fbpx
ಸಮಾಚಾರ

ಲೀಕ್ ಆಗೇ ಬಿಡ್ತು ಇಷ್ಟು ದಿನ ಶಾರುಖ್ ಸುಪುತ್ರಿ ಮುಚ್ಚಿಟ್ಟ ಸಸ್ಪೆನ್ಸ್!

ಇತ್ತೀಚಿಗೆ ಬಾಲಿವುಡ್​ನ ಕಿಂಗ್​ಖಾನ್​ ಶಾರುಖ್​ ಖಾನ್​ ಸುದ್ದಿಯಾಗಿದ್ದಿಕ್ಕಿಂತ ಅವರ ಮಗಳೇ ಸುದ್ದಿಯಾಗಿದ್ದೇ ಹೆಚ್ಚು .ಇತ್ತೀಚಿಗೆ ಶಾರುಖ್ ಮಗಳಾದ ಸುಹಾನಾ ಖಾನ್‌ ಅವರ ಬಿಕಿನಿ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗಿದ್ದು ಭಾರಿ ಚರ್ಚೆಗೆ ಒಳಗಾಗಿತ್ತು. ತಾರೆಯರ ಮಕ್ಕಳಲ್ಲಿ ಅತಿ ಹೆಚ್ಚು ಖ್ಯಾತಿ ಪಡೆದಿರುವ ಸುಹಾನಾ ಖಾನ್​. ಇಲ್ಲಿಯವರೆಗೂ ಯಾವುದೇ ಸಿನಿಮಾ ಮಾಡದಿದ್ದರೂ, ಈಗಾಗಲೇ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಖತ್ ಹಿಪ್ ಕ್ರೀಟ್ ಮಾಡಿರುವ ಸುಹಾನಾ ಯಾವ ಬಾಲಿವುಡ್ ಎಂಟ್ರಿ ಮಾಡಲಿದ್ದಾರೆ ಎಂದೆಲ್ಲ ಬಿಟೌನ್ ಮಂದಿ ಮಾತನಾಡಿಕೊಳ್ಳುತ್ತಿದ್ದರು ಆದರೆ ಈ ಬಗ್ಗೆ ಶಾರುಖ್​ ಖಾನ್ ಆಗಲಿ ಅಥವಾ ಸುಹಾನಾ ಆಗಲಿ ಬಾಯಿ ಬಿಟ್ಟಿರಲಿಲ್ಲ. ಈಗ ಸುಹಾನಾ ಬಗ್ಗೆ ರಹಸ್ಯ ಮಾಹಿತಿ ಒಂದು ಹೊರಬಿದ್ದಿದೆ. ಏನದು ಮಾಹಿತಿ ತಿಳಿಯಲು ಮುಂದೆ ಓದಿ.


ಯಾವುದೇ ಸಿನಿಮಾ ಮಾಡದೇ ಕೂಡ ಮಿಂಚುತ್ತಿರುವ ಸುಹಾನಾ ಖಾನ್ ಬಾಲಿವುಡ್ ಎಂಟ್ರಿ ಕೊಡೋದು ಬಹುತೇಕ ಖಚಿತವಾಗಿದೆ ಎನ್ನಲಾಗಿದೆ. ಈಗಾಗಲೇ ಹಾಟ್ ಫೋಟೋ ಶೂಟ್ ಮಾಡಿಸಿ ನಟೀಮಣಿಯರ ಕಣ್ಣು ಕುಕ್ಕಿಸಿದ ಸುಹಾನ್ ಖಾನ್ ಕಲರ್​ಫುಲ್​ ಲೋಕಕ್ಕೆ ಎಂಟ್ರಿಕೊಡೋದು ಅಫೀಶಿಯಲ್ ಆಗಿದೆ ಎಂದು ತಿಳಿದು ಬಂದಿದೆ.

ಈ ಹಿಂದೆ ಶಾರುಖ್ ಖಾನ ಅವರು ಇನ್ನೂ ಸಮಯವಿದೆ. ಈಗಲೇ ಎಲ್ಲವನ್ನು ಹೇಳಲಾಗುವುದಿಲ್ಲ ಎಂಬ ಕ್ಲೂ ಕೊಟ್ಟು ಸುಮ್ಮನಾಗಿದ್ದರು. ಆದರೆ ಮಗಳಿಗೆ ಪೂರ್ಣ ತಯಾರಿ ಮಾಡಿಯೇ ಸಿನಿಮಾ ರಂಗಕ್ಕೆ ಇಳಿಸಲು ಶಾರುಖ್ ರೆಡಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಶಾರುಖ್ ಮಗಳ ಸಿನಿಮಾ ಮಾಡುವುದಕ್ಕೆ ನಿರ್ದೇಶಕರು ನಾ ಮುಂದು ನೀ ಮುಂದು ಎಂದು ದುಂಬಾಲು ಬಿದ್ದಿದ್ದಾರೆ ಎನ್ನಲಾಗಿದೆ. ಸುಹಾನಾ ಖಾನ್ ಅವರು ಅಭಿನಯಕ್ಕೆ ಬೇಕಾದ ಎಲ್ಲ ತಯಾರಿ ಮಾಡಿದ್ದಾರೆ ಎನ್ನಲಾಗಿದೆ. ಸುಹಾನ ರಂಗಭೂಮಿ ಕಲಾವಿದೆ ಆಗಿದ್ದು ಬಾಲ್ಯದಿಂದಲೇ ಹಲವು ನಾಟಕ ಪ್ರದರ್ಶನ ಮಾಡಿದ್ದಾರೆ. ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top