ಮನೋರಂಜನೆ

ಕೇರಳದ ಮಹಾಮಳೆಗೆ ಸಿಲುಕಿರುವ ಸಂತ್ರಸ್ತರ ನೆರವಿಗೆ ಧಾವಿಸಿ ಮನುಷ್ಯತ್ವ ಮೆರೆದ ತಮಿಳು ನಟ ಸೂರ್ಯ.

ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸುತ್ತಾ, ಬಂದ ದುಡ್ಡಿನ ಲೆಕ್ಕ ಬರೆಯುತ್ತಾ , ಮೋಜು ಮಸ್ತಿ ಅಂತ ಮಜಾಮಾಡುವ ಈ ಕಾಲದ ಸಿನಿಮಾ ನಟರ ಮದ್ಯೆ ಕೆಲವೇ ಕೆಲವು ಮಂದಿ ಮಾತ್ರ ಮಾತ್ರ ನಾವು ಸಿನಿಮಾದಲ್ಲಿ ಮಾತ್ರ ಹೀರೋಗಳಲ್ಲ ನಿಜಜೀವನದಲ್ಲೂ ಹೀರೊ ಎಂದು ಸಾಬೀತು ಪಡಿಸುತ್ತಿರುತ್ತಾರೆ. ತಮ್ಮನ್ನು ಬೆಳೆಸಿದ ಈ ಸಮಾಜಕ್ಕೆ ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಕೈಲಾದಷ್ಟು ಸಹಾಯ ಮಾಡಬೇಕು ಎಂಬ ನಿರ್ಮಲ ಆಶಯವನ್ನಿಟ್ಟುಕೊಂಡು ಸಮಾಜಸೇವೆಗಿಳಿಯುವ ಕೆಲವೇ ಕೆಲವು ನಟರ ಸಾಲಿನಲ್ಲಿ ತಮಿಳು ಸ್ಟಾರ್ ಸೂರ್ಯನಿಗೂ ಅಗ್ರಸ್ಥಾನವಿದೆ.

 

 

ಥರ ಥರದ ಪಾತ್ರಗಳ ಮೂಲಕ, ಮನೋಜ್ಞ ಅಭಿನಯದ ಮೂಲಕ ತಮಿಳುನಾಡಿನಾಚೆಗೂ ಪ್ರೇಕ್ಷಕರ ಮನದಲ್ಲಿ ಅಚ್ಚರಿಯ ಮುದ್ರೆ ಒತ್ತಿರುವ ಇದೀಗ ಇಡೀ ಮನುಷ್ಯ ಕುಲವೇ ಹೆಮ್ಮೆ ಪಡುವಂತ ಕೆಲಸ ಮಾಡಿದ್ದಾರೆ. ಕೇರಳದಲ್ಲಿ ಮಿತಿ ಮೀರಿ ಮಳೆ ಆಗುತ್ತಿರೋದ್ರಿಂದ ಅಲ್ಲಿನ ಜನಜೀವನ ಸಂಪೂರ್ಣ ನೀರಲ್ಲೇ ಕೊಚ್ಚಿ ಹೋಗಿದ್ದು ಮಹಾಮಳೆಗೆ ನುಲುಗಿದ ಸಂತ್ರಸ್ತರ ನೆರವಿಗೆ ಸೂರ್ಯ ಮತ್ತು ಅವರ ಸಹೋದರ ಕಾರ್ತಿಕ್ ನೆರವಾಗಿದ್ದಾರೆ. ಕೇರಳ ಸಿಎಂ ಸಹಾಯ ನಿಧಿಗೆ 25 ಲಕ್ಷ ರೂಪಾಯಿ ನೀಡಿದ್ದಾರೆ. ₹25 ಲಕ್ಷ ಹಣ ನೀಡಿದ್ದೂ ಅಲ್ಲದೇ ಸಂತ್ರಸ್ತರ ನೆರವಿಗೆ ಎಲ್ಲರೂ ಕೈಜೋಡಿಸಬೇಕು ಅಂತಾ ದೇಶವಾಸಿಗಳಿಗೆ ಮನವಿ ಮಾಡಿದ್ದಾರೆ.

ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಭೂ ಕುಸಿತ ಮತ್ತು ಪ್ರವಾಹಕ್ಕೆ 26 ಜನ ಸಾವಿಗೀಡಾಗಿದ್ದಾರೆ. ಇಡುಕ್ಕಿ ಜಲಾಶಯ ವ್ಯಾಪ್ತಿಯಲ್ಲಿ 129.80 ಮಿ.ಮೀ. ಮಳೆ ಬಿದ್ದಿದೆ. ನದಿ ತೀರ ಪ್ರದೇಶಗಳು ಮಳೆಯಿಂದಾಗಿ ಜಲಾವೃತಗೊಂಡಿವೆ. ಹೀಗಾಗಿ ಕೇರಳದಲ್ಲಿ ವಿವಿಧೆಡೆ ನಿರಾಶ್ರಿತರ ಕೇಂದ್ರಗಳನ್ನು ತೆರೆಯಲಾಗಿದ್ದು, ಜನರಿಗೆ ಊಟ ಮತ್ತು ವಸತಿ ಒದಗಿಸಿ ಜನಜೀವನವನ್ನು ಸಾಮಾನ್ಯ ಸ್ಥಿತಿಗೆ ತರಲು ಹರಸಾಹಸ ಪಡಲಾಗುತ್ತಿದೆ. 29 ಮಂದಿ ನೀರಲ್ಲಿಯೇ ಸಮಾಧಿ ಆದ್ರೆ, 54 ಸಾವಿರ ಜನ ಮನೆಗಳನ್ನ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂತ್ರಸ್ತರ ರಕ್ಷಣಾಕಾರ್ಯ ಮುಂದುವರಿದಿದೆ. ಮಿತಿ ಮೀರಿ ಮಳೆ ಆಗುತ್ತಿರೋದ್ರಿಂದ ಅಲ್ಲಿನ ಜನಜೀವನ ಸಂಪೂರ್ಣ ನೀರಲ್ಲೇ ಕೊಚ್ಚಿ ಹೋಗಿದೆ.

 

 

ಇತ್ತೀಚೆಗಷ್ಟೇ ತಮಿಳುನಾಡಿನ ರೈತರ ಕ್ಷೇಮಾವೃದ್ಧಿಗಾಗಿ ತಮ್ಮ ಸಿನಿಮಾ ಮೂಲಕ ಬಂದ ಲಾಭದಲ್ಲಿ 1 ಕೋಟಿ ರೂ.ಗಳನ್ನು ದಾನವಾಗಿ ಸೂರ್ಯ ನೀಡಿದ್ದರು. ಇದು ಎಲ್ಲೆಡೆ ಭಾರಿ ಪ್ರಶಂಸೆಗೆ ಪಾತ್ರವಾಗಿತ್ತು. ಈಗ ಕೇರಳ ನಿರಾಶ್ರಿತರ ನೆರವಿಗೆ ದಾವಿಸಿರುವುದು ಎಲ್ಲರಲ್ಲೂ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top