ಭವಿಷ್ಯ

13 ಆಗಸ್ಟ್ : ನಿತ್ಯಭವಿಷ್ಯ ಮತ್ತೆ ಪಂಚಾಂಗ

ಸೋಮವಾರ, ೧೩ ಆಗಸ್ಟ್ ೨೦೧೮
ಸೂರ್ಯೋದಯ : ೦೬:೨೦
ಸೂರ್ಯಾಸ್ತ : ೧೯:೦೬
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಶ್ರಾವಣ

ಪಕ್ಷ : ಶುಕ್ಲ ಪಕ್ಷ
ತಿಥಿ : ಬಿದಿಗೆ – ೦೮:೩೬ ವರೆಗೆ
ನಕ್ಷತ್ರ : ಹುಬ್ಬ – ೧೯:೧೦ ವರೆಗೆ
ಯೋಗ : ಶಿವ – ೨೪:೨೨+ ವರೆಗೆ
ಸೂರ್ಯ ರಾಶಿ : ಕರ್ಕ

ಅಭಿಜಿತ್ ಮುಹುರ್ತ : ೧೨:೧೭ – ೧೩:೦೮
ಅಮೃತಕಾಲ : ೧೩:೨೨ – ೧೪:೪೯
ರಾಹು ಕಾಲ:೧೭:೩೦ – ೧೯:೦೬
ಗುಳಿಕ ಕಾಲ: ೧೫:೫೫ – ೧೭:೩೦
ಯಮಗಂಡ:೧೨:೪೩ – ೧೪:೧೯

ಬಹುವಿಧವಾದ ಪ್ರಶಂಸೆಗಳನ್ನು ನೀವು ಪಡೆಯಬಲ್ಲಿರಿ ಮತ್ತು ವಿಶೇಷವಾದ ಪುರಸ್ಕಾರಕ್ಕೆ ನಿಮ್ಮನ್ನು ಜನರು ಆಯ್ಕೆ ಮಾಡುವರು. ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿದ್ದು ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು.

ಕಷ್ಟದ ದಿನಗಳು ಇನ್ನು ಮುಗಿದಿಲ್ಲ. ಹಾಗಾಗಿ ನಿರಾಶರಾಗುವುದು ಬೇಡ. ಆಶಾವಾದಿಗೆ ಜೀವನ ನಿರಾಶಾವಾದಿಗೆ ಅಲ್ಲ. ಕುಲದೇವತಾ ಪ್ರಾರ್ಥನೆ ಮಾಡಿ. ಭಗವಂತ ಕೊಟ್ಟಿದ್ದರಲ್ಲಿಯೇ ಅಲ್ಪ ದಾನವನ್ನು ಮಾಡಿ.

 

ವಿಶೇಷವಾಗಿ ನಿಮಗೆ ತಿಳಿಯಲಾಗದಂತಹ ಅನಿವಾರ್ಯ ಖರ್ಚಿನ ಪ್ರಸಂಗಗಳು ಎದುರಾಗುವುದು. ಅತ್ಯಂತ ಆಪ್ತವಾದ ಗೆಳೆಯ ನಿಮಗೆ ಹಣಕಾಸಿನ ನೆರವನ್ನು ನೀಡುವನು. ಸಂಗಾತಿಯ ಆರೋಗ್ಯದ ಕಡೆ ಗಮನ ಹರಿಸಿ.

ತೀರ ಸಣ್ಣದಾದ ವಿಷಯವೊಂದಕ್ಕೆ ಬಂಧು ಬಳಗದವರ ವಿರೋಧ ಕಟ್ಟಿಕೊಳ್ಳುವ ಸಂದರ್ಭ ಇದೆ. ಹಾಗಾಗಿ ಕ್ಷ ಮಿಸುವ ಗುಣ ಇದ್ದಲ್ಲಿ ನೀವು ಅತಿ ಎತ್ತರಕ್ಕೆ ಏರಬಲ್ಲಿರಿ. ಮನೋನಿಯಾಮಕ ರುದ್ರದೇವರನ್ನು ಭಜಿಸಿ.

 

ಹಣಕಾಸಿನ ಸ್ಥಿತಿ ಉತ್ತಮವಾಗಿದ್ದು ಬಹುದಿನಗಳಿಂದ ಬರಬೇಕಾಗಿದ್ದ ಹಣವು ನಿಮ್ಮ ಕೈಸೇರುವುದು. ಆಕಾಶಕ್ಕೆ ಏಣಿ ಹಾಕುವ ವ್ಯರ್ಥ ಪ್ರಯತ್ನ ಬೇಡ. ನಿಮ್ಮ ಕಾರ್ಯಕ್ಷೇತ್ರದಲ್ಲಿನ ಕೆಲಸವು ಮಂದಗತಿಯಿಂದ ಆರಂಭವಾದರೂ ಒಳಿತಾಗುವುದು.

 

ಸುಂಕದವನ ಮುಂದೆ ಸುಖದುಃಖ ಹೇಳಿಕೊಂಡರೆ ಏನು ಪ್ರಯೋಜನ. ಹಾಗಾಗಿ ಕಷ್ಟ ಬಂದಿದೆ ಎಂದು ಮರುಗುವುದಕ್ಕಿಂತ ಬಂದಿರುವ ಕಷ್ಟವನ್ನು ಎದುರಿಸುವ ಶಕ್ತಿ ನೀಡು ಎಂದು ದೇವರಲ್ಲಿ ಪ್ರಾರ್ಥಿಸಿ.

 

ಎಲ್ಲಾ ಕೆಲಸವನ್ನು ನನ್ನಿಂದಲೇ ಆಯಿತು ಎನ್ನುವುದಕ್ಕಿಂತ ಭಗವಂತನ ಕೃಪೆಯಿಂದ ಕೆಲಸ ಆಯಿತು ಎನ್ನುವುದು ಹೆಚ್ಚು ಸೂಕ್ತ. ಹಾಗೆ ಮಾಡುವುದರಿಂದ ಕೆಲವು ಕೆಲಸಗಳು ಇನ್ನು ಹೆಚ್ಚಿನ ಪರಿಪಕ್ವತೆಯಿಂದ ಯಶಸ್ಸನ್ನು ಹೊಂದುವುದು.

 

 

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವಂತೆ ದೊಡ್ಡವರ ಸಹವಾಸದಿಂದ ದೂರ ಇರುವುದು ಒಳ್ಳೆಯದು. ಇಲ್ಲದೆ ಇದ್ದಲ್ಲಿ ಅವರು ಮಾಡುವ ತಪ್ಪುಗಳಿಗೆ ನಿಮ್ಮನ್ನು ಹೊಣೆಗಾರರನ್ನಾಗಿ ಮಾಡುವ ಸಾಧ್ಯತೆ ಇರುತ್ತದೆ.

 

ದೈವಬಲವು ನಿಮ್ಮ ಎಲ್ಲಾ ಕಾರ್ಯಗಳಲ್ಲೂ ಪ್ರಭಾವ ಬೀರುತ್ತದೆ. ಹಾಗಾಗಿ ಕಠಿಣ ಕಾರ್ಯವೂ ಸುಲಲಿತವಾಗಿ ನೆರವೇರುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

ಏಕಾಂತತೆಯು ನಿಮ್ಮ ಮನಸ್ಸನ್ನು ಹಿಂಡುತ್ತಿದೆ. ಮನುಜ ಸಂಘಜೀವಿ. ಹಾಗಾಗಿ ಆದಷ್ಟು ಸಂಘ ಸಂಸ್ಥೆಗಳಲ್ಲಿ ಸದಸ್ಯರಾಗಿ ಗೆಳೆಯರೊಡನೆ ಬೆರೆಯಿರಿ. ಮನಸ್ಸಿನ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ.

 

ಹೊಸ ರೀತಿಯ ಕಾರ್ಯ ಮಾಡುವಂತೆ ಗ್ರಹಗಳು ಪ್ರೇರೇಪಿಸುತ್ತವೆ. ಅದರಲ್ಲಿ ಯಶಸ್ಸನ್ನು ಕಾಣುವ ಸೌಭಾಗ್ಯ ನಿಮ್ಮದಾಗುವುದು. ದೈವದತ್ತವಾಗಿ ಬಂದ ಜಾಣ್ಮೆಯನ್ನು ಉಪಯೋಗಿಸಿಕೊಳ್ಳಿ. ಮಾತಿನಲ್ಲಿ ಮೃದುತ್ವ ರೂಢಿಸಿಕೊಳ್ಳಿ.

 

ದೃಢ ನಿರ್ಧಾರವನ್ನು ತಳೆಯುವಲ್ಲಿ ಹೆಸರು ವಾಸಿಯಾದ ನೀವು ಇಂದಿನ ಸಂಕಷ್ಟ ಪರಿಸ್ಥಿತಿಯನ್ನು ಸೂಕ್ಷ ್ಮವಾಗಿ ಗಮನಿಸಿ ಅದರಲ್ಲಿ ವಿಜಯವನ್ನು ತಂದುಕೊಳ್ಳಲು ನಿಮ್ಮ ಪರಿಪಕ್ವ ಮನಸ್ಸು ಸಹಾಯ ಮಾಡುವುದು. ಇದಕ್ಕೆ ಸಂಗಾತಿಯ ನೆರವು ಸಿಗುವುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top