fbpx
ಸಮಾಚಾರ

ಮಸೀದಿಗಳಿಂದ ಶಬ್ದಮಾಲಿನ್ಯವಾಗುತ್ತಿದ್ದರೆ ಪರಿಶೀಲಿಸಿ- ಕೋರ್ಟ್ ಆದೇಶ

ದೆಹಲಿಯಲ್ಲಿರುವ ಮಸೀದಿಗಳ ಆಜಾನ್ ನಿಂದ ಹೊರ ಬರುವ ಪ್ರಾರ್ಥನೆಯು ಶಬ್ದಮಾಲಿನ್ಯ ಉಂಟಾಗಲು ಕರಣವಾಗುತ್ತಿದೆಯೇ ಎಂದು ಪರಿಶೀಲಿಸಲು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಆದೇಶಿಸಿದೆ. ಕೇಂದ್ರ ಮಾಲಿನ್ಯ ನಿಯಂತ್ರಣಾ ಮಂಡಳಿ ಹಾಗು ದೆಹಲಿ ಮಾಲಿನ್ಯ ನಿಯಂತ್ರಣಾ ಮಂಡಳಿಗಳಿಗೆ ರಾಷ್ಟ್ರೀಯ ಹಸಿರು ಕೋರ್ಟ್ ಮಸೀದಿಗಳಿಂದ ಹೊರಬರುವ ಶಬ್ದದ ಮಟ್ಟವನ್ನು ಪರಿಶೀಲಿಸುವಂತೆ ಶನಿವಾರ ಆದೇಶಿಸಿದೆ.

ಈ ಬಗ್ಗೆ ಪರಿಶೀಲನೆ ನಡೆಸಿ ಅದು ಮಾಲಿನ್ಯ ನಿಯಂತ್ರಣ ಕಾನೂನುಗಳನ್ನು ಉಲ್ಲಂಘಿಸುತ್ತಿದೆಯೇ ಎಂಬುದನ್ನ ವರದಿ ಸಲ್ಲಿಸುವಂತೆ ಎರಡೂ ಮಂಡಳಿಗಳಿಗೆ ರಾಷ್ಟ್ರೀಟಿಯ ಹಸಿರು ನ್ಯಾಯಾಧಿಕರಣ ಹೇಳಿದೆ. ಈ ಆದೇಶಕ್ಕೆ ಹಲವು ಮುಸ್ಲಿಮರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು “ಇದು ತೀರಾ ಸಣ್ಣ ವಿಷಯ, ಐದು ಬಾರಿ ಮೊಳಗುವ ಆಜಾನ್‌ ಎರಡು ನಿಮಿಷಕ್ಕಿಂತ ಹೆಚ್ಚು ಹೊತ್ತು ಇರುವುದಿಲ್ಲ, ಹಾಗೇನಾದರೂ ಇದ್ದಲ್ಲಿ ದಸರಾ, ದೀಪಾವಳಿಯಂಥ ಹಬ್ಬಗಳಲ್ಲಿ ಉಂಟಾಗುವ ಶಬ್ದಗಳಿಂದಲೂ ಮಾಲಿನ್ಯ ಆಗದಂತೆ ಕೋರ್ಟ್ ತಡೆಯಬೇಕು, ಕೋರ್ಟ್ ಈ ರೀತಿಯ ತಾರತಮ್ಯ ಮಾಡಬಾರದು” ಎಂದು ಪ್ರತಿಕ್ರಿಯಿಸಿದ್ದಾರೆ.

ಇನ್ನೂ ‘ಮಸೀದಿಗಳಲ್ಲಿನ ಧ್ವನಿ ವರ್ಧಕಗಳ ದನಿಯನ್ನು ತಗ್ಗಿಸಬೇಕು, ಇದರಿಂದ ಮುಸ್ಲಿಮೇತರರಿಗೆ ಕಿರಿ ಕಿರಿ ಉಂಟಾಗುತ್ತಿದೆ.. ಮಸೀದಿಯ ಧ್ವನಿ ವರ್ಧಕಗಳಿಂದ ಶಬ್ದ ಮಾಲಿನ್ಯ ಹೆಚ್ಚುವುದು, ಒಂದೇ ಪ್ರದೇಶದ ಹಲವು ಮಸೀದಿಗಳಿಂದ ಸಂದೇಶ ನೀಡುವ ಅಗತ್ಯ ಇಲ್ಲ” ಎಂದು ಅಭಿಪ್ರಾಯ ಪಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top