ಮನೋರಂಜನೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಾಲಿನ ಗೆಲುವಿನ ಸಂಖ್ಯೆ ‘7’

ಕನ್ನಡ ಚಿತ್ರರಂಗದ ಗೆಲ್ಲುವ ಕುದುರೆ,ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ 7 ಎಂಬುದು ಲಕ್ಕಿ ನಂಬರಾ? ಅವರ ಸಿನಿಮಾ ಯಾನದ ಗ್ರಾಫ್ ಅನ್ನೊಮ್ಮೆ ತಡಕಾಡಿದರೆ ಅದು ಹೌದು ಅನ್ನುವಂಥಾ ವಿವರಗಳೇ ಸಿಗುತ್ತವೆ!

 

 

2001ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ದರ್ಶನ್, ಆ ವರ್ಷವೇ ಮೆಜೆಸ್ಟಿಕ್ ಚಿತ್ರದಲ್ಲಿ ನಾಯಕನಾಗಿ ಎಂಟ್ರಿ ಕೊಟ್ಟಿದ್ದರು. ಆ ಚಿತ್ರ ತೆರೆ ಕಂಡಿದ್ದ ಮಾರನೇ ವರ್ಷ. ಇದರ ಬೆನ್ನಿಗೇ ದರ್ಶನ್ ಬೇರೆಯದ್ದೇ ಖದರ್ ಹೊಂದಿದ್ದ ಸೂಪರ್ ಹಿಟ್ ಚಿತ್ರ ಕರಿಯ ಬಿಡುಗಡೆಯಾದದ್ದು 2003ಲ್ಲಿ..

ಅದಾಗಿ ಏಳು ವರ್ಷದ ಬಳಿಕ ಅಂದರೆ, 2008ರಲ್ಲಿ ದರ್ಶನ್ ಮತ್ತದೇ ಗಂಭೀರ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನವಗ್ರಹ ರಿಲೀಸಾಗಿತ್ತು. ಇದೀಗ ಕರೆಕ್ಟಾಗಿ ಏಳು ವರ್ಷದ ಅಂಥಾದ್ದೇ ಲುಕ್ಕಿನಲ್ಲಿ ಕಾಣಿಸಿಕೊಂಡಿರುವ ಚಕ್ರವರ್ತಿ ಸಿನಿಮಾ ರಿಲೀಸ್ ಆಗಿ ಗೆಲುವು ಕಂಡಿತ್ತು.

ಅಂದಹಾಗೆ ದರ್ಶನ್ ಹುಟ್ಟಿರುವುದೂ ಕೂಡಾ 1977ರಲ್ಲಿ. ಅದೂ ಫೆಬ್ರವರಿ ೧೬ರಂದು; ಕೂಡಿದರೆ ಇದೂ 7 ಬರುತ್ತದೆ. ಕಾರುಗಳ ಬಗ್ಗೆ ವಿಪರೀತ ಕ್ರೇಜ್ ಹೊಂದಿರೋ ಅವರ ಕಾರುಗಳ ನಂಬರ್ ಕೂಡಾ 171, 7999… ಈ ಸೀರೀಸ್‌ನಲ್ಲೇ ಇವೆ. ಇದನ್ನೆಲ್ಲ ನೋಡಿದರೆ ದರ್ಶನ್ ಪಾಲಿಗೆ 7 ಲಕ್ಕಿ ನಂಬರ್ ಎಂಬುದರಲ್ಲಿ ಸಂದೇಹವಿಲ್ಲ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top