ಅರೋಗ್ಯ

ಶಿವನಿಗೂ ಪ್ರಿಯವಾದ ತುಂಬೆ ಗಿಡದ ತುಂಬೆಲ್ಲಾ ತುಂಬಿದೆ ಅದ್ಭುತ ಆರೋಗ್ಯಕಾರಿ ಗುಣಗಳು..

ಶಾಸ್ತ್ರಗಳ ಪ್ರಕಾರ ಶಿವನಿಗೆ ಪ್ರಿಯವಾದಂಥ ತುಂಬೆ ಗಿಡ ಎಷ್ಟು ಶ್ರೇಷ್ಠವೋ ಆರೋಗ್ಯ ವಿಚಾರವಾಗಿಯೂ ಅಷ್ಟೇ ಪ್ರಯೋಜನಕಾರಿಯಾಗಿದೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆಯ ಮಾತಿನಂತೆ ತುಂಬೆ ಗಿಡ ಚಿಕ್ಕವಾಗಿದ್ದರೂ ಅದು ಆರೋಗ್ಯಕರವಾಗಿ ಮನುಷ್ಯನಿಗೆ ತುಂಬ ಉಪಯೋಗಕಾರಿ. ತುಂಬೆ ಹೂವನ್ನು ಬಳಸಿಕೊಂಡು ಅನೇಕ ಕಾಯಿಲೆಗಳನ್ನು ಗುಣಪಡಿಸಬಹುದು. ಆ ಕಾಯಿಲೆಗಳು ಯಾವುವೆಂದು ಈ ಕೆಳಗೆ ತಿಳಿದುಕೊಳ್ಳಿ.

 

 

1.ವಿಷಮ ಜ್ವರಕ್ಕೆ ರಾಮಬಾಣ:

ಆಗಾಗ ಕಾಡುವ ಜ್ವರದ ಸಮಸ್ಯೆಗೆ ಹತ್ತು ಮಿಲಿ ತುಂಬೆ ಸೊಪ್ಪಿನ ರಸಕ್ಕೆ ಐದು ಗ್ರಾಮ್ ಕರಿಮೆಣಸನ ಪುಡಿಯನ್ನು ಸೇರಿಸಿ ನಿಯಮಿತವಾಗಿ ಕುಡಿಯುವುದರಿಂದ ವಿಷಮ ಜ್ವರವನ್ನು ನಿವಾರಣೆ ಮಾಡಬಹುದು.

 

2.ತಲೆನೋವಿಗೆ ಪರಿಹಾರ:

ನಿಮಗೆ ತಲೆನೋವು ಬಂದಾಗ ತುಂಬೆ ಗಿಡದ ಕಾಂಡವನ್ನು ಹೂವಿನ ಸಮೇತ ನೀರಿನಲ್ಲಿ ಚೆನ್ನಾಗಿ ಕುದಿಸಿ ಆ ನೀರಿನ ಹಬೆಯನ್ನು ತೆಗೆದುಕೊಂಡರೆ ನಿಮ್ಮ ತಲೆನೋವು ಕಡಿಯಾಗುತ್ತದೆ.

 

3.ಕಣ್ಣಿಗೆ ಸಂಬಂದಿಸಿದ ಸಮಸ್ಯೆಗೆ:

ನಿಮ್ಮ ಕಣ್ಣಿನ ಸುತ್ತಲೂ ಇರುವ ಕಪ್ಪು ವರ್ತುಲದ ಸಮಸ್ಯೆ, ಕಣ್ಣಿನ ಉರಿ, ಕಣ್ಣು ಕೆಂಪಗಾಗುವ ಸಮಸ್ಯೆ ಇದ್ದರೆ ತುಂಬೆ ಗಿಡದ ರಸಕ್ಕೆ ಸ್ವಲ್ಪ ತಣ್ಣನೆಯ ನೀರು ಇಲ್ಲವೇ ಹಾಲು ಸೇರಿಸಿ ಅದರಿಂದ ಮುಖವನ್ನು ತೊಳೆದರೆ ಕಣ್ಣಿಗೆ ತಂಪೆನಿಸುತ್ತದೆ.

 

4.ಊತದ ನಿವಾರಣೆ:

ತುಂಬೆ ಗಿಡದ ಎಲೆ ಮತ್ತು ಕಾಂಡವನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ.ಬಳಿಕ ಒಂದು ಬಟ್ಟೆಯನ್ನು ಅದರಲ್ಲಿ ಮುಳುಗಿಸಿ ಆ ಬಟ್ಟೆಯನ್ನು ನೋವಿರುವ ಜಾಗಕ್ಕೆ ಒತ್ತಿಕೊಂಡರೆ ಊಟ ಕಡಿಮೆಯಾಗುತ್ತದೆ. ಹೀಗೆ ಮಾಡಿದರೆ ನೋವನ್ನೂ ಸಹ ನಿವಾರಣೆ ಮಾಡಬಹುದು

 

5.ಜೀರ್ಣಕ್ರಿಯೆಯನ್ನು ಸರಾಗವನ್ನಾಗಿ ಮಾಡುತ್ತದೆ.

ತುಂಬೆಗಿಡವನ್ನು ಬಿಸಿನೀರಿನಲ್ಲಿ ಕುದಿಸಿ ತಯಾರಿಸಿದ ಕಷಾಯವನ್ನು ಸ್ವಲ್ಪ ಉಪ್ಪುಮಿಶ್ರಣದ ಜೊತೆ ಸೇವಿಸಿದರೆ ಜೀರ್ಣಶಕ್ತಿಯನ್ನು ಹೆಚ್ಚುಸುತ್ತದೆ.

 

6.ಹಾವು ಕಚ್ಚಿದಾಗ:

ತುಂಬೆ ಗಿಡದ ಎಲೆಯ ರಸವನ್ನು ಹಾವು ಕಚ್ಚಿರುವ ಜಾಗಕ್ಕೆ ಹಚ್ಚುವ ಪದ್ದತಿ ಇದೆ. ಹೀಗೆ ಮಾಡುವುದರಿಂದ ಹಾವಿನ ವಿಷವು ರಕ್ತದಲ್ಲಿ ಸೇರಿಕೊಳ್ಳದೆ ಸಾವು ಸಂಭವಿಸುವ ಸಾಧ್ಯತೆ ಕಡಿಮೆಯಾಗುತ್ತೆ ಅಂತ ಹೇಳಲಾಗುತ್ತದೆ.

 

7.ಮನೆಯ ಕ್ರಿಮಿ ಕೀಟಗಳ ಸಮಸ್ಯೆಗಳ ನಿವಾರಣೆಗೆ:

ಮನೆಯಲ್ಲಿ ತುಂಬೆ ಗಿಡದ ಹೊಗೆಯನ್ನು ಸ್ವಲ್ಪ ಪ್ರಮಾಣದಲ್ಲಿ ಹಾಕಿದರೆ ಆ ಹೊಗೆಯ ವಾಸನೆಗೆ ಸೊಳ್ಳೆ ಸೇರಿದಂತೆ ಅನೇಕ ಕ್ರಿಮಿಕೀಟಗಳು ಮನೆ ಒಳಗೆ ಪ್ರವೇಶಮಾಡುವುದಿಲ್ಲ.

 

8.ಶೀತ ತೊಂದರೆ ಇದ್ದರೆ.

ನಿಗದಿ,ಕೆಮ್ಮು,ಕಟ್ಟಿದ ಗಂಟಲಿನ ಸಮಸ್ಯೆ ಇದ್ದರೆ ತುಂಬೆ ಗಿಡದ ರಸವನ್ನು ಎರಡು ಚಮಚೆಯನ್ನು ಸೇವಿಸುವುದರಿಂದ ಶೀತವನ್ನು ಹೋಗಲಾಡಿಸಬಹುದು.

 

9.ಚರ್ಮರೋಗದ ನಿವಾರಣೆ:

ತುರಿಕೆ, ಚರ್ಮದಲ್ಲಿ ಕಲೆಗಳು ಇತ್ಯಾದಿ ಚರ್ಮ ಸಂಬಂಧಿ ಕಾಯಿಲೆ ಇರುವಂಥವರು ತುಂಬೆಗಿಡದ ರಸವನ್ನು ದೇಹಕ್ಕೆ ಹಚ್ಚಿಕೊಳ್ಳೋದು ಅಥವಾ ಸ್ನಾನದ ನೀರಿಗೆ ತುಂಬೆ ರಸವನ್ನು ಸೇರಿಸಿ ಪ್ರತಿನಿತ್ಯ ಸ್ನಾನ ಮಾಡುವುದರಿಂದ ಚರ್ಮದ ಸಮಸ್ಯೆಗಳು ಬಗೆಹರಿಯುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top