ಮನೋರಂಜನೆ

2 ವರ್ಷಗಳ ಕಾಲ ಸಲ್ಮಾನ್ ತಂಗಿ ಜೊತೆ ಸಂಬಂಧದಲ್ಲಿದ್ದ ಸ್ಟಾರ್ ನಟ- ಇಬ್ಬರ ಬ್ರೇಕ್ ಆಗಿದ್ದು ಏಕೆ?

ಬಾಲಿವುಡ್ ಮಟ್ಟಿಗೆ ಲವ್ವಾಗೋದಾಗಲಿ, ಬ್ರೇಕಪ್ಪು ಸಂಭವಿಸುವುದಾಗಲಿ, ಮದುವೆಯಾಗೋದಾಗಲಿ, ಡೊವೋರ್ಸಾಗೋದಾಗಲಿ ಅಚ್ಚರಿಯ ಸಂಗತಿಗಳೇ ಅಲ್ಲ. ಒಂದು ಲವ್‌ಸ್ಟೋರಿ ಬಯಲಾದೇಟಿಗೆ ಇಲ್ಲಿ ಬ್ರೇಕಪ್ ವಾರ್ತೆ ಕಾದಿರುತ್ತೆ. ಮದುವೆ ಗೌಜು ಮುಗಿಯೋವಷ್ಟರಲ್ಲಿಯೇ ಆ ಸಂಬಂಧದ ಆಯಸ್ಸೂ ಗೋತಾ ಹೊಡೆದಿರುತ್ತೆ! ಇದೀಗ ಅಂತದ್ದೇ ಹಳೆ ಲವ್ ಸ್ಟೋರಿಯೊಂದು ದಿಢೀರನೆ ಸುದ್ದಿಗೆ ಬಂದುಬಿಟ್ಟಿದೆ.

 

 

ಬಾಲಿವುಡ್ ನಟ ಅರ್ಜುನ್ ಕಪೂರ್ ಮತ್ತು ಸಲ್ಮಾನ್ ಖಾನ್ ತಂಗಿ ಅರ್ಪಿತಾ ಜೊತೆ ಲವ್ವಲ್ಲಿ ಬಿದ್ದು ರಿಲೇಷನ್’ಶಿಪ್ ನಲ್ಲಿದ್ದನಂತೆ. ಅರ್ಪಿತಾ ಮತ್ತು ಅರ್ಜುನ್ ಸುಮಾರು ಎರಡು ವರ್ಷಗಳ ಕಾಲ ಸಂಬಂಧದಲ್ಲಿದ್ದು ಪರಸ್ಪರ ಪ್ರೀತಿಸುತ್ತಿದ್ದರಂತೆ. ಇನ್ನು ಅರ್ಪಿತಾ ಜೊತೆಗಿನ ಲವ್ ವಿಚಾರದಲ್ಲಿ ಅರ್ಜುನ್ ಕಪೂರ್ ಗಂಭೀರವಾಗಿದ್ದನಂತೆ. ಆಗ ಅರ್ಜುನ್ ಕಪೂರ್’ಗೆ 18 ವರ್ಷ ವಯಸ್ಸಷ್ಟೇ. ಅದಾಗಲೇ ಅರ್ಜುನ್ ತೂಕ 140ಕೆಜಿ ಇತ್ತು. ಸಲಾಂ-ಎ-ಇಷ್ಕ್ ಚಿತ್ರದ ಸಹಾಯಕ ನಿರ್ದೇಶಕನಾಗಿ ಆಗಿ ಅರ್ಜುನ್ ಕೆಲಸ ಮಾಡ್ತಿದ್ದ.

ಇದೆ ವೇಳೆ ತನ್ನ ಮತ್ತು ಅರ್ಪಿತಾ ನಡುವಿನ ಪ್ರೀತಿ ವಿಚಾರವನ್ನ ಸಲ್ಮಾನ್ ಕುಟುಂಬಕ್ಕೆ ಹೇಳಿದಾಗ ಅವರು ಕೋಪಗೊಂಡಿದ್ದಾರಂತೆ. ಆದಕಾರಣ ಅರ್ಪಿತಾ, ಅರ್ಜುನ್ ಜೊತೆ ಬ್ರೇಕ್ ಅಪ್ ಮಾಡಿಕೊಂಡ ಸಲ್ಮಾನ್ ತಂಗಿ ನಂತರ ಆಯುಶ್ ಶರ್ಮಾ ಅವರನ್ನು ಮದುವೆಯಾಗಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಸ್ವತಃ ಅರ್ಜುನ್ ಕಪೂರ್ ಅವರೇ ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top