ಮನೋರಂಜನೆ

ಸಲ್ಮಾನ್ ಖಾನ್ ಮನೆಯಲ್ಲಿ ಸದ್ಯದಲ್ಲೇ ಕಳೆಗಟ್ಟಲಿದೆ ಮದುವೆ ಸಂಭ್ರಮ.

ಬಾಲಿವುಡ್ ತುಂಬಾ ಬ್ಯಾಡ್‌ಬಾಯ್ ಅಂತಲೇ ಕರೆಸಿಕೊಳ್ಳುವ ನಟ ಸಲ್ಮಾನ್‌ಖಾನ್ ಸೆಲೆಬ್ರಿಟಿ ಬ್ಯಾಚುಲರ್. ಒಂದು ವಿವಾದದ ಬಗ್ಗೆ ನೇರಾ ನೇರ ಪ್ರಶ್ನೆ ಕೇಳಿದಾಗಲೂ ಬಿಂದಾಸಾಗಿಯೇ ಉತ್ತರಿಸುವ ಸಲ್ಲು ಮದುವೆ ಬಗ್ಗೆ ಮಾತಾಡಿದರೆ ಮಾತ್ರ ಕೊಂಚ ವಿಚಲಿತರಾದಂತೆ ಕಾಣಿಸುತ್ತಾರೆ. ಬೇರೇನೋ ಫಿಲಾಸಫಿ ಹೇಳುತ್ತಾ ಅಂಥ ಪ್ರಶ್ನೆಗಳಿಂದ ಕಳಚಿಕೊಳ್ಳುವ ದಾರಿ ಹುಡುಕಿಕೊಳ್ಳುತ್ತಾರೆ.

 

 

ಇಂಥಾ ಸಲ್ಮಾನ್ ಖಾನ್ ಮನೆಯಲ್ಲಿ ಸದ್ಯದಲ್ಲೇ ಮದುವೆ ಸಂಭ್ರಮ ಕಳೆಗಟ್ಟಲಿದೆಯಂತೆ, ಹಾಗಂತ ಭಜರಂಗಿ ಬಾಯಿಜಾನ್ ಮದುವೆಯಾಗಲು ನಿರ್ಧರಿಸಿದರೆ ಎಂದು ಭಾವಿಸಿದರೆ ಅದು ನಿಮ್ಮ ಆತುರದ ನಿರ್ಧಾರವಾಗುತ್ತದೆ. ಏಕೆಂದರೆ ಸಲ್ಮಾನ್ ಖಾನ್ ಮನೆಯಲ್ಲಿ ಮದುವೆ ನಡೆಯೋದು ನಿಜ ಆದರೆ ಮದುವೆಯಾಗುತ್ತಿರುವುದು ಮಾತ್ರ ಸಲ್ಮಾನ್ ಖಾನ್ ಅಲ್ಲ. ಬದಲಾಗಿ ಅವರ ಸಹೋದರ ಅರ್ಬಾಜ್ ಖಾನ್ ಸದ್ಯದಲ್ಲೇ ಮದುವೆಯಾಗುತ್ತಿದ್ದಾರೆ.

ನಟ ಮತ್ತು ನಿರ್ದೇಶಕ ಆಗಿರುವ ಅರ್ಬಾಜ್ ಖಾನ್’ಗೆ ಇದು ಎರಡನೇ ಮದುವೆಯಾಗಿದ್ದು ಈ ಹಿಂದೆ ಮಲೈಕಾ ಆರೋರಾ ಅವರ ಜೊತೆಗೆ ಮಾಡಿಕೊಂಡಿದ್ದ ವಿವಾಹ ವಿಚ್ಛೇದನದ ನಂತರ, ಈಗ ಮತ್ತೊಂದು ದಾಂಪತ್ಯ ಜೀವನ ಆರಂಭಿಸುತ್ತಿದ್ದಾರೆ. ಜಾರ್ಜಿಯಾ ಇಂದ್ರೇನಿ ಎನ್ನುವ ವಿದೇಶಿ ಹೆಣ್ಣನ್ನು ಅರ್ಬಾಜ್ ವರಿಸಲಿದ್ದಾರಂತೆ.
ಈ ಮದುವೆ ಎರಡೂ ಕುಟುಂಬಗಳೂ ಒಪ್ಪಿಗೆ ಸೂಚಿಸಿದ್ದು ಆದಷ್ಟುಬೇಗ ಸಲ್ಲು ಮನೆಯಲ್ಲಿ ಮದುವೆಯ ಸಂಭ್ರಮ ಕಳೆಗಟ್ಟಲಿದೆ. ಈಗಾಗಲೇ ಜಾರ್ಜಿಯಾ ಸಲ್ಮಾನ್ ಖಾನ್ ಕುಟುಂಬದವರ ಸ್ನೇಹ ಸಂಪಾದಿಸಿದ್ದು ಅರ್ಬಾಜ್ ಖಾನ್ ಅವರ ಎರಡನೇ ಪತ್ನಿಯಾಗಲು ರೆಡಿಯಾಗಿ ನಿಂತಿದ್ದಾಳೆ ಎನ್ನುತ್ತಿವೆ ಬಾಲಿವುಡ್ ಮೂಲಗಳು.,,

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top