ಸಮಾಚಾರ

ಢಣ್ಟಟಕರ..ಢಣ್ಟಟಕರ ಢಣ್ ಇದು ಡೈರೆಕ್ಟರ್ ಪವನ್ ಮದುವೆ ಸ್ಪೆಷಲ್ ಅಂತೇ ,ಅಯ್ಯೋ ಏನ್ ಇದು ಅರ್ಥ ಆಗಿಲ್ಲ ಅಂದ್ರೆ ಮುಂದೆ ಓದಿ

ಗೋವಿಂದಾಯ ನಮಃ, ಗೂಗ್ಲಿ, ರಣವಿಕ್ರಮದಂತಹ ಸೂಪರ್ ಹಿಟ್ ಸಿನೆಮಾಗಳನ್ನು ನೀಡಿರುವ ಪವನ್ ಒಡೆಯರ್ ಹಾಗೂ ನಟಿ ಅಪೇಕ್ಷಾ ಪುರೋಹಿತ್ ನಿಶ್ಚಿತಾರ್ಥ ಕಳೆದ ವರ್ಷ ಅದ್ಧೂರಿಯಾಗಿ ಬಾಗಲಕೋಟೆಯಲ್ಲಿ ನೆರವೇರಿದ್ದು ನಿಮಗೆಲ್ಲ ಗೊತ್ತಿರುವ ವಿಚಾರ. ಪವನ್ ಒಡೆಯರ್ ಮದುವೆ ಯಾವಾಗ ಆಗುತ್ತಾರೆ ಎಂಬ ಕುತೂಹಲ ಮನೆಮಾಡಿತ್ತು. ಈ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ಪವನ್ ಮದುವೆ ದಿನಾಂಕ ಈಗ ಫಿಕ್ಸ್ ಆಗಿದೆ. ನಿರ್ದೇಶಕ ಪವನ್ ಒಡೆಯರ್-ನಟಿ ಅಪೇಕ್ಷಾ ಪುರೋಹಿತ್ ಮದುವೆ ಸಮಾರಂಭ ಮಹೋತ್ಸವ ಆಗಸ್ಟ್ 20 (ಸೋಮವಾರ) ರಂದು ನಡೆಯಲಿದೆ.

 

 

ಮದುವೆಯು ಬಾಗಲಕೋಟೆಯಲ್ಲಿ ನಡೆಯಲಿದ್ದು ಇನ್ನು ಬೆಂಗಳೂರಿನಲ್ಲಿರುವ ಪವನ್ ಸ್ನೇಹಿತರಿಗೆ ಬರೋದಿಕ್ಕೆ ಆಗಲಿಲ್ಲ ಎಂದರೆ ಇದೇ 26ಕ್ಕೆ ಬೆಂಗಳೂರಿನ ಶಾಂಗ್ರೀಲಾ ಹೋಟೆಲ್‌ನಲ್ಲಿ ಆರತಕ್ಷತೆ ಕಾರ್ಯಕ್ರಮವನ್ನ ಏರ್ಪಡಿಸಿದ್ದಾರೆ ಅದಕ್ಕೆ ಬರಬೇಕು ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಢಣ್​ಟಟಕರ..ಢಣ್​ಟಟಕರ ಢಣ್​ ಎನ್ನುವ ಸಾಲು ಬರೆದಿದ್ದು ಇದರ ಅರ್ಥವನ್ನು ಪವನ್​ ಒಡೆಯರ್​ ಅವರೇ ಹೇಳಬೇಕಿದೆ. ಗೂಗ್ಲಿ, ಗೋವಿಂದಾಯ ನಮ:, ಜೆಸ್ಸಿ, ರಣ ವಿಕ್ರಮ. ಅಂತಹ ಕೆಲ ಸೂಪರ್​ ಹಿಟ್​ ಸಿನಿಮಾಗಳನ್ನು ಕೊಟ್ಟಿರುವ ಪವನ್​ ಒಡೆಯರ್​ ಅಂತೂ –ಇಂತೂ ವಯಸ್ಸು 30ಕ್ಕೆ ಮದುವೆ ಆಗುವ ಖಷಿಯಲ್ಲಿದ್ದಾರೆ ​.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top