ಮನೋರಂಜನೆ

ದಿ ವಿಲನ್’ಗೂ ಮುನ್ನವೇ ಬರುಲು ಸಜ್ಜಾದ ರೆಬೆಲ್ ಸ್ಟಾರ್- ವಯಸ್ಸಾದ ಅಂಬಿ ಆಗಮನಕ್ಕೆ ಮುಹೂರ್ತ ಫಿಕ್ಸ್.

ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಕಿಚ್ಚ ಸುದೀಪ್ ಮುಖ್ಯಭೂಮಿಕೆಯಲ್ಲಿರುವ ಕಾರಣಕ್ಕೆ ಆರಂಭಕ್ಕೂ ಮುಂಚೆಯೇ ಸಾಕಷ್ಟು ಹೆಸರು ಮಾಡಿದ್ದ ಚಿತ್ರ `ಅಂಬಿ ನಿಂಗ್ ವಯಸ್ಸಾಯ್ತೋ’. ಬಹು ವರ್ಷಗಳ ನಂತರ ರೆಬೆಲ್ ಸ್ಟಾರ್ ಅಂಬರೀಷ್ ಅವರು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿರುವುದರಿಂದ ಚಿತ್ರದ ಮೇಲೆ ಒಂದಷ್ಟು ಕುತೂಹಲಗಳು ಮನೆ ಮಾಡಿವೆ. ಈಗಾಗಲೇ ಚಿತ್ರದ ಚಿತ್ರೀಕರಣ ಈಗಾಗಲೇ ಮುಕ್ತಾಯಗೊಂಡಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ. ಇಂಥಾ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರತಂಡದಿಂದ ಬ್ರೇಕಿಂಗ್ ನ್ಯೂಸ್ ಒಂದು ಹೊರಬಿದ್ದಿದೆ.

 

 

ಎಲ್ಲವೂ ಅಂದುಕೊಂಡಿದ್ದರೆ ಈ ಸಿನಿಮಾ ಯಾವಾಗಲೋ ತೆರೆಕಾಣಬೇಕಿತ್ತು, ಆದರೆ ಕಾರಣಾಂತರಗಳಿಂದ ಮುಂದಕ್ಕೆ ಹೋಗುತ್ತಿದ್ದ ಸಿನಿಮಾ ಕೊನೆಗೂ ಬಿಡುಗಡೆಯ ಹಂತಕ್ಕೆ ತಲುಪಿದೆ.. ಸದ್ಯ ಚಿತ್ರದ ಸಂಪೂರ್ಣ ಕೆಲಸ ಕಾರ್ಯಗಳು ಮುಕ್ತಾಯಗೊಂಡಿದ್ದು ಸೆಪ್ಟೆಂಬರ್ 28ರಂದು ಚಿತ್ರ ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಸದ್ಯ ಸೆನ್ಸಾರ್ ಹಂತದಲ್ಲಿರುವ ಚಿತ್ರ ಆದಷ್ಟುಬೇಗ ಸೆನ್ಸಾರ್ ಪ್ರಮಾಣಪತ್ರ ಪಡೆದು ನಂತರ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಗುತ್ತದೆ.. ಉಳಿದಂತೆ ಚಿತ್ರದ ಆಡಿಯೋವನ್ನು ಇದೇ ವಾರ ಲೋಕಾರ್ಪಣೆ ಮಾಡುವ ಪ್ಲಾನ್ ನಲ್ಲಿದೆ ಚಿತ್ರತಂಡ.

ಅಂದಹಾಗೆ ಕಿಚ್ಚ ಕ್ರಿಯೇಶನ್ಸ್ ಅರ್ಪಿಸಿ, ಕೆ.ಎಸ್.ಕೆ. ಶೋ ರೀಲ್ ಪ್ರೊಡಕ್ಷನ್ ಅಡಿಯಲ್ಲಿ ತಯಾರಾಗುತ್ತಿರುವ `ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರವನ್ನು ಕಿಚ್ಚನ ಶಿಷ್ಯ ಗುರುದತ್ ಗಾಣಿಗ ಎಂಬ 26ರ ಪೋರ ನಿರ್ದೇಶಿಸುತ್ತಿದ್ದಾನೆ. ಈ ಚಿತ್ರವನ್ನು ಕಿಚ್ಚ ಸುದೀಪ್ ಮತ್ತು ಮಂಜುನಾಥ್ ಗೌಡ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಬರುವ ಅಂಬಿಯವರ ಪ್ಲಾಶ್ ಬ್ಯಾಕ್ ಸನ್ನಿವೇಶದಲ್ಲಿ ಸುದೀಪ್ ಗೆ ಜೋಡಿಯಾಗಿ ಅಂದ್ರೆ ಸುಹಾಸಿನಿಯವರ ಯವ್ವನದ ಪಾತ್ರದಲ್ಲಿ ಶ್ರುತಿ ಹರಿಹರನ್ ನಟಿಸುತ್ತಿದ್ದಾರೆ. ಈ ಚಿತ್ರ ತಮಿಳಿನಲ್ಲಿ ಸೂಪರ್ ಹಿಟ್ಟಾಗಿದ್ದ ಪವರ್ ಪಾಂಡಿ ಚಿತ್ರದ ರೀಮೇಕ್. ಆದರೆ ಒಟ್ಟಾರೆ ಕಥೆ ಮತ್ತು ಸನ್ನಿವೇಷಗಳನ್ನು ಇಲ್ಲಿನ ನೇಟಿವಿಟಿಗೆ ಒಗ್ಗಿಸಿಕೊಂಡು ಗುರುದತ್ ದೃಷ್ಯ ಕಟ್ಟಿದ್ದಾರಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top