ಸಮಾಚಾರ

ಶ್ರಾವಣ ಮಾಸದಲ್ಲಿ ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಮಾಡ್ಬೇಡಿ .

ಹಿಂದೂ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ವಿಶಿಷ್ಟವಾದ ಸ್ಥಾನವಿದೆ. ಭಾರತೀಯರಾದ ನಮಗೆ ವರ್ಷಪೂರ್ತಿಯಾಗಿ ಹಬ್ಬ ತುಂಬಿ. ಮಾಸಗಳ ರಾಜ ‘ಶ್ರಾವಣ ಮಾಸ’ದಲ್ಲಿ ನಡೆಯುವ ಧರ್ಮಾಚರಣೆಯ ವಿಧಿ-ವಿಧಾನಗಳಾದ ಜಪ, ತಪ, ವ್ರತ, ನಿಯಮ, ಪೂಜೆಯ ಅನುಷ್ಠಾನ, ಪುರಾಣ ಶಾಸ್ತ್ರ, ಪ್ರವಚನ, ಭಜನೆ, ಕೀರ್ತನೆ, ಸತ್ಸಂಗ್, ಪುಣ್ಯ-ಕ್ಷೇತ್ರಗಳ ದರ್ಶನ, ಯಜ್ಞ,ಯಾಗ,ಹೋಮ-ಹವನ ಮುಂತಾದವುಗಳಿಗೆ ಶ್ರಾವಣ ಮಾಸದಲ್ಲಿ ಯೆಥೇಚ್ಛವಾಗಿ ಕಾಣಸಿಗುತ್ತವೆ. ಶ್ರಾವಣ ಮಾಸದಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕು. ಶ್ರಾವಣ ಮಾಸದಲ್ಲಿ ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಮಾಡಬಾರದು.

 

ಮೌಂಸಾಹಾರ ನಿಷಿದ್ಧ:

ಶ್ರಾವಣ ಮಾಸದಲ್ಲಿ ಮೌಂಸಾಹಾರ ಸೇವನೆ ಮಾಡಬಾರದು ಎಂದು ಹೇಳಲಾಗುತ್ತದೆ. ಮೌಂಸಾಹಾರ ಸೇವನೆ ಮಾಡುವುದರಿಂದ ನಕಾರಾತ್ಮಕ ಗುಣಗಳು ದೇಹದ ಮೇಲೆ ಪರಿಣಾಮ ಬೀರುತ್ತವೆ ಎನ್ನಲಾಗಿದೆ

 

 

 

ಬದನೆಕಾಯಿ:

ಶ್ರಾವಣ ಮಾಸದಲ್ಲಿ ಬದನೆಕಾಯಿ ಸೇವನೆ ಮಾಡಬಾರದು, ಶ್ರಾವಣ ಮಾಸದಲ್ಲಿ ಬದನೆಕಾಯಿ ತಿನ್ನುವುದರಿಂದ ದುರಾದೃಷ್ಟ ಉಂಟಾಗುವುದು ಎನ್ನಲಾಗುತ್ತದೆ

 

ಹಸಿ ಹಾಲು:

ಶ್ರಾವಣ ಮಾಸದಲ್ಲಿ ಹಸಿ ಹಾಲು ಸೇವಿಸಬೇಡಿ. ಕಾಯಿಸಿ ಆರಿಸಿದ ಹಾಲನ್ನೇ ಬಳಸಿ. ಶಿವನ ಪೂಜೆಗೂ ಕೂಡ ಹಸಿ ಹಾಲು ಬಳಸಬೇಡಿ.

 

ಕಪ್ಪು ಬಣ್ಣದ ಬಟ್ಟೆ ಧರಿಸಬೇಡಿ
ಶ್ರಾವಣ ಮಾಸದಲ್ಲಿ ಆದಷ್ಟು ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸುವುದನ್ನು ತಡೆಗಟ್ಟಿ ಅಥವಾ ಧರಿಸದೇ ಇರುವುದು ಇನ್ನೂ ಉತ್ತಮ. ತೆಳು ಬಣ್ಣದ ಬಟ್ಟೆಗಳು ಮತ್ತು ಧನಾತ್ಮಕ ಬಣ್ಣಗಳಾದ ಹಸಿರು,ಬಿಳಿ ,ಹಳದಿ ಬಣ್ಣಗಳ ಬಟ್ಟೆಯನ್ನು ಧರಿಸುವುದು ಉತ್ತಮ.ಈ ಶ್ರಾವಣ ಪೂರ್ತಿ ಇದೆ ರೀತಿಯ ಬಟ್ಟೆಗಳನ್ನು ಧರಿಸಿ ಹಾಗೆ ಪ್ರತಿದಿನ ದೇವಸ್ಥಾನಕ್ಕೂ ಮರೆಯದೇ ಹೋಗಿ ದೇವರ ದರ್ಶನ ಮಾದುವುದು ಇನ್ನೂ ಒಳ್ಳೆಯದು.

 

ಕೆಟ್ಟ ಆಲೋಚನೆಯಿಂದ ದೂರವಿರಿ:

ಯಾರಿಗೂ ಕೆಟ್ಟದನ್ನು ಬಯಸಬೇಡಿ, ಇನ್ನೊಬ್ಬರಿಗೆ ಕೆಡಕು ಸಂಭವಿಸಬಹುದಾದ ಕಾರ್ಯದಿಂದ ದೂರವಿರಿ

 

ಮನೆಯನ್ನು ಸ್ವಚ್ಛ ಇಟ್ಟುಕೊಳ್ಳಿ:

ಶ್ರಾವಣ ಮಾಸದಲ್ಲಿ ಪ್ರತಿದಿನ ದೇವಸ್ಥಾನಕ್ಕೆ ಹೋದರು ಸಹ ಮನೆಯಲ್ಲಿ ಚಿಕ್ಕ ಪೂಜೆಯನ್ನಾದರು ಮಾಡಲೇಬೇಕು.ಅದಕ್ಕೂ ಮುಂಚೆ ಸಂಪೂರ್ಣವಾಗಿ ನಿಮ್ಮ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top