ಮನೋರಂಜನೆ

ಸಿಕ್ಕಾಪಟ್ಟೆ ಟ್ರೊಲ್ ಆಗ್ತಿದೆ ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ ‘ಲಿಪ್ ಟು ಲಿಪ್’ ಕಿಸ್ಸಿಂಗ್ ವಿಡಿಯೋ.

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಂದನವನಕ್ಕೆ ನಾಯಕಿಯಾಗಿ ಕಾಲಿಟ್ಟ ಚೆಲುವೆ ರಶ್ಮಿಕಾ ಮಂದಣ್ಣ ಮೊದಲ ಚಿತ್ರದಲ್ಲಿಯೇ ಭರ್ಜರಿ ಅಭಿಮಾನಿಗಳನ್ನು ಸಂಪಾದಿಸಿಕೊಂಡ ಹುಡುಗಿ. ಒಂದೇ ಒಂದು ಚಿತ್ರದ ಮೂಲಕ ನಂಬರ್ ಒನ್ ನಟಿಯರನ್ನೇ ಮೀರಿಸುವಂತೆ ಈಕೆ ಮಿರುಗಿದ ರೀತಿ ನಿಜಕ್ಕೂ ಅಚ್ಚರಿ ಹುಟ್ಟಿಸುವಂತಿದೆ. ಆ ನಂತರದಲ್ಲಿ ಕನ್ನಡದ ದೊಡ್ಡ ದೊಡ್ಡ ಸ್ಟಾರ್’ಗಳ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದ ರಶ್ಮಿಕಾ ತೆಲುಗಿನಲ್ಲೂ ಕೂಡಾ ಇದೇ ರೀತಿ ಮಿಂಚುತ್ತಿದ್ದಾಳೆ. ಈಗಾಗಲೇ ಆಕೆಯ ನಟನೆಯ ಎರಡನೇ ತೆಲುಗು ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ..

 

 

ತೆಲುಗಿನ ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಜೊತೆ ಗೀತಗೋವಿಂದಂ ಎಂಬ ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾಳಲ್ಲಾ? ಆ ಚಿತ್ರ ಇದೆ ಆಗಸ್ಟ್ ಹದಿಮೂರರಂದು ತೆರೆಗೆ ಬರುತ್ತಿದ್ದು ಈಗಾಗಲೇ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿವೆ. ಇದೀಗ ಚಿತ್ರದ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿದ್ದು ಹಲ್ ಚಲ್ ಎಬ್ಬಿಸಿದೆ.. ನಾಯಕ ವಿಜಯ್ ದೇವರಕೊಂಡನ ತುಟಿಗೆ ತುಟಿಯಿಟ್ಟು ರಶ್ಮಿಕಾ ಮುತ್ತು ಕೊಟ್ಟಿರುವ ವಿಡಿಯೋ ಇದಾಗಿದ್ದು ಸದ್ಯ ವೈರಲ್ ಆಗುವುದರ ಜೊತೆಗೆ ಯಾಗ್ಗಾಮುಗ್ಗ ಟ್ರೊಲ್ ಆಗುತ್ತಿದೆ..

ವಿಜಯ್ ದೇವರಕೊಂಡ ಜೊತೆಗಿನ ಲಿಪ್ ಕಿಸ್ ಸೀನ್ ಇಟ್ಟುಕೊಂಡು ರಶ್ಮಿಕಾಳನ್ನು ಮಾತ್ರವಲ್ಲದೆ ಆಕೆಯ ಭಾವಿಪತಿ ರಕ್ಷಿತ್ ಶೆಟ್ಟಿಯನ್ನು ಟ್ರೊಲ್ ಮಾಡಲಾಗುತ್ತಿದೆ. “ರಶ್ಮಿಕಾ, ರಕ್ಷಿತ್​ ಶೆಟ್ಟಿಗೆ ಟಾಟಾ ಹೇಳಿದ್ದಾರೆ”, “ಈ ಕಿಸ್ಸಿಂಗ್ ಸೀನ್ ನೋಡಿ ರಕ್ಷಿತ್ ಗುಂಡಿಗೆ ಚೂರು ಚೂರಾಗಿದೆ”, ಎಂಬಿತ್ಯಾದಿಯಾಗಿ ಟ್ರೊಲ್ ಆಗುತ್ತಿದೆ. ಇನ್ನೂ ಕೆಲವರು ಕನ್ನಡದ ನಟಿಯಾಗಿ ಈ ರೀತಿಯ ದೃಶ್ಯಗಳಲ್ಲಿ ನಟಿಸಿವುದು ಸರಿಯಲ್ಲ, ಅದರಲ್ಲೂ ನಿಶ್ಚಿತಾರ್ಥವಾಗಿರುವ ಹುಡುಗಿಯಾಗಿ ಹೀಗೆಲ್ಲ ಮಾಡೋದು ಸರಿಯಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top