ಮನೋರಂಜನೆ

ದುನಿಯಾ ವಿಜಯ್ ಅಸಲಿ ಮುಖ ಬಯಲು ಮಾಡಿದ ರಿಯಾಲಿಟಿ ಶೋವೊಂದರ ಸ್ಪರ್ಧಿ.

ದುನಿಯಾ ವಿಜಯ್ ಎಲ್ಲದರಲ್ಲಿಯೂ ಭಿನ್ನ. ಹೊರ ಜಗತ್ತಿಗೆ ಕೊಂಚ ಒರಟಾಗಿ ಕಂಡರೂ ಎಲ್ಲರ ಬಗ್ಗೆಯೂ ಪ್ರೀತಿ ಮತ್ತು ಕಾಳಜಿ ಹೊಂದಿರೋದು ಅವರ ಅಸಲೀ ವ್ಯಕ್ತಿತ್ವ. ಅವರನ್ನು ಹತ್ತಿರದಿಂದ ನೋಡಿರುವ ಮತ್ತು ಅವರ ಆಪ್ತರಿಗಷ್ಟೇ ಇದು ಗೊತ್ತಿರುತ್ತದೆ.. ಬಹುಶಃ ಇದೆ ಕಾರಣಕ್ಕೋ ಏನೋ ಕರ್ನಾಟಕದಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ವಿಜಯ್ ಹೊಂದಿದ್ದಿರಬಹುದು.. ತಾವು ಎಷ್ಟೇ ದೊಡ್ಡ ಸ್ಟಾರ್ ನಟನಾಗಿ ಆಗಿ ಬೆಳೆದಿದ್ದರೂ ಸಾಮಾನ್ಯವ್ಯಕ್ತಿ ವರ್ತಿಸೋದು ವಿಜಯ್ ಅವರ ವಿಶೇಷ ಗುಣ.. ನಾಕಾಣೆ ಕೆಲಸ ಮಾಡಿ ನೂರು ರೂಪಾಯಿ ಪ್ರಚಾರ ಪಡೆಯೋ ಈ ಕಾಲದಲ್ಲಿ ಯಾರಿಗೂ ತಿಳಿಯದಂತೆ ಅದೆಷ್ಟೋ ಜೀವಗಳಿಗೆ ದುನಿಯಾ ವಿಜಯ್ ನೆರವಾಗಿದ್ದಾರೆ. ಈಗ ಖಾಸಗಿ ವಾಹಿನಿಯೊಂದಾರಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋನಲ್ಲಿ ಇದಕ್ಕೆ ಮತ್ತೊಂದು ನಿದರ್ಶನ ಸಿಕ್ಕಿದೆ.

 

 

ದಂಡ ಕಟ್ಟಲು ಹಣವಿಲ್ಲದೆ ಜೈಲು ಪಳಗಿದ್ದ ಮೈಸೂರಿನ ಮಹಿಳೆಯೊಬ್ಬರಿಗೆ ತಾವೇ ಹಣ ಪಾವತಿಸಿ ಜೈಲಿನಿಂದ ವಿಜಯ್ ಬಿಡಿಸಿದ್ದರು. ಅದೇ ರೀತಿ ಜೈಲಿನಲ್ಲಿ ಒಮ್ಮೆ ಶೂಟಿಂಗ್ ಗಾಗಿ ಹೋಗಿದ್ದಾಗ 62 ಖೈದಿಗಳನ್ನ ದಂಡ ಕಟ್ಟಿ ಬಿಡಿಸಿದ್ದರಂತೆ. ಈ ಬಗ್ಗೆ ಯಾರಿಗೂ ಗೊತ್ತಿಲ್ಲದ ಕುತೂಹಲಕಾರಿ ವಿಚಾರವೊಂದನ್ನು ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುವ ಕನ್ನಡ ಕೋಗಿಲೆಯ ಸ್ಪರ್ಧಿ ಮಹದೇವಸ್ವಾಮಿ ಹೊರಹಾಕಿದ್ದಾರೆ.

2013ರಲ್ಲಿ ‘ದೇವ್ರು’ ಸಿನಿಮಾದ ಚಿತ್ರೀಕರಣಕ್ಕಾಗಿ ದುನಿಯಾ ವಿಜಯ್ ಮೈಸೂರು ಜೈಲಿಗೆ ಬಂದಿದ್ದರು. ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದಾಗ ನಾನು ನನ್ನ ಪಾಡಿಗೆ ಕವನ ಬರೆಯುತ್ತಾ ಕೂತಿದ್ದೆ. ನಂತರ ಬರೆಯುವುದನ್ನು ನಿಲ್ಲಿಸಿ ಊಟ ಮಾಡಲು ಶುರುಮಾಡಿದೆ. ವಿಜಯ್ ಅವರು ನನ್ನ ತಟ್ಟೆಗೆ ಹಾಕಿ ಊಟ ಎತ್ಕೊಂಡು ತಿಂದ್ರು. ನನಗೆ ತುಂಬಾ ಆಶ್ಚರ್ಯವಾಯಿತು. ಪಕ್ಕದಲ್ಲಿದ್ದ ಹಾಸಿಗೆ ಮೇಲೆ ಕೂತುಕೊಂಡು ನಾನು ಬರೆದಿದ್ದ ಪುಸ್ತಕದಲ್ಲಿ ಅವರು ಏನೋ ಬರೆದು ಒಂದು ಆಟೋಗ್ರಾಪ್ ಕೊಟ್ಟಿದ್ರು. ನಿಮ್ಮನ್ನೆಲ್ಲ ನೋಡಿದ್ರೆ ಒಳ್ಳೆ ಊಟ ಕೊಡಿಸಬೇಕು ಎಂದು ವಿಜಯ್ ಹೇಳಿದ್ದರು”

” ಆದರೆ ಅದಕ್ಕಿಂತಲೂ ಒಳ್ಳೆಯ ನಿರ್ಧಾರ ನಾವು ಮಾಡಿದ್ದೆವು, ಊಟ ಕೊಡಿಸಿದ್ರೆ ತಿಂದು ಮರೆತು ಹೋಗ್ತೀವಿ, ಅದಕ್ಕೆ ಬದಲಾಗಿ ಒಂದಷ್ಟು ದಂಡ ಕಟ್ಟಿದರೆ ಕೆಲವು ಕೈದಿಗಳು ಬಿಡುಗಡೆಯಾಗಬಹುದು ಅಂತ ಜೈಲಿನಲ್ಲಿದ್ದ ಹಿರಿಯರ ಜೊತೆ ಚರ್ಚಿಸಿ ವಿಜಯ್ ಅವರಿಗೆ ಹೇಳಿದೆವು.. ಅದಕ್ಕೆ ಅವರು ಖುಷಿಯಿಂದ ಒಪ್ಪಿಕೊಂಡು ದಂಡಕಟ್ಟಿ ಬಿಡಿಸುವುದಾಗಿ ಹೇಳಿದರು. ಆದರೆ ಕಂಡೀಷನ್ ಒಂದನ್ನು ಹಾಕಿದ್ದರು. ಅದೇನೆಂದರೆ ‘ಯಾವುದೇ ನ್ಯೂಸ್ ಚಾನಲ್’ಗಳಿಗೂ ನಾನು ಸಹಾಯ ಮಾಡಿದೆ ಎಂದು ಹೇಳಬಾರದು ಅಂತ ಹೇಳಿ ಸುಮಾರು 3ಲಕ್ಷ ಕ್ಕೂ ಹೆಚ್ಚು ಹಣವನ್ನು ದಂಡ ಕಟ್ಟಿ ಸುಮಾರು 62 ಜನ ಜೈಲಿನಿಂದ ಬಿಡುಗಡೆ ಮಾಡಿಸಿದ್ದರು” ಎಂದು ಮಹದೇವಸ್ವಾಮಿ ದುನಿಯಾ ವಿಜಯ್ ಕುರಿತು ಹಾಡಿ ಹೊಗಳಿದ್ದಾರೆ.

ತಾವೆಷ್ಟೇ ಬ್ಯುಸಿಯಾಗಿದ್ದರೂ ಹೀಗೆ ಜೀವಗಳ ಸಂಕಟಕ್ಕೆ ಮಿಡಿಯುವ ಮನಸ್ಥಿತಿಯಿಂದಲೇ ದುನಿಯಾ ವಿಜಯ್ ಎಲ್ಲರಿಗೂ ಇಷ್ಟವಾಗುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top