ಮನೋರಂಜನೆ

ವಯಸ್ಸಾದ ಅಂಬಿಯ ಕ್ಯಾಚಿ ಹಾಡುಗಳನ್ನ ಕೇಳಿದ್ರಾ? ರಿಲೀಸ್ ಆಗಿವೆ ಎಲ್ಲಾ ಹಾಡುಗಳು.

ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಕಿಚ್ಚ ಸುದೀಪ್ ಮುಖ್ಯಭೂಮಿಕೆಯಲ್ಲಿರುವ ಕಾರಣಕ್ಕೆ ಆರಂಭಕ್ಕೂ ಮುಂಚೆಯೇ ಸಾಕಷ್ಟು ಹೆಸರು ಮಾಡಿದ್ದ ಚಿತ್ರ `ಅಂಬಿ ನಿಂಗ್ ವಯಸ್ಸಾಯ್ತೋ’. ಬಹು ವರ್ಷಗಳ ನಂತರ ರೆಬೆಲ್ ಸ್ಟಾರ್ ಅಂಬರೀಷ್ ಅವರು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿರುವುದರಿಂದ ಚಿತ್ರದ ಮೇಲೆ ಒಂದಷ್ಟು ಕುತೂಹಲಗಳು ಮನೆ ಮಾಡಿವೆ.

 

 

ಈಗಾಗಲೇ ಬಿಡುಗಡೆ ದಿನಾಂಕವನ್ನು ಘೋಷಿಸಿರುವ ‘ಅಂಬಿ ನಿಂಗ್ ವಯಸ್ಸಯ್ತೋ’ ಚಿತ್ರದ ಆಡಿಯೋ ರಿಲೀಸ್ ಆಗಿದ್ದು ಸಂಪೂರ್ಣ ಹಾಡುಗಳು ಯೂಟ್ಯೂಬ್ ನಲ್ಲಿ ಲಭ್ಯವಿವೆ.. ಚಿತ್ರದಲ್ಲಿ ಒಟ್ಟು ಐದು ಹಾಡುಗಳು ಇದ್ದು, ಒಂದಕ್ಕಿಂತ ಒಂದು ಭಿನ್ನವಾಗಿವೆ.. ಐದರಲ್ಲಿ ಮೂರು ಹಾಡುಗಳಿಗೆ ‘ಕವಿರತ್ನ’ ಖ್ಯಾತಿಯ ನಾಗೇಂದ್ರಪ್ರಸಾದ್ ಸಾಹಿತ್ಯ ರಚಿಸಿದ್ದರೇ ಜೋಗಿ ಪ್ರೇಮ್ಸ್ ಮತ್ತು ಕವಿರಾಜ್ ತಲಾ ಒಂದೊಂದು ಹಾಡುಗಳನ್ನು ರಚಿಸಿದ್ದಾರೆ.. ಅರ್ಜುನ್ ಜನ್ಯಾ ಕಂಪೋಸ್ ಮಾಡಿರುವ ಹಾಡುಗಳಿಗೆ ಲಿರಿಕ್ಸ್ ಕೂಡ ಕೇಳೋದಕ್ಕೆ ಸಕತ್ ಕ್ಯಾಚಿ ಆಗಿವೆ ಎಂಬುದು ಪ್ರೇಕ್ಷಕರ ಅಭಿಪ್ರಾಯವಾಗಿದೆ.

 

 

ಸದ್ಯ ಚಿತ್ರದ ಸಂಪೂರ್ಣ ಕೆಲಸ ಕಾರ್ಯಗಳು ಮುಕ್ತಾಯಗೊಂಡಿದ್ದು ಸೆನ್ಸಾರ್ಅನ್ನು ಕೂಡ ಮುಗಿಸಿಕೊಂಡಿದೆ. ಸೆನ್ಸಾರ್ ಮಂಡಳಿಯಿಂದ ‘ಯೂ’ ಪ್ರಮಾಣಪತ್ರ ಪಡೆದಿರುವ ಈ ಚಿತ್ರ ಸೆಪ್ಟೆಂಬರ್ 27ರಂದು ತೆರೆಕಾಣುತ್ತಿದೆ..

ಅಂದಹಾಗೆ ಕಿಚ್ಚ ಕ್ರಿಯೇಶನ್ಸ್ ಅರ್ಪಿಸಿ, ಕೆ.ಎಸ್.ಕೆ. ಶೋ ರೀಲ್ ಪ್ರೊಡಕ್ಷನ್ ಅಡಿಯಲ್ಲಿ ತಯಾರಾಗುತ್ತಿರುವ `ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರವನ್ನು ಕಿಚ್ಚನ ಶಿಷ್ಯ ಗುರುದತ್ ಗಾಣಿಗ ಎಂಬ 26ರ ಪೋರ ನಿರ್ದೇಶಿಸಿದ್ದಾನೆ. ಈ ಚಿತ್ರವನ್ನು ಕಿಚ್ಚ ಸುದೀಪ್ ಮತ್ತು ಮಂಜುನಾಥ್ ಗೌಡ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಬರುವ ಅಂಬಿಯವರ ಪ್ಲಾಶ್ ಬ್ಯಾಕ್ ಸನ್ನಿವೇಶದಲ್ಲಿ ಸುದೀಪ್ ಗೆ ಜೋಡಿಯಾಗಿ ಅಂದ್ರೆ ಸುಹಾಸಿನಿಯವರ ಯವ್ವನದ ಪಾತ್ರದಲ್ಲಿ ಶ್ರುತಿ ಹರಿಹರನ್ ನಟಿಸುತ್ತಿದ್ದಾರೆ. ಈ ಚಿತ್ರ ತಮಿಳಿನಲ್ಲಿ ಸೂಪರ್ ಹಿಟ್ಟಾಗಿದ್ದ ಪವರ್ ಪಾಂಡಿ ಚಿತ್ರದ ರೀಮೇಕ್. ಆದರೆ ಒಟ್ಟಾರೆ ಕಥೆ ಮತ್ತು ಸನ್ನಿವೇಷಗಳನ್ನು ಇಲ್ಲಿನ ನೇಟಿವಿಟಿಗೆ ಒಗ್ಗಿಸಿಕೊಂಡು ಗುರುದತ್ ದೃಷ್ಯ ಕಟ್ಟಿದ್ದಾರಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top