ಸಮಾಚಾರ

ಭಾವಿ ಪತಿಯ ಜೊತೆಯಲ್ಲಿ ತೆರೆ ಹಂಚಿಕೊಂಡ ಶ್ರುತಿ ಹರಿಹರನ್.

ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿಯಾಗಿರುವ ಶ್ರುತಿ ಹರಿಹರನ್ ಅವರು ತಮ್ಮ ಅಮೋಘ ಅಭಿನಯದ ಮೂಲಕ ಖ್ಯಾತಿ ಪಡೆದಿದ್ದಾರೆ.

ಶ್ರುತಿ ಹರಿಹರನ್ ಕೆಲವೇ ತಿಂಗಳಲ್ಲಿ ಮದುವೆ ಅಗಲಿದ್ದಾರೆ ಎಂದು ತಿಳಿದು ಬಂದಿದೆ. ಶ್ರುತಿ ಹರಿಹರನ್ ಮನಸ್ಸು ಕದ್ದಿರುವ ಹುಡುಗನ ಹೆಸರು ರಾಮ್ ಕುಮಾರ್. ಶ್ರುತಿ ಹಾಗು ರಾಮ್ ಕುಮಾರ್ ಏಳು ವರ್ಷದಿಂದ ಪ್ರೀತಿ ಮಾಡುತ್ತಿದ್ದು. ಈ ಇಬ್ಬರು ಡ್ಯಾನ್ಸ್ ಕ್ಲಾಸ್ ಹೋಗುವಾಗಿನಿಂದ ಪ್ರೀತಿ ಮಾಡುತ್ತಿದ್ದಾರಂತೆ. ಇನ್ನೊಂದು ಕುತೂಹಲಕಾರಿಯಾದ ವಿಷಯವೆಂದರೆ ಶ್ರುತಿ ಹರಿಹರನ್ ಅವರು ರಾಮ ಕುಮಾರ ಜೊತೆ ವಿಡಿಯೋ ಸಾಂಗ್ ನಲ್ಲಿ ಅಭಿನಯ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಅಂದಹಾಗೆ ಯಾವುದು ಆ ವಿಡಿಯೋ ಸಾಂಗ್ ಮುಂದೆ ಓದಿ.

 

 

ಕನ್ನಡ ನಟಿ ಶ್ರುತಿ ಹರಿಹರನ್ ತಮ್ಮ ಭಾವಿ ಪತಿ ರಾಮ್ ಕುಮಾರ್ ಜೊತೆಯಲ್ಲಿ ಮೊದಲ ಬಾರಿಗೆ ‘ಪ್ರೇಮ’ ಎಂಬ ವಿಡಿಯೋ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚೆನೈ ನ ಸುತ್ತಾ ಮುತ್ತ ‘ಪ್ರೇಮ’ ವಿಡಿಯೋ ಸಾಂಗ್ ಚಿತ್ರೀಕರಣ ಮಾಡಿದ್ದು, ತೆಲುಗು ಹಾಗೂ ಕನ್ನಡದಲ್ಲಿ ವಿಡಿಯೋ ಹಾಡು ಬಿಡುಗಡೆ ಆಗಲಿದೆ. ಸದ್ಯ ಚಿತ್ರೀಕರಣ ಮುಗಿಸಿರುವ ತಂಡ ಸೆಪ್ಟೆಂಬರ್ ನಲ್ಲಿ ಹಾಡು ರಿಲೀಸ್ ಆಗಲಿದೆ ಎಂದು ತಿಳಿದು ಬಂದಿದೆ.

ರಾಮ್ ಕುಮಾರ್ ಕೂಡ ನೃತ್ಯ ಕಲಾವಿದ ಹಾಗೂ ಅಂತರಾಷ್ಟ್ರಿಯ ಮಟ್ಟದಲ್ಲಿ ನೃತ್ಯ ನಿರ್ದೇಶಕರಾಗಿ ಹೆಸರು ಮಾಡಿದ್ದಾರೆ.ಸದ್ಯ ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಶ್ರುತಿ ಹರಿಹರನ್ ಮದುವೇ ಯಾವಾಗ ಅಂತ ಇನ್ನು ನಿರ್ಧಾರ ಮಾಡಿಲ್ಲ ಎನ್ನಲಾಗಿದೆ. ಸಿನಿಮಾ ರಂಗದವರ ಜೊತೆಯೂ ಉತ್ತಮ ಬಾಂದವ್ಯ ಬೆಳೆಸಿಕೊಂಡಿರುವ ರಾಮ್ ಕುಮಾರ್ ಇದೇ ಮೊದಲ ಬಾರಿಗೆ ತಮ್ಮ ಭಾವಿ ಪತ್ನಿಯೊಂದಿಗೆ ಜೊತೆ ವಿಡಿಯೋ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top