ಸಮಾಚಾರ

ಪ್ರವಾಹ ಪೀಡಿತರಿಗೆ ಹಸ್ತ ಚಾಚಿದ ನಟ ಪ್ರಭಾಸ್ ,ನೀಡಿದ ಮೊತ್ತವೆಷ್ಟು ಗೊತ್ತಾ ?

ದೇವರನಾಡು ಎಂದೇ ಹೆಸರುವಾಸಿಯಾಗಿರುವ ಕೇರಳ ರಾಜ್ಯದದಲ್ಲಿ ನೈರುತ್ಯ ಮುಂಗಾರು ಮಳೆಯ ಆರ್ಭಟ ಬುಧವಾರವೂ ಮುಂದುವರಿದಿದೆ. ಶತಮಾನದಲ್ಲೇ ಕಂಡರಿಯದ ಭೀಕರ ಪ್ರವಾಹಕ್ಕೆ ಇಡೀ ರಾಜ್ಯ ತತ್ತರಿಸಿದೆ. ಭೂಕುಸಿತ ಮತ್ತು ಪ್ರವಾಹದಿಂದ ಇದುವರೆಗೆ ಮೃತಪಟ್ಟವರ ಸಂಖ್ಯೆ 47ಕ್ಕೆ ಏರಿಕೆ ಆಗಿದೆ.

ಈ ಹಿನ್ನಲೆಯಲ್ಲಿ ಕೇರಳ ಪ್ರವಾಹ ಪೀಡಿತರಿಗೆ ಸ್ಟಾರ್ ನಟರು ನೆರವಿನ ಹಸ್ತ ಚಾಚಿದ್ದಾರೆ ಎಂದು ತಿಳಿದು ಬಂದಿದೆ. ಅಂದಹಾಗೆ ಯಾವ ನಟರು ಎಷ್ಟು ಹಣ ನೀಡಿದರು ಎಂದು ನೋಡೋಣ ಬನ್ನಿ.

 

 

 

 

ಪ್ರಭಾಸ್​ ಕೇರಳಿಗರ ನೆರವಿಗೆ ಧಾವಿಸಿದ್ದು, 1 ಕೋಟಿ ರೂಪಾಯಿಯನ್ನು ಕೇರಳ ಸರ್ಕಾರಕ್ಕೆ ನೀಡಿದ್ದಾರೆ

ಕಮಲ್ ಹಾಸನ್​ – 25 ಲಕ್ಷ
ಅಲ್ಲು ಅರ್ಜುನ್ -25 ಲಕ್ಷ
ವಿಜಯ್ ದೇವರಕೊಂಡ -5 ಲಕ್ಷ

ನಟ ಸೂರ್ಯ -25 ಲಕ್ಷ
ಕೀರ್ತಿ ಸುರೇಶ್​ -5 ಲಕ್ಷ
ಅನುಪರಮೇಶ್ವರನ್ -1 ಲಕ್ಷ

ಭಾರೀ ಮಳೆಯ ಹಾಗು ಪ್ರವಾಹದ ಪರಿಣಾಮ ಕೇರಳದ ಹಲವು ಭಾಗಗಳಲ್ಲಿ ರೆಡ್ ಅಲರ್ಟ್ ಘೋಷಿಸಿದ್ದಾರೆ. ಇದೇ ವೇಲೆ ಕೊಚ್ಚಿ ವಿಮಾನ ನಿಲ್ದಾಣದೊಳಗೆ ನೀರು ನುಗ್ಗಿದ ಪರಿಣಾಮ ಶನಿವಾರದವರೆಗೆ ಅಲ್ಲಿ ವಿಮಾನಗಳ ಸಂಚಾರ ನಿಷೇಧಿಸಲಾಗಿದೆ. ಇದಲ್ಲದೆ ರಾಜ್ಯದ ಹಲವು ರೈಲು ನಿಲ್ದಾಣಗಳಲ್ಲೂ ರೈಲು ಸಂಚಾರದಲ್ಲಿ ವ್ಯತಯ ಆಗಿದ್ದು, ಸಾಮಾನ್ಯ ಜನ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ. ಹೀಗಾಗಿ ವಾಯುಪಡೆಗೆ ಸೇರಿದ ರನ್ ವೇಗಳಲ್ಲಿ ಸಣ್ಣ ವಿಮಾನಗಳನ್ನು ಇಳಿಸಲು ಅವಕಾಶ ಕೊಡುವಂತೆ ಕೇರಳ ಸಿಎಂ ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top