fbpx
ಸಮಾಚಾರ

ಹೆಚ್‍ಡಿಕೆ ಪ್ರಮಾಣವಚನ ಸಮಾರಂಭ: ನಮ್ಮ ಖರ್ಚಿಗೆ ಲೆಕ್ಕ ಕೊಡಿ ಎಂದ ಸಿಎಂಗಳು.

ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತಗುಲಿರುವ ಖರ್ಚು ವೆಚ್ಚದ ಮಾಹಿತಿ ಇದೀಗ ಬಹಿರಂಗವಾಗಿದೆ. ವಸತಿ ಇಲಾಖೆಯಿಂದ RTI ಮಾಹಿತಿ ಪಡೆದಿದ್ದು, 7 ನಿಮಿಷಗಳ ಕಾರ್ಯಕ್ರಮಕ್ಕೆ ಬರೋಬ್ಬರಿ 42 ಲಕ್ಷ ಖರ್ಚಾಗಿದೆ ಎಂಬ ಮಾಹಿತಿ ಬಯಲಾಗಿದೆ. ತಾಜ್ ವೆಸ್ಟ್ ಎಂಡ್ ಹಾಗೂ ಶಾಂಗ್ರಿಲಾ ಹೋಟೆಲ್’ಗಳಲ್ಲಿ ಗಣ್ಯರು ಉಳಿದುಕೊಳ್ಳುವುದಕ್ಕೆ ಮತ್ತು ಊಟ-ತಿಂಡಿಗೆ 37.53 ಲಕ್ಷ ಖರ್ಚಾಗಿದ್ದರೆ, ವಿಧಾನಸೌಧದ ಬ್ಯಾಂಕ್ವೆಟ್ ಹಾಲ್’ನಲ್ಲಿ ನಡೆದ ಟೀ- ಪಾರ್ಟಿಗೆ 4.35 ಲಕ್ಷ ಖರ್ಚಾಗಿದೆ. ಪ್ರಮಾಣವಚನ ಹೂಗುಚ್ಚಕ್ಕೆ 65 ಸಾವಿರ ರೂ. ಖರ್ಚಾಗಿದೆ.

 

 

ಹೆಚ್.ಡಿ. ಕುಮಾರಸ್ವಾಮಿ ಪ್ರಮಾಣವಚನ ಸಂದರ್ಭ ತಮ್ಮ ಭೇಟಿಯಿಂದ ಇಷ್ಟೊಂದು ಖರ್ಚಾಗಿರುವುದಕ್ಕೆ ವಿವಿಧ ರಾಜ್ಯದ ಮುಖ್ಯಮಂತ್ರಿಗಳು ಅನುಮಾನ ವ್ಯಕ್ತಪಡಿಸಿದ್ದು, ಸರಿಯಾದ ಲೆಕ್ಕ ಕೊಡಿ ಎಂದು ಕಾರಂತಕ ಸರ್ಕಾರವನ್ನು ಕೇಳಿದ್ದಾರೆ…ಆತಿಥ್ಯದ ವಿಚಾರದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ 9 ಲಕ್ಷ ರುಪಾಯಿ ಖರ್ಚು ಮಾಡಿರುವುದಾಗಿ ವರದಿಯಾಗದ್ದು ಇದರಿಂದ ಶಾಕ್ ಆಗಿರುವ ಚಂದ್ರಬಾಬು ಅವರು ಪ್ರತಿ ವಸ್ತುವಿನ ಖರ್ಚನ್ನು ಉಲ್ಲೇಖಿಸಿ ಲೆಕ್ಕ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕೇಳಿದ್ದಾರೆ.

ಇವರಲ್ಲದೇ ಸಿಪಿಐಎಂ ನಾಯಕ ಸೀತಾರಾಂ ಯೆಚೂರಿ ಕೂಡ ದುಬಾರಿ ವೆಚ್ಚಕ್ಕೆ ಕಾರಣ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಎಲ್ಲಾ ಬೆಳವಣಿಗೆ ಹಿನ್ನೆಲೆ ಈ ಬಗ್ಗೆ ವಿವರ ನೀಡಿ ಎಂದು ಶಿಷ್ಟಾಚಾರ ಇಲಾಖೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ..

ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಹಾಲು- ಹಣ್ಣು ಮಾತ್ರ ಸೇವಿಸಿದರು, ಮಧ್ಯಾಹ್ನ ಊಟ ಸಹ ಮಾಡಿಲ್ಲ. ಭದ್ರತೆ ದೃಷ್ಟಿಯಿಂದ ಹೋಟೆಲ್​ನಲ್ಲಿ ಉಳಿದರು. ಇದು ಪಕ್ಷದ ಕಾರ್ಯಕ್ರಮವಾದ್ದರಿಂದ ಸರ್ಕಾರ ಬಿಲ್ ಪಾವತಿಸಬಾರ ದೆಂದು ಆಮ್​ದಿ್ಮ ಪಾರ್ಟಿ ಕರ್ನಾಟಕ ಸಂಚಾಲಕ ಪೃಥ್ವಿ ರೆಡ್ಡಿ ಹೇಳುತ್ತಾರೆ.

RTI ಪ್ರಕಾರ ಪ್ರಮಾಣ ವಚನ ಸಮಾರಂಭಕ್ಕೆ ಆಗಮಿಸಿದ್ದ ಗಣ್ಯರ ಆತಿಥ್ಯಕ್ಕೆ ಖರ್ಚು ಮಾಡಿರುವ ವಿವರಗಳು ಇಂತಿವೆ.
ಅಖಿಲೇಶ್ ಯಾದವ್(ಉ.ಪ್ರ. ಮಾಜಿ ಮುಖ್ಯಮಂತ್ರಿ): Rs 1,02,400

ಮಾಯಾವತಿ(ಬಹುಜನ ಸಮಾಜ ಪಕ್ಷ ಮುಖ್ಯಸ್ಥೆ ): Rs 1,41,443

ಪಿನರಾಯಿ ವಿಜಯನ್(ಕೇರಳ ಮುಖ್ಯಮಂತ್ರಿ): Rs 1,02,400

ಅಶೋಕ್ ಗೆಹ್ಲೋಟ್(ಕಾಂಗ್ರೆಸ್ ಮುಖಂಡ): Rs 1,02,400

ಸೀತಾರಾಮ್ ಯಚೂರಿ(ಸಿಪಿಎಂ ಮುಖಂಡ ): Rs 64,000

ಹೇಮಂತ್ ಸೋರೆನ್(ಜಾರ್ಖಂಡ್ ಮಾಜಿ ಸಿಎಂ ): Rs 38,400

ಶರದ್ ಪವಾರ್(ಎನ್‍ಸಿಪಿ ಮುಖಂಡ): Rs 64,000

ಅಸಾದುದ್ದೀನ್ ಓವೈಸಿ(ಎಐಎಂಐಎಂ ಮುಖ್ಯಸ್ಥ ): Rs 38,400

ಬಾಬುಲಾಲ್ ಮರಾಂಡಿ(ಜಾರ್ಖಂಡ್ ಮಾಜಿ ಸಿಎಂ ): Rs 45,952

ಮಮತಾ ಬ್ಯಾನರ್ಜಿ ಖರ್ಚಿನ ಬಗ್ಗೆ ವಸತಿ ಇಲಾಖೆ ಮಾಹಿತಿ ಇಲ್ಲ (ಕುಮಾರಕೃಪಾ ಗೆಸ್ಟ್ ಹೌಸ್‍ನಲ್ಲಿ ತಂಗಿದ್ದರು.)

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top