಲ್ಲದ ಮಜ್ಜಿಗೆಯನ್ನು ತೆಗೆದುಕೊಂಡು ಅದಕ್ಕೆ ಶುಂಠಿ ಪೇಸ್ಟ್ ಅನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು
ನಂತರ ಓಂ ಕಾಳಿನ ಪುಡಿ ಮತ್ತು ಕರಿಬೇವನ್ನು ಬೆರಸಿ ನಿಮಗೆ ಬೇಕಾದಷ್ಟು ನೀರನ್ನು ಮಿಶ್ರಣ ಮಾಡುತ್ತ ಆಮೇಲೆ ಆ ಮಜ್ಜಿಗೆಯನ್ನು ಕುಡಿಯಬೇಕು. ನಿಮಗೆ ರುಚಿ ಬೇಕು ಎನಿಸಿದರೆ ಸ್ವಲ್ಪ ಉಪ್ಪನ್ನು ಬೆರೆಸಿಕೊಳ್ಳಿ.ಬೆಳಗ್ಗೆ ಉಪಹಾರ ಅದ ನಂತರ ಈ ಮಿಶ್ರಣ ವನ್ನು ಒಂದು ಗ್ಲಾಸ್ ಸೇವಿಸಬೇಕು.ಮತ್ತೆ ಸಾಯಂಕಾಲಕ್ಸ ಸಮಯದಲ್ಲಿ ಇನ್ನೊಂದು ಗ್ಲಾಸ್ ಮಿಶ್ರಣವನ್ನು ಕುಡಿಯಬೇಕು.

ಹೇಗೆ ಕ್ರಮವಾಗಿ ಸೇವಿಸುತ್ತಾ ಬಂದರೆ ಕೊಬ್ಬು ಶೀಘ್ರವಾಗಿ ಕಡಿಮೆಯಾಗುತ್ತ ಬರುತ್ತದೆ.
ಮಜ್ಜಿಗೆ, ಓಂಕಾಳು, ಶುಂಠಿ, ಕರಿಬೇವು ಇದರಲ್ಲಿ ಕೊಲೆಸ್ಟ್ರಲ್ ಅನ್ನು ಕಡಿಮೆ ಮಾಡುವ ಗುಣವಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top