ಸಮಾಚಾರ

ಆಟಗಾರರ ಊಟದಲ್ಲಿ ಗೋಮಾಂಸ- ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಟೀಮ್ ಇಂಡಿಯಾ.

ಕ್ರಿಕೆಟ್‌ ಕಾಶಿ ಲಾರ್ಡ್ಸ್‌ನಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಕಳಪೆ ಪ್ರದರ್ಶನದಿಂದ ಅಭಿಮಾನಿಗಳನ್ನು ನಿರಾಸೆಗೊಳಿಸಿದೆ. ಕೇವಲ ನೀರಸ ಪ್ರದರ್ಶನದಿಂದ ಮಾತ್ರವಲ್ಲದೆ ಆಟಗಾರರ ಊಟದ ವಿಷಯದಲ್ಲೂ ಈಗ ನೆಟ್ಟಿಗರ ಕೆಂಗಣ್ಣಿಗೆ ಟೀಮ್ ಇಂಡಿಯಾ ಗುರಿಯಾಗಿದೆ.

 

 

ಎರಡನೇ ಟೆಸ್ಟ್ ನ ಮೂರನೇ ದಿನದಲ್ಲಿ ಆಟಗಾರರು ಮೊದಲ ಅವಧಿ ಮುಗಿಸಿ ಊಟಕ್ಕೆ ಹೋಗುತ್ತಿದ್ದಂತೆ, ಬಿಸಿಸಿಐ ಅಧಿಕೃತ ಟ್ವಿಟರ್ ಖಾತೆಯಿಂದ ಬಂದಿರುವ ಟ್ವೀಟ್​ ಈಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗೆ ಕಾರಣವಾಗಿದೆ.. ಲಂಚ್ ಬ್ರೇಕ್’ಗೆ ಆಟಗಾರರು ತೆರಳಿದಾಗ ಮೂರನೇ ದಿನದ ಊಟದ ಮೆನುವಿನ ಚಿತ್ರವನ್ನು ಬಿಸಿಸಿಐ ಶೇರ್​ ಮಾಡಿತ್ತು. ಇದರಲ್ಲಿ ಬ್ರೈಸ್ಡ್​​​​​ ಬೀಫ್​​ ಪಾಸ್ಟಾ ಎಂಬ ದನದ ಮಾಂಸದಿಂದ ಮಾಡಿದ ಆಹಾರವೂ ಇತ್ತು. ಇದರಿಂದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು ತರೇಹವಾರಿ ಟೀಕೆಗಳು ಹರಿದುಬರುತ್ತಿವೆ.

ಎರಡೂ ತಂಡದ ಆಟಗಾರರಿಗೂ ಇದೇ ಮೆನುವಿನಲ್ಲಿರುವ ಊಟವನ್ನ ಸಿದ್ದ ಮಾಡಲಾಗಿತ್ತು.. ಆದರೆ ಆಟಗಾರರು ತಮಗೆ ಇಷ್ಟವಾದ ಆಹಾರವನ್ನು ತಿನ್ನಲು ಆಯ್ಕೆ ಮಾಡಿಕೊಳ್ಳಬಹುದಿತ್ತು ಎಂದು ಹೇಳಲಾಗಿದೆ. ಹಾಗಿದ್ದರೂ ಊಟದ ಮೆನುವಿನಲ್ಲಿ ದನದ ಮಾಂಸದ​ ಡಿಶ್ ಇರುವುದನ್ನು ನೋಡಿ ಭಾರತೀಯ ಆಟಗಾರರು ಗೋಮಾಂಸ ಸೇವಿಸಿದ್ದಾರೆ ಎಂದು ಕೆಲವರು ಕಿಡಿಕಾರಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top