ಮನೋರಂಜನೆ

ಮಗನ ಹುಟ್ಟುಹಬ್ಬಕ್ಕೆ ಕಣ್ಣೀರು ತರಿಸುವ ಪೋಸ್ಟ್ ಪ್ರಕಟಿಸಿದ ಕ್ಯಾನ್ಸರ್ ಪೀಡಿತ ನಟಿ ಸೋನಾಲಿ ಬೇಂದ್ರೆ.

ಕನ್ನಡದ ಪ್ರೀತ್ಸೇ ಚಿತ್ರದಲ್ಲಿ ನಾಯಕಿಯಾಗಿದ್ದ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ “ಹೈ ಗ್ರೇಡ್” ಕ್ಯಾನ್ಸರ್‌ನಿಂದ ಬಳಲುತ್ತಿರುವುದಾಗಿ ಸ್ವತಃ ಅವರೇ ಬಹಿರಂಗಪಡಿಸಿ ವಾರಗಳೇ ಕಳೆದಿವೆ. ಈಗಾಗಲೇ ನ್ಯೂಯಾರ್ಕ್​ನಲ್ಲಿ ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿಯೂ ಹೇಳಿಕೊಂಡಿದ್ದ ಆನಂತರ ಕ್ಯಾನ್ಸರ್ ನಿಂದಾಗಿ ತಮ್ಮ ಕೂದಲಿಗೆ ಕತ್ತರಿ ಹಾಕಿಸಿದ್ದು, ತಮ್ಮ ಡಯಟ್ ಅಂತಹ ವಿಚಾರಗಳನ್ನು ಅಭಿಮಾನಿಗಳ ಜೊತೆಯಲ್ಲಿ ಹಂಚಿಕೊಳ್ಳುತ್ತಿದ್ದರು. ಈಗ ಮತ್ತೊಂದು ಪೋಸ್ಟ್​ ಮಾಡುವ ಮೂಲಕ ಅಭಿಮಾನಿಗಳ ಕಣ್ಣಾಲಿಗಳನ್ನು ತೇವಗೊಳಿಸಿದ್ದಾರೆ..

 

 

ಶನಿವಾರ ಅವರ ಮಗ ರಣವೀರ್ 13ನೇ ವರ್ಷಕ್ಕೆ ಕಾಲಿಟ್ಟಿದ್ದಾನೆ. ಸೋನಾಲಿ ಬೇಂದ್ರೆ ಪ್ರಸ್ತುತ ನ್ಯೂಯಾರ್ಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರೋದ್ರಿಂದ ಭಾರತದಲ್ಲಿರುವ ತನ್ನ ಮಗನ ಹುಟ್ಟುಹಬ್ಬಕ್ಕೆ ಹಾಜರಾಗಲು ಸಾಧ್ಯವಾಗದ ಕಾರಣ ಭಾವೋದ್ವೇಗದಿಂದ ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟ್ ವೊಂದನ್ನು ಪ್ರಕಟಿಸಿದ್ದಾರೆ. ಮೊದಲ ಸಲ ತನ್ನ ಮುದ್ದಿನ ಮಗನೊಂದಿಗೆ ಬರ್ತಡೇ ಆಚರಿಸಲು ಸಾಧ್ಯವಾಗುತ್ತಿಲ್ಲ ಎಂದಿರುವ ಸೋನಾಲಿ ವಿಶೇಷ ವೀಡಿಯೋವನ್ನೂ ಶೇರ್ ಮಾಡಿದ್ದಾರೆ.

Ranveeeeer! My sun, my moon, my stars, my sky… Okay, maybe I’m being a bit melodramatic, but your 13th birthday deserves this. Wow, you’re a teenager now… Will need some time to wrap my head around that fact. I can’t tell you enough how proud I am of you… Your wit, your humour, your strength, your kindness, and even your mischief. Happy happy birthday, my not-so-little one. It’s the first one that we’re not together… I miss you terribly. Lots and lots of love always and forever…. biiiiig hug! @rockbehl

A post shared by Sonali Bendre (@iamsonalibendre) on

“ರನ್ವೀರ್, ನನ್ನ ಮಗನೆ, ನನ್ನ ಸೂರ್ಯ, ಚಂದ್ರ, ನಕ್ಷತ್ರ, ಮತ್ತು ನನ್ನ ಆಕಾಶ… ನಾನು ಸ್ವಲ್ಪ ಹೆಚ್ಚು ಭಾವೋದ್ವೇಗಕ್ಕೆ ಒಳಗಾಗುತ್ತಿದ್ದೀನೇನೋ. ಆದರೂ ಸರಿ.. ನಿನ್ನ 13ನೇ ಹುಟ್ಟುಹಬ್ಬಕ್ಕೆ ಆ ಅರ್ಹತೆ ಇದೆ.. ನೀನು ಎಂದರೆ ನನಗೆ ಎಷ್ಟು ಹೆಮ್ಮೆ ಎಂಬುದನ್ನು ಪದಗಳಲ್ಲಿ ವರ್ಣಿಸುವುದಕ್ಕೆ ಆಗೋದಿಲ್ಲ. ನಿನ್ನ ಕೋಪ, ಹಾಸ್ಯ, ಅಕ್ಕರೆ, ಜೊತೆಗೆ ನಿನ್ನ ತುಂಟತನ ಎಲ್ಲವೂ ನನಗೆ ತುಂಬಾ ನನಗಿಷ್ಟ. ಹುಟ್ಟುಹಬ್ಬದ ಶುಭಾಶಯಗಳು ಮೈ ಡಿಯರ್ ಸನ್. ಇದೇ ಮೊದಲ ಬಾರಿಗೆ ನಿನ್ನ ಜನ್ಮದಿನದಂದು ನಾವಿಬ್ಬರೂ ಜೊತೆಯಲ್ಲಿಲ್ಲ. ಈ ಸಂದರ್ಭದಲ್ಲಿ ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ.” ಎಂದು ಸೋನಾಲಿ ಬರೆದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top