ಹೆಚ್ಚಿನ

ಶ್ರಾವಣ ಮಾಸದಲ್ಲಿ ಈ 10 ದೇವಸ್ಥಾನಕ್ಕೆ ಹೋದ್ರೆ ನಿಮ್ಮ ಎಲ್ಲ ಸಮಸ್ಯೆ ಪರಿಹಾರವಾಗುತ್ತೆ ಅನ್ನುತ್ತೆ ಶಾಸ್ತ್ರ

ಶ್ರಾವಣ ಮಾಸದಲ್ಲಿ ಈ ದೇವಸ್ಥಾನಗಳಿಗೆ ಹೋದ್ರೆ ತುಂಬಾ ಒಳ್ಳೇದಾಗುತ್ತೆ ಅನ್ನುತ್ತೆ ಶಾಸ್ತ್ರ

ಈ ಶ್ರಾವಣ ಮಾಸವನ್ನು ನಮ್ಮ ಭಾರತದಲ್ಲಿರುವ ಎಲ್ಲಾ ಪ್ರಮುಖ  ದೇವಸ್ಥಾನಗಳಲ್ಲಿಯೂ  ಸಹ  ಅತ್ಯಂತ ಸಡಗರ, ಸಂಭ್ರಮದಿಂದ ಮತ್ತು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಪ್ರತಿ ವರ್ಷ ಶ್ರಾವಣ ಬಂದಾಗಲೂ ಶ್ರಾವಣ ಬಹಳ ವಿಶೇಷವಾಗಿ ಭಕ್ತಿ ಭಾವದಿಂದ ಆಚರಿಸುತ್ತಾರೆ. ಅದರಲ್ಲೂ ಇದು ನಮ್ಮ ಹಿಂದೂ ಸಂಪ್ರದಾಯದವರಿಗೆ  ಮಾತ್ರ ಬಹಳ ವಿಶೇಷವಾದ  ಮತ್ತು ದೊಡ್ಡ ಹಬ್ಬವೇ ಆಗಿದೆ. ಇದಕ್ಕೆ ಅಷ್ಟೊಂದು ಪ್ರಾಮುಖ್ಯತೆಯನ್ನು ಅನಾದಿ ಕಾಲದಿಂದಲೂ ನಮ್ಮ ಪೂರ್ವಿಕರು ಸಹ ನೀಡುತ್ತಾ ಬಂದಿದ್ದಾರೆ.

ಇಂದು ನಾವು ನಮ್ಮ ಭಾರತದಲ್ಲಿರುವ ಪ್ರಮುಖ ದೇವಸ್ಥಾನಗಳಲ್ಲಿ ಯಾವ  ಯಾವ ದೇವಸ್ಥಾನಗಳು ಶ್ರಾವಣ ಮಾಸವನ್ನು ವಿಶೇಷವಾಗಿ ಅತ್ಯಂತ ಸಡಗರ ಮತ್ತು ಸಂಭ್ರಮದಿಂದ  ಆಚರಿಸುತ್ತಾರೆ ಎಂದು ತಿಳಿಯೋಣ.

 

 

 

ಮಂಡಿ
ಇದು ಹಿಮಾಚಲ ಪ್ರದೇಶದ ರಾಜ್ಯದಲ್ಲಿದೆ. ಮಂಡಿಯು  ಹಿಮಾಚಲ ಪ್ರದೇಶದಲ್ಲಿರುವ ಒಂದು ಪುಟ್ಟ ನಗರ.ಇದು ಸಾಂಪ್ರದಾಯಿಕವಾಗಿ  ಭೂತನಾಥ ದೇವಸ್ಥಾನವನ್ನು ಶಿವನ ಪ್ರತಿಮಾ ರೂಪವಾಗಿ   ಸ್ಥಾಪಿಸಲಾಗಿದೆ.ಇಲ್ಲಿ ಪ್ರತಿವರ್ಷವೂ  ಶ್ರಾವಣ ಮಾಸದಲ್ಲಿ ಬಹಳ ವಿಜೃಂಭಣೆಯಿಂದ ಜಾತ್ರಾ ಮಹೋತ್ಸವವು ನೆಡೆಯುತ್ತಿದೆ. ಕಳೆದ ಐದು ದಶಕಗಳಿಂದಲೂ ಸಹ  ಇಲ್ಲಿ ಜಾತ್ರೆ ನೆಡೆಯುತ್ತಿದೆ.

ಹರಿದ್ವಾರ,ಋಷಿಕೇಷ.
ಹರಿದ್ವಾರದಲ್ಲಿ ಜನಗಳು( ಭಾಕ್ತಾದಿಗಳು, ಮತ್ತು ಯಾತ್ರಿಕರು) ಹಿಂದೂಗಳ ಪವಿತ್ರವಾದ ನದಿ ಎಂದೇ ಹೇಳಲಾಗಿರುವ ಗಂಗಾ ನದಿಯಲ್ಲಿ ಮುಳುಗಿ ಎದ್ದು ಸ್ನಾನ ಮಾಡುತ್ತಾರೆ.
ಋಷಿಕೇಷದಲ್ಲಿ ನೀಲಕಂಟನಾದ ಆ ಮಹಾದೇವನಾದ ಶಿವನ ದೇವಸ್ಥಾನ ಇದೆ.ಶ್ರಾವಣ ಮಾಸದಲ್ಲಿ ಈ ದೇವಸ್ಥಾನವನ್ನು ಬಹಳ ಸುಂದರವಾಗಿ ಆಲಂಕೃತಗೊಳಿಸಲಾಗುತ್ತದೆ. ಈ ಸ್ಥಳದಲ್ಲಿ   ಶ್ರಾವಣ ಮಾಸದಲ್ಲಿ ಭಕ್ತಾದಿಗಳ ಜನಸಂಧಣಿಯೇ ಸೇರುತ್ತದೆ.

ವಾರಣಾಸಿ
ಶ್ರಾವಣ ಮಾಸದಲ್ಲಿ ವಾರಣಾಸಿಯಲ್ಲಿ  ಅತ್ಯಂತ ಸಂಭ್ರಮದಿಂದ ಹಬ್ಬವನ್ನು ಆಚರಿಸಲಾಗುತ್ತದೆ. ಎಲ್ಲಾ  ಹಬ್ಬಗಳನ್ನು  ಇಲ್ಲಿ ಸಮಾನವಾಗಿ ಆಚರಿಸುತ್ತಾರೆ. ಶ್ರೀ ತ್ರಿಬಂಡೇಶ್ವರ ದೇವಸ್ಥಾನ ದಕ್ಷಿಣ  ವಾರಣಾಸಿಯಲ್ಲಿ   ವಿವಿಧ ರೀತಿಯ ಮೇಳವನ್ನು ಜಾರಿಗೊಳಿಸುತ್ತಾರೆ .ಅಲ್ಲಿ  ಭಕ್ತಾದಿಗಳು ಶ್ರಾವಣ ಮಾಸದ ಉತ್ಸವವನ್ನು ಅತ್ಯಂತ  ಉತ್ಸಾಹದಿಂದ ಆಚಾರಿಸುತ್ತಾರೆ.

ಗುವಾಹಟಿ
ಅಸ್ಸಾಂ ರಾಜ್ಯಾಕ್ಕೆ  ರಾಜಧಾನಿಯಾಗಿರುವ  ನಗರ ಈ ಗುವಾಹಟಿ.ಗುವಾಹಟಿಯಲ್ಲಿ  ಶ್ರಾವಣ ಮಾಸವನ್ನು ಎಲ್ಲಾ  ಹಬ್ಬಗಳಲ್ಲೇ  ಅತ್ಯಂತ ದೊಡ್ಡ ಹಬ್ಬವನ್ನಾಗಿ ಆಚರಿಸುತ್ತಾರೆ.

ಶಿವಸಾಗರ
ಅಸ್ಸಾಂ ರಾಜ್ಯದಲ್ಲಿರುವ ಮತ್ತೊಂದು ನಗರವಿದು. ಈ  ಶಿವಸಾಗರ ನಗರವೂ  ಅನೇಕ  ದೇವಸ್ಥಾನಗಳ  ಮನೆಯಾಗಿದೆ.ಅಂತಹ ಒಂದು ದೇವಸ್ಥಾನವೇ ಈ ಶಿವ ಮಂದಿರ.ಶಿವನ ಮೂರ್ತಿಯನ್ನು ಹೊಂದಿರುವ ಈ   ದೇವಸ್ಥಾನವು ಪ್ರತಿ ವರ್ಷ ಶ್ರಾವಣ ಮಾಸದ ಸಮಯದಲ್ಲಿ ಇಲ್ಲಿನ  ಆಚರಣೆಗಳು ಹಾಗೆ  ಅಕ್ಷರಶಃ ಜೀವಂತವಾಗಿಯೇ  ಉಳಿದಿವೆ.

ಖಜುರಾಹೋ
ಖಾಜುರಾಹೋದಲ್ಲಿನ  ಜನರು ಇಲ್ಲಿನ ಸಮುದ್ರ ಸ್ನಾನ ಮಾಡಿ ನಂತರ ದೇವರ ದರ್ಶನವನ್ನು ಪಡೆಯುತ್ತಾರೆ.ಇದರ ಜೊತೆಗೆ ಮಾತಂಗೇಶ್ವರ ದೇವಸ್ಥಾನದಲ್ಲಿ ಪ್ರತಿವರ್ಷ  ಶ್ರಾವಣ ಮಾಸದಲ್ಲಿ  ಹತ್ತು ದಿನದ ಉತ್ಸವವನ್ನು   ಸಂಭ್ರಮದಿಂದ ಆಚರಿಸಲಾಗುತ್ತದೆ.

ಉಜ್ಜಯಿನಿ
ಉಜ್ಜಯಿನಿಯ ಮಹಾಕಾಲೇಶ್ವರ ದೇವಸ್ಥಾನ.ಇದು 12 ಜ್ಯೋತಿರ್ಲಿಂಗಗಳಲ್ಲಿ ಇದೂ ಕೂಡ ಒಂದಾಗಿದ್ದು.ಶ್ರಾವಣ ಮಾಸವನ್ನು ಹಬ್ಬವನ್ನಾಗಿ  ಸಂಭ್ರಮದಿಂದ ಮದ್ಯ ಪ್ರದೇಶದಲ್ಲಿ ಹರಿಯುವ ನದಿ ಕ್ಷಿಪ್ರಣೀಯರ್ ನದಿಯ ದಂಡೆಯಲ್ಲಿ ಆಚರಿಸಲಾಗುತ್ತದೆ.

ಶ್ರೀ ಶೈಲಂ
ಇದೂ ಸಹ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದ್ದು. ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನವು, ಶ್ರೀ ಶೈಲಂನ ಅಂದ್ರ ಪ್ರದೇಶದಲ್ಲಿದೆ.ಇಲ್ಲಿಯೂ ಸಹ ಶ್ರಾವಣವನ್ನು  ಅತ್ಯಂತ ಸಡಗರ ಮತ್ತು ಸಂಭ್ರಮದಿಂದ  ಆಚರಿಸುತ್ತಾರೆ. ಶಿವತಾಂಡವ ನೃತ್ಯವೇ ಮತ್ತೊಮ್ಮೆ ಮರುಕಳಿಸವಂತೆ ಹಬ್ಬವನ್ನು ಆಚರಿಸಲಾಗುತ್ತದೆ.

ಶ್ರೀ ಕಾಳಹಸ್ತಿ
ಅಂದ್ರ ಪ್ರದೇಶದಲ್ಲಿರುವ ಶ್ರೀ ಕಾಳಹಸ್ತಿಶ್ವರ ದೇವಸ್ಥಾನವಿದೆ.ಕಾಳಹಸ್ತಿಯಲ್ಲಿ  ಶ್ರಾವಣ ಮಾಸವನ್ನು ಬಹಳ ದಿನಗಳ ದೊಡ್ಡ ಹಬ್ಬ ಎಂಬಂತೆ ಆಚರಿಸಲಾಗುತ್ತದೆ. ಈ  ಸಂಭ್ರಮವನ್ನು  13 ದಿನಗಳವರೆಗೆ ಆಚರಿಸಲಾಗುತ್ತದೆ.ಇಡೀ ನಗರಕ್ಕೆ ನಗರವೇ ಬಂದು ಈ ಹಬ್ಬಕ್ಕೆ  ಸಜ್ಜಾಗಿ ನಿಂತಿರುತ್ತದೆ.

ನಾಸಿಕ್
ಶ್ರೀ ತ್ರಯಂಬಕೇಶ್ವರ ದೇವಸ್ಥಾನ ನಾಸಿಕನಲ್ಲಿದೆ.ಇದೂ ಕೂಡ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದ್ದು.ಇಡೀ ನಗರಕ್ಕೆ ನಗರವೇ ಇಲ್ಲಿ ಒಟ್ಟಾಗಿ ಸೇರಿ ಶ್ರಾವಣ ಮಾಸವನ್ನು ವಿಜೃಂಭಣೆಯಿಂದ  ದೊಡ್ಡ ಹಬ್ಬವನ್ನಾಗಿ ಆಚರಿಸುತ್ತಾರೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top