ತಿಂಡಿ ತೀರ್ಥ

ಬೆಂಗಳೂರಲ್ಲಿ ಮಾತ್ರವೇ ಸಿಗೋ ಸಾವಿರ ರೂಪಾಯಿಯ ಈ ದೋಸೆ ಬಗ್ಗೆ ತಿಳ್ಕೊಂಡ್ರೆ ಬೆರಗಾಗ್ತೀರಾ?

ಸೆಟ್ ದೋಸೆ, ಖಾಲಿ ದೋಸೆ, ಮಸಾಲೆ ದೋಸೆ, ಬೆಣ್ಣೆ ದೋಸೆ, ಪೇಪರ್ ದೋಸೆ, ರಾವ ದೋಸೆ ಹೀಗೆ ಬಗೆಬಗೆಯ ದೋಸೆಯ ಹೆಸರನ್ನು ಕೇಳುತ್ತಿದ್ದರೇನೇ ಬಾಯಲ್ಲಿ ನೀರೂರುತ್ತದೆ.. ದೋಸೆಯನ್ನು ನೂರಕ್ಕಿಂತ ಅಧಿಕ ಬಗೆಯಲ್ಲಿ ತಯಾರಿಸಬಹುದು.. ಆದರೆ ಬೆಂಗಳೂರಿನಲ್ಲಿ ಮಾತ್ರ ಸಿಗೋ ಈ ಒಂದು ವಿಶೇ‍ಷ ದೋಸೆ ಬಗ್ಗೆ ತಿಳ್ಕೊಂಡ್ರೆ ನೀವು ಒಂದ್ ಕೈ ನೋಡೋಣಾ ಅಂತ ಹುಡುಕೊಂಡ್ ಬರ್ತೀರಾ.

 

 

ಇದಕ್ಕೆ ಹೆಸರು ‘ಗೋಲ್ಡ್‌ ಪ್ಲೇಟೆಡ್ ದೋಸೆ’ ಅಂತ, ಬೆಂಗಳೂರಿನ ಮಲ್ಲೇಶ್ವರಂನಲ್ಲಿನ ವೀನಾ ಸ್ಟೋರ್‌ನ ಎದುರು 15 ನೇ ಕ್ರಾಸ್‌ನಲ್ಲಿ ಈ ದೋಸೆ ಸಿಗುವ ‘ಮಾರ್ಗೋಸಾ ಕಾರ್ನರ್‌ ರಾಜ್‌ಬೋಗ್‌’ ಎಂಬ ರೆಸ್ಟೋರೆಂಟ್ ಇದ್ದು ಒಂದು ದೋಸೆಗೆ ಒಂದು ದೋಸಕ್ಕೆ 1,011 ರೂ ಬೆಲೆ.. ಆಲಿವ್ ಆಯಿಲ್’ನಲ್ಲಿ ಥೇಟು ಮಸಾಲಾ ದೋಸೆ ಮಾಡಿ ಕೊನೆಯಲ್ಲಿ ಚಿನ್ನದ ಫಾಯಿಲ್ ಲೇಪಿಸಿವುದೇ ಗೋಲ್ಡ್ ಪ್ಲೇಟೆಡ್ ದೋಸಾ. ಅದೇ ರೀತಿ ಬೆಳ್ಳಿಯ ಲೇಪಿತ ದೋಸೇಯ ಬೆಲೆ 151 ರೂಪಾಯಿ.

ಈ ದೋಸೆ ಹುಟ್ಟುಕೊಂಡಿದ್ದು ಹೇಗೆ?
ಮಾಲೀಕರು ತಮ್ಮ ರೆಸ್ಟೋರೆಂಟ್‌ನಲ್ಲಿ ಯಾವುದಾದರೂ ಒಂದು ವಿಶೇಷ ತಿನಿಸನ್ನು ತಯಾರಿಸಬೇಕೆಂದು ಯೋಚಿಸುತ್ತಿದ್ದಾಗ ಹೊರ ದೇಶಗಳಲ್ಲಿ ಪಿಜ್ಜಾ, ಐಸ್‌ಕ್ರೀಮ್‌ ಮುಂತಾದವುಗಳಿಗೆ ಗೋಲ್ಡ್‌ ಫೋಯಿಲ್ಸ್‌ ಅನ್ನು ಉಪಯೋಗಿಸಿದ್ದನ್ನು ವಿಡಿಯೋವೊಂದರಲ್ಲಿ ನೋಡಿದ್ದಾರೆ. ಇದನ್ನೇ ಸ್ಪೂರ್ತಿಯಾಗಿ ಪಡೆದ ಮಾಲೀಕರು ಗೋಲ್ಡ್ ಪೋಯಿಲ್ಸ್ ಅನ್ನು ಭಾರತದಲ್ಲೂ ಯಾವುದಾದರೂ ತಿಂಡಿಗೆ ಬಳಸಬೇಕು ಎಂದು ಯೋಚಿಸಿ ದೋಸೆಗೆ ‘ಗೋಲ್ಡ್ ಪ್ಲೇಟೆಡ್ ದೋಸೆ’ ಎಂದು ಹೆಸರಿಟ್ಟು ಜನಪ್ರಿಯಗೊಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top