ಅರೋಗ್ಯ

ಮಹಿಳೆಯರಿಗೆ ಶ್ರೋಣಿಯ ಸಮಸ್ಯೆ ಮತ್ತು ಮೂಳೆಗಳನ್ನು ಬಲಪಡಿಸಿಕೊಳ್ಳಲು ಇಲ್ಲಿದೇ ರಾಮಬಾಣ !

ಚಿಕ್ಕವರು ಮತ್ತು ದೊಡ್ಡವರು ಇವರಿಗೆ ಮೂಳೆಗಳನ್ನು ಗಟ್ಟಿಯಾಗಿರಲು ಮತ್ತು ಮಹಿಳೆಯರಿಗೆ ಶ್ರೋಣಿಯ ಹಲವಾರು ಸಮಸ್ಯೆಗಳು ಹಾಗೂ ಮೂಳೆಗಳನ್ನು ಬಲಪಡಿಸಲು ಉದ್ದಿನ ಕಾಳಿನ ಹಲ್ವಾವನ್ನು ತಿನ್ನುವುದರಿಂದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು.

ಉದ್ದಿನ ಕಾಲು ( ಉರದ್ ಧಲ್ ) ಹಲ್ವಾ ಬೇಕಾದ ಪದಾರ್ಥಗಳು:

ಉದ್ದಿನ ಬೆಳೆ( ಉದ್ದಿನ ಕಾಳು) – 200 ಗ್ರಾಂ
ನೀರು -300 ML
ತಾಟಿ ಬೆಲ್ಲ ಅಥವಾ ಉಂಡೆ ಬೆಲ್ಲ -200 ಗ್ರಾಂ
ಎಳ್ಳು ಎಣ್ಣೆ – 3 ಟೇಬಲ್ ಸ್ಪೂನ್

ಗೋಡಂಬಿ – ಸ್ವಲ್ಪ
ತುಪ್ಪ -3 ಟೇಬಲ್ ಸ್ಪೂನ್
ಏಲ್ಲಕ್ಕಿ ಪುಡಿ ಸ್ವಲ್ಪ

 

 

 

ಉದ್ದಿನ ಕಾಳು ಅಥವಾ (ಉರದ್ ಧಲ್) ಹಲ್ವಾ ಮಾಡುವ ವಿಧಾನ ಹೇಗೆ ಎಂಬುವುದನ್ನು ತಿಳಿದುಕೊಳೋಣ ಬನ್ನಿ.

ಮೊದಲಿಗೆ ಸ್ಟೋವ್ ಮೇಲೆ ಒಂದು ಬಾಂಡಲಿ ಇಟ್ಟು ಅದಕ್ಕೆ 200 ಗ್ರಾಂ ಉದ್ದಿನ ಬೆಳೆ(ಉದ್ದಿನ ಕಾಳು ) ಹಾಕಿ ಕೆಂಪಾಗಿ ಹುರಿದುಕೊಳ್ಳಬೇಕು ನಂತರ ಅದನ್ನು ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ಪುಡಿಮಾಡಿಕೊಳ್ಳಬೇಕು ನಂತರ ಸ್ಟೋವ್ ಮೇಲೆ ಸ್ಟೀಲ್ ಪಾತ್ರೆ ಇಟ್ಟು ಆದಲ್ಲಿ 300 ಎಂ,ಲ್ ನೀರನ್ನು ಹಾಕಬೇಕು ಅದರಲ್ಲಿ ಬೆಲ್ಲವನ್ನು ಹಾಕಿ ಚೆನ್ನಾಗಿ ಬೆಲ್ಲವನ್ನು ಕರಗಿಸಬೇಕು ನಂತರಸ್ಟೋವ್ ಮೇಲೆ ಬಾಂಡಲಿ ಇಟ್ಟು ಅದಕ್ಕೆ 3 ಟೇಬಲ್ ಸ್ಪೂನ್ ಎಳ್ಳು ಎಣ್ಣೆ ಹಾಕಬೇಕು ಎಣ್ಣೆ ಕಾದ ಮೇಲೆ ಗೋಡಂಬಿ ಹಾಕಿ ತೆಳು ಕಂದು ಬಣ್ಣ ಬಂದ ಮೇಲೆ ಅದೇ ಬಾಂಡಲಿಗೆ ಕರಗಿಸಿರುವ ಬೆಲ್ಲದ ನೀರನ್ನು ಹಾಕಿ ನೀರು ಕುದಿ ಬಂದ ಮೇಲೆ ಉದ್ದಿನ ಕಾಳಿನ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಅದನ್ನು ಗಟ್ಟಿ ಆಗುವವರೆಗೂ ಕೈ ಆಡಿಸಬೇಕು ನಂತರ 3 ಟೇಬಲ್ ಸ್ಪೂನ್ ತುಪ್ಪ ಮತ್ತು ಏಲ್ಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಮಾಡಿ ಸಣ್ಣ ಉರಿಯಲ್ಲಿ 10 ನಿಮಿಷದವರಿಗೆ ಬೇಯಿಸಬೇಕು ಬೆಂದ ಮೇಲೆ ಸ್ಟೋವ್ ಆಫ್ ಮಾಡಿ .ನಂತರ ಒಂದು ತಟ್ಟೆಗೆ ತುಪ್ಪವನ್ನು ಸವರಿ ಅದಕ್ಕೆ ಉದ್ದಿನ ಕಾಳಿನ ಹಲ್ವಾ ವನ್ನು ಹಾಕಿ ನಿಮಗೆ ಬೇಕಾದ ಆಕಾರದಲ್ಲಿ ಕಟ್ಟು ಮಾಡಿ ಗೋಡಂಬಿಯಿಂದ ಅಲಂಕರಿಸಿದರೆ ಸವಿಯಲು ಸಿದ್ದ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top