ಅರೋಗ್ಯ

ಮೇಕಪ್ ಮಾಡ್ಕೊಂಡಮೇಲೆ ಕ್ಲೀನ್ ಮಾಡಿಕೊಳ್ಳದೆ ಹಾಗೆ ಬಿಟ್ರೆ ಸಣ್ಣ ರಂದ್ರಗಳು , ವೈಟ್ ,ಬ್ಲಾಕ್ ಹೆಡ್ಸ್ ಮುಖದ ಮೇಲೆ ಜಾಸ್ತಿ ಆಗುತ್ತೆ, ದುಬಾರಿ ಕೆಮಿಕಲ್ ಬಳಸೋ ಬದ್ಲು ಹೀಗ್ಮಾಡಿ

ಮೇಕಪ್ ಮಾಡಿಕೊಂಡ ಬಳಿಕ ಅದನ್ನು ಹುಷಾರಾಗಿ ತೆಗೆಯಬೇಕು ಇಲ್ಲವಾದರೆ ಮುಖದ ಮೇಲೆ ಸಣ್ಣ ರಂದ್ರಗಳು , ವೈಟ್ ಹೆಡ್ಸ್ ಬ್ಲಾಕ್ ಹೆಡ್ಸ್ ಮಾದರಿಯಲ್ಲಿ ಎಲ್ಲೆಲ್ಲಿ ಹೆಚ್ಚು ಎಣ್ಣೆ ಬಿಡುಗಡೆಯಾಗುತ್ತದೆಯೋ ಅಲ್ಲಲ್ಲಿ ಕಾಣಿಸಿಕೊಳ್ಳುತ್ತದೆ ,ಆದ್ದರಿಂದ ಮೇಕಪ್ ಮಾಡಿಕೊಂಡ ಬಳಿಕ ಸರಳವಾಗಿ ತೆಗೆದುಬಿಡಬೇಕು .

ದುಬಾರಿ ಮೇಕಪ್ ಕಿಟ್ ಗಳನ್ನು ತೆಗೆದುಕೊಂಡು ಬಂದು ರಾಸಾಯನಿಕಗಳನ್ನು ಬಳಸಿ ಮುಖದ ಚರ್ಮವನ್ನು ಹಾಳುಮಾಡುವ ಬದಲು ನೈಸರ್ಗಿಕ ಪದಾರ್ಥಗಳನ್ನು ಬಳಸಿಕೊಳ್ಳಬಹುದು

ಬನ್ನಿ ಕೆಲವು ಮನೆಯಲ್ಲಿನ ಮದ್ದುಗಳನ್ನು ಬಳಸಿ ಯಾವ ರೀತಿ ಮೇಕಪ್ ತೆಗೆಯಬಹುದು ನೋಡೋಣ

 ಸೌತೆಕಾಯಿ :

 

ಸೌತೆಕಾಯಿ ರಸವನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಬೇಬಿ ಆಯಿಲ್ ಬೆರೆಸಿ ಮೇಕಪ್ ಮಾಡಿಕೊಂಡ ಮುಖವನ್ನು ಒರೆಸಿಕೊಳ್ಳಿ ,ಆನಂತರ ತಣ್ಣೀರಿನಲ್ಲಿ ಮುಖವನ್ನು ತೊಳೆದುಕೊಳ್ಳಿ

ಹಾಲು :

ಹಾಲಿಗೆ ಸ್ವಲ್ಪ ಆಲಿವ್ ಎಣ್ಣೆ ಬೆರೆಸಿ ಮೇಕಪ್ ಮಾಡಿಕೊಂಡ ಮುಖವನ್ನು ಒರೆಸಿಕೊಳ್ಳಿ ,ಆನಂತರ ತಣ್ಣೀರಿನಲ್ಲಿ ಮುಖವನ್ನು ತೊಳೆದುಕೊಳ್ಳಿ

ಕೊಬ್ಬರಿ ಎಣ್ಣೆ :

ಕೊಬ್ಬರಿ ಎಣ್ಣೆಯನ್ನು ಹತ್ತಿಯಲ್ಲಿ ಅದ್ದಿ ಮೇಕಪ್ ಮಾಡಿಕೊಂಡ ಮುಖವನ್ನು ಒರೆಸಿಕೊಳ್ಳಿ ,ಆನಂತರ ತಣ್ಣೀರಿನಲ್ಲಿ ಮುಖವನ್ನು ತೊಳೆದುಕೊಳ್ಳಿ

ದ್ರಾಕ್ಷಿ ಬೀಜದ ಎಣ್ಣೆ :

ದ್ರಾಕ್ಷಿ ಬೀಜದ ಎಣ್ಣೆ ಯನ್ನು ಹತ್ತಿಯಲ್ಲಿ ಅದ್ದಿ ಮೇಕಪ್ ಮಾಡಿಕೊಂಡ ಮುಖವನ್ನು ಒರೆಸಿಕೊಳ್ಳಿ ಈ ಎಣ್ಣೆ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ ಅಷ್ಟೇ ಅಲ್ಲದೆ ಮೊಡವೆ ಕಪ್ಪು ಕಲೆ ಹಾಗು ಇನ್ನಿತರ ಚರ್ಮದ ಸಮಸ್ಯೆಗಳಿಂದ ದೂರವಿರಿಸುತ್ತದೆ.

ಮೊಸರು :

ಮೊಸರನ್ನು ಚರ್ಮದ ಮೇಲೆ ಹಚ್ಚಿ ನಿಧಾನವಾಗಿ ಉಜ್ಜುತ್ತಾ ಬರಬೇಕು ಇದು ಚರ್ಮದ ಮೇಲಿನ ಯಾವುದೇ ಮೇಕ್ಅಪ್ ಅನ್ನು ಸುಲಭವಾಗಿ ತೆಗೆಯುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top