ಸಮಾಚಾರ

ಪಿಗ್ಗಿ ಬೆರಳ ತುದಿಯಲ್ಲಿರೋ ಉಂಗುರದ ಬೆಲೆ ಗೊತ್ತಾದ್ರೆ ತಲೆ ತಿರುಗೋದು ಗ್ಯಾರಂಟೀ.

ದುಂದುವೆಚ್ಚ, ಮೋಜು ಮಸ್ತಿ ಮಾಡುವುದರಲ್ಲಿ ಬಾಲಿವುಡ್ ನಟಿಯರು ಯಾವತ್ತೂ ಹಿಂದೆ ಬಿದ್ದವರಲ್ಲ. ಸಣ್ಣಪುಟ್ಟ ಸರಕುಗಳಿಗೆ ಸ್ಪರ್ಧೆಗೆ ಬಿದ್ದವರಂತೆ ಅತಿಹೆಚ್ಚಿನ ಬೆಲೆ ಕೊಟ್ಟು ತಮ್ಮದಾಗಿಸಿಕೊಳ್ಳೋದನ್ನೇ ಹುಚ್ಚಾಗಿಸಿಕೊಂಡಿರೋ ನಟಿಯರು ಇದೇ ವಿಚಾರವಾಗಿ ಆಗಾಗ್ಗೆ ಸದ್ದು ಮಾಡುತ್ತರೆ. ಈ ಪಟ್ಟಿಯಲ್ಲಿ ತೀರಾ ಒಂದೆರಡು ಚಿತ್ರಗಳಲ್ಲಿ ಕಾಣಿಸಿಕೊಂಡು ಅದರಲ್ಲೂ ಬರಖತ್ತಾಗದ ನಟಿಯರೇ ಹೆಚ್ಚು. ಹೀಗಿರುವಾಗ ನಟನೆಯ ಮೂಲಕವೇ ವಿಶ್ವಾಧ್ಯಂತ ಅಭಿಮಾನಿಗಳನ್ನು ಹೊಂದಿರೋ ಪ್ರಿಯಾಂಕಾ ಚೋಪ್ರಾ ಇಂಥ ದುಬಾರಿ ವಸ್ತುವನ್ನು ತನ್ನದಾಗಿಸಿಕೊಂಡರೆ ಸುದ್ದಿಯ ಕೇಂದ್ರವಾಗೋದರಲ್ಲೇನೂ ವಿಶೇಷವಿಲ್ಲ.

 

 

ಕಳೆದ ವಾರ ಅಮೆರಿಕದಿಂದ ರಿಪ್ ಮುಗಿಸಿ ಬಂದಿದ್ದ ಪಿಗ್ಗಿ ಏರ್ಪೋಟ್​​ನಲ್ಲಿ ಪ್ರಿಯಾಂಕಾ ಚೋಪ್ರಾ ತೋರಿದ ವರ್ತನೆ ರೀತಿಯ ಮೇಲೆ ಹಲವರಲ್ಲಿ ಕುತೂಹಲ ಕೆರಳಿಸಿತ್ತು. ಏರ್ಪೋಟ್​​ನಲ್ಲಿ ಪಿಗ್ಗಿ ಬಂದಿಳಿದ ತಕ್ಷಣ ತನ್ನ ಕೈಯಲ್ಲಿರುವ ಉಂಗುರವನ್ನು ಯಾರಿಗೂ ತೋರಿಸದ ಹಾಗೆ ಬಿಚ್ಚಿ ಜೇಬಿನೊಳಗೆ ಬಿಟ್ಟುಕೊಂಡಿದ್ದ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿತ್ತು. ಮಾಧ್ಯಮದವರಿಂದ ಪಿಗ್ಗಿ ಬಚ್ಚಿಟ್ಟುಕೊಂಡ ವಜ್ರದ ಉಂಗುರವನ್ನು ಪ್ರಿಯಕರ ನಿಕ್ ಜೋನಸ್ ನಿಶ್ಚಿತಾರ್ಥದಂದು ಪಿಗ್ಗಿಗೆ ಹಾಕಿದ್ದು ಎಂದು ಅನೇಕರು ಊಹಿಸಿದ್ದರು.

ಇದೀಗ ಆ ಉಂಗುರು ಮತ್ತೊಮ್ಮೆ ಸುದ್ದಿಗೆ ಬಂದಿದೆ, ಅಂದು ಪ್ರಿಯಾಂಕಾ ಬಚ್ಚಿಟ್ಟ ಉಂಗುರವನ್ನು ಹಾಕಿಕೊಂಡಿರುವ ಪಿಗ್ಗಿ ಫೋಟೋವನ್ನು ಇಂದು ನಟಿ ರವೀನಾ ಟಂಡನ್ ತನ್ನ ಇನ್ಸ್‌ಟಾಗ್ರಾಮ್‌​​ ನಲ್ಲಿ ಶೇರ್ ಮಾಡುವ ಮೂಲಕ ಆಕರ್ಷಿಸಿದ್ದಾಳೆ.. ಇದೇ ಆ ನಿಶ್ಚಿತಾರ್ಥದ ಉಂಗುರ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಈ ಉಂಗುರದ ಬೆಲೆ ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ.​ ಮೂಲಗಳ ಪ್ರಕಾರ, ಪ್ರಿಯಾಂಕ ಚೋಪ್ರಾ ಕೈನಲ್ಲಿರುವ ವಜ್ರದ ಉಂಗುರದ ಬೆಲೆ ಬರೋಬ್ಬರಿ ಎರಡು ಕೋಟಿ ಒಂದು ಲಕ್ಷ ರೂಪಾಯಿಯಂತೆ. ನಾಲ್ಕು carat ತೂಕವಿರುವ ಈ ವಜ್ರದ ಉಂಗುರ ಉತ್ತಮ ಗುಣಮಟ್ಟದ ಕುಶನ್ ಕಟ್ನಿಂದ ಮಾಡಲಾಗಿದೆ., ಇದೇ ಪಿಗ್ಗಿಯ ನಿಶ್ಚಿತಾರ್ಥದ ಉಂಗುರ ಎಂದು ಬಾಲಿವುಡ್ ನಲ್ಲಿ ಗುಲ್ಲೆದ್ದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top