ಹೆಚ್ಚಿನ

ಶ್ರಾವಣ ಮಾಸದಲ್ಲಿ 12 ರಾಶಿಯವರು ಯಾವ ರೀತಿಯಲ್ಲಿ ಶಿವನಿಗೆ ಪೂಜೆಮಾಡಿದ್ರೆ ಒಳ್ಳೇದಾಗುತ್ತೆ ಗೊತ್ತಾ?

ಶಿವನನ್ನು ಮೆಚ್ಚಿಸಿ ,ಪ್ರಸನ್ನ ಗೊಳಿಸಲು ವಿಶೇಷವಾಗಿ  ಶ್ರಾವಣ ಮಾಸದಲ್ಲಿ ನಿಮ್ಮ ರಾಶಿಯ ಆನುಸಾರ ಈ ರೀತಿಯಲ್ಲಿ ಪೂಜೆ ಮಾಡಬೇಕು.

ಜ್ಯೋತಿಶ್ಶಾಸ್ತ್ರದಲ್ಲಿ ಪರಿಹಾರ.

ಜ್ಯೋತಿಶ್ಶಾಸ್ತ್ರ ವಿಜ್ಞಾನದ ಪ್ರಕಾರ ಅನೇಕ ಪರಿಹಾರಗಳಿವೆ.ಎಲ್ಲಾ ಕಷ್ಟ, ದುಃಖ,ನೋವಿಗೂ ಒಂದಲ್ಲ ಒಂದು ಪರಿಹಾರ ಇದ್ದೆ ಇರುತ್ತದೆ.ಹಾಗೆಯೇ ಶ್ರಾವಣ ಮಾಸದಲ್ಲಿ ನಿಮ್ಮ ಹುಟ್ಟಿದ್ದ  ದಿನಾಂಕ ಮತ್ತು ಸಮಯವನ್ನು ನೋಡಿಕೊಂಡು ನಿಮ್ಮ  ರಾಶಿ ಯಾವುದೆಂದು ಸರಿಯಾಗಿ ಕಂಡುಕೊಳ್ಳಿ. ನಂತರ ಈ ರೀತಿ ಶಿವನಿಗೆ ಏನನ್ನು  ಅರ್ಪಿಸಿ ಪೂಜೆ ಮಾಡಿದರೆ ಪ್ರಸನ್ನನಾಗುತ್ತಾನೆ ಎಂದು ತಿಳಿದುಕೊಳ್ಳಿ. ಶಿವನು ಕರುಣಾಮಯಿ. ಅವನು ನಿಮ್ಮಿಂದ ಯಾವುದೇ ವಸ್ತುವನ್ನು ಅಪೇಕ್ಷಿಸುವುದಿಲ್ಲ.ಮನಃ ಪೂರ್ವಕವಾಗಿ ಶ್ರದ್ದೆ,ಭಕ್ತಿಯಿಂದ ಧ್ಯಾನ, ಪೂಜೆ, ಪ್ರಾರ್ಥನೆ ಮಾಡಿದರೆ ಸಾಕು.

ನಿಮ್ಮ ರಾಶಿಗೆ ಅನುಸಾರವಾಗಿ  ಶ್ರಾವಣ ಮಾಸದಲ್ಲಿ  ಹೇಗೆ  ? ಏನೇನನ್ನು ? ಅರ್ಪಿಸಿ ಪೂಜೆ ಮಾಡಬೇಕು ?

 

 

 

ಮೇಷ

ಮೇಷ ರಾಶಿಯವರು ಶ್ರಾವಣ ಮಾಸದಲ್ಲಿ ಶುದ್ಧ ಹಸುವಿನ ಹಾಲನ್ನು ಹಾಗೆಯೇ(ಕಾಯಿಸಬಾರದು) ಮತ್ತು ಮೊಸರನ್ನು ಸಮರ್ಪಿಸಬೇಕು.ಇದರ ಜೊತೆಗೆ ದತೂರ(ಮುಳ್ಳು ಸೇಬು)ಇದನ್ನು  ಸಹ ಅರ್ಪಿಸಬೇಕು . ಸಾಧ್ಯವಾದರೆ ಅಭಿಷೇಕ ಮಾಡಿಸಿ ಕೊನೆಗೆ ಕರ್ಪುರದ ಆರತಿಯನ್ನು ಪೂಜೆ ಮಾಡಿಸಿದರೆ  ಪೂಜೆಯು ಸಂಪೂರ್ಣವಾಗುತ್ತದೆ.

ವೃಷಭ

ವೃಷಭ ರಾಶಿಯವರು ಶಿವಲಿಂಗಕ್ಕೆ ಕಬ್ಬಿನ ರಸದಿಂದ ಅಭಿಷೇಕ ಮಾಡಿಸಬೇಕು. ಪರಿಮಳ ಯುಕ್ತ ಮುರುಘದ ಹೂವನ್ನು ಅರ್ಪಿಸಿ.ಹಾಲಿನಿಂದ ಮಾಡಿದ ಯಾವುದಾದರೂ ಒಂದು ಸಿಹಿ ಪದಾರ್ಥವನ್ನು ನೈವೇದ್ಯವಾಗಿ ಅರ್ಪಿಸಿ ನಂತರ ಕರ್ಪುರದ ಆರತಿಯನ್ನು ಬೆಳಗಿ.

ಮಿಥುನ

ಮಿಥುನ ರಾಶಿಯವರು ಶಿವಲಿಂಗಕ್ಕೆ ಶ್ರೀಗಂಧ, ಚಂದನ, ಕುಂಕುಮ, ಅರ್ಪಿಸಿ ಸುಗಂಧಬರಿತ, ಪರಿಮಳ ಯುಕ್ತ ಉದುಬತ್ತಿಯನ್ನು ಬೆಳಗುವುದರ ಮೂಲಕ ಶಿವನನ್ನು ಪ್ರಸನ್ನ ಗೊಳಿಸಬಹುದು.

ಕಟಕ

ಕಟಕ ರಾಶಿಯವರು ಶಿವಲಿಂಗಕ್ಕೆ ಅಷ್ಟ ಗಂಧ ಮತ್ತು ಶ್ರೀಗಂಧ ಅರ್ಪಿಸಿ, ಶುದ್ಧ ಗೋದಿಯಿಂದ ಮಾಡಿದ ಚಪಾತಿಯನ್ನು ನೈವೇದ್ಯವಾಗಿ ಅರ್ಪಿಸಿ.

ಸಿಂಹ

ಸಿಂಹ ರಾಶಿಯವರು ಹಣ್ಣುಗಳಿಂದ ತಯಾರಿಸಿದ ಜ್ಯೂಸ್ ಅಥವಾ ಹಣ್ಣಿನ ರಸಕ್ಕೆ ನೀರು ಮತ್ತು ಸಕ್ಕರೆ ಬೆರೆಸಿ ಶಿವನಿಗೆ ಅರ್ಪಿಸಿ.ಕಿರೀಟ ಹೂವು ಅಂದರೆ ಬಿಳಿ ಎಕ್ಕದ   ಹೂವನ್ನು,ಸಿಹಿ ಪದಾರ್ಥವನ್ನು ನೈವೇಧ್ಯವಾಗಿ ಅರ್ಪಿಸಬೇಕು.

ಕನ್ಯಾ

ಕನ್ಯಾ ರಾಶಿಯವರು ಬಿಲ್ವ ಪತ್ರೆಯನ್ನು ಅರ್ಪಿಸಿ.ಶಿವನಿಗೆ ಬಿಲ್ವ ಪತ್ರೆ ಎಂದರೆ ಶ್ರೇಷ್ಠ.ಇದರ ಜೊತೆ ಬಿಳಿ ಎಕ್ಕದ ಹೂವು,ದತೂರ (ಮುಳ್ಳು ಸೇಬು),ಮತ್ತು ಗಾಂಜಾದ ಎಲೆಗಳನ್ನು ಸಮರ್ಪಿಸಿ.ಕೊನೆಗೆ ಕರ್ಪುರದ ಆರತಿಯನ್ನು ಮಾಡಬೇಕು.

ತುಲಾ

ತುಲಾ ರಾಶಿಯವರು ಶುದ್ಧವಾದ ನೀರಿನಲ್ಲಿ ವಿವಿಧ ರೀತಿಯ ಹೂವುಗಳನ್ನು   ಮಿಶ್ರಣ ಮಾಡಿ ಸಮರ್ಪಿಸಿ.ಬಿಲ್ವ ಪತ್ರೆ, ಮುರುಘದ ಹೂವುಗಳು ,ಗುಲಾಭಿ,ಬಿಳಿ ಅಕ್ಕಿ ಮತ್ತು ಶ್ರೀಗಂಧವನ್ನು ಅರ್ಪಿಸಿ.

ವೃಶ್ಚಿಕ

ವೃಶ್ಚಿಕ ರಾಶಿಯವರು ಶಿವಲಿಂಗಕ್ಕೆ ಗಂಗಾಜಲದಿಂದ ಸ್ನಾನ ಅಥವಾ ಅಭಿಷೇಕವನ್ನು ಪ್ರಾರಂಭಿಸಿ.ನಂತರ ಬೆಣ್ಣೆ,ದೇಸಿ ತುಪ್ಪ,ಜೇನು ತುಪ್ಪದಿಂದ ಅಭಿಷೇಕ ಮಾಡಿ ಕೊನೆಗೆ ನೀರಿನಿಂದ ಶಿವಲಿಂಗವನ್ನು  ಶುದ್ದೀಕರಿಸಿ ನಂತರ ಆರತಿ ಬೆಳಗಬೇಕು.

ಧನಸ್ಸು

ಧನಸ್ಸು ರಾಶಿಯವರು ಒಣ ಹಣ್ಣುಗಳನ್ನು (ಖರ್ಜುರ,ದ್ರಾಕ್ಷಿ,ಬಾದಾಮಿ,ಗೋಡಂಭಿ) ಅರ್ಪಿಸಬೇಕು. ಹೂವುಗಳಲ್ಲಿ ಗುಲಾಭಿ,ಬಿಲ್ವಪತ್ರೆ ಇನ್ನೂ ಮುಂತಾದುವುಗಳನ್ನು ಅರ್ಪಿಸಿದರೆ ಇವು ನಿಮ್ಮ ರಾಶಿಯವರಿಗೆ ಮಂಗಳಕರ ಮತ್ತು ಆರತಿ ಬೆಳಗಿಸಿ ಪೂಜೆಯನ್ನು ಸಂಪೂರ್ಣಗೊಳಿಸಿ.

ಮಕರ

ಮಕರ ರಾಶಿಯವರು ಶಿವನಿಗೆ ಗೋಧಿಯನ್ನು ಅರ್ಪಿಸಿ ಪೂಜೆ ಸಲ್ಲಿಸಿ ನಂತರ ಗೋಧಿಯನ್ನು ಶಿವನ ದೇವಸ್ಥಾನಕ್ಕೆ ಧಾನವಾಗಿ ಕೊಡಬೇಕು.ಹೀಗೆ ಮಾಡಿದರೆ ನಿಮ್ಮ ಜೀವನದಲ್ಲಿರುವ ತೊಂದರೆ,ಸಂಕಟ,ನೋವು,ಸರ್ಪ ದೋಷವನ್ನು ಸಹ ಕಡಿಮೆ ಮಾಡುತ್ತದೆ.

ಕುಂಭ

ಕುಂಭ ರಾಶಿಯವರು ಕರಿ ಎಳ್ಳನ್ನು ಗುಪ್ತವಾಗಿರುವ (ಯಾರು ನೋಡಬಾರದು) ಶಿವಲಿಂಗಕ್ಕೆ ಅರ್ಪಿಸಬೇಕು. ಮೊದಲು ಶುದ್ಧ ನೀರು ಅಥವಾ ಗಂಗಾಜಲದಿಂದ ಸ್ನಾನ ಅಂದರೆ ಅಭಿಷೇಕ ಮಾಡಿ ನಂತರ ಕರಿ ಎಳ್ಳನ್ನು ಭಕ್ತಿಯಿಂದ ಅರ್ಪಿಸಿ ಪೂಜೆ ಮಾಡಿ. ಇದರಿಂದ ಒಳ್ಳೆಯ ಫಲಿತಾಂಶವನ್ನು ಕಾಣಬಹುದು.

ಮೀನ

ಮೀನ ರಾಶಿಯವರು ಶಿವಲಿಂಗವನ್ನು ಅರಳಿ ಮರದ ಕೆಳಗೆ ಸ್ಥಾಪಿಸಿ ಅಲ್ಲಿಯೇ ಬಿಲ್ವಪತ್ರೆಯನ್ನು ಸಮರ್ಪಿಸಿ ಪೂಜೆ ಮಾಡಿ. “ಓಂ ನಮಃ ಶಿವಾಯ” ಎನ್ನುವ ಪಂಚಾಕ್ಷರಿ ಮಂತ್ರವನ್ನು ಜಪಿಸುತ್ತಾ ಪೂಜೆ ಮಾಡಿ, ಆರತಿಯನ್ನು ಬೆಳಗಿ ಪೂಜೆ ಸಂಪೂರ್ಣಗೊಳಿಸಿ.

ಹೀಗೆ ನಿಮ್ಮ ರಾಶಿಗೆ ಅನುಗುಣವಾಗಿ,ಪೂಜೆ, ಪ್ರಾರ್ಥನೆ, ಹೂವು, ಹಣ್ಣು,  ನೈವೇದ್ಯವನ್ನು ಅರ್ಪಿಸಿ ನಿಮಗೆ ಇರುವ ತೊಂದರೆಗಳಿಂದ ಮುಕ್ತಿ ಒಂದಬಹುದು.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top