fbpx
ಅರೋಗ್ಯ

ದ್ರಾಕ್ಷಿ ಕಣ್ಣಿನ ರೇಟಿನಾ ಸಮಸ್ಯೆ ದೂರ ಮಾಡುತ್ತಂತೆ ಇನ್ಯಾಕೆ ತಡ ಒಂದು ಗೊಂಚಲು ಹಂಗೆ ತಿಂದಾಕಿ.

ಪ್ರತಿ ನಿತ್ಯ ಈ ಹಣ್ಣನ್ನ ತಿಂದರೆ ದೃಷ್ಟಿದೋಷ ದೂರ ದೂರ.

 

 

 

ನಾವು ದಿನನಿತ್ಯ ಹಲವು ರೀತಿಯ ಹಣ್ಣುಗಳನ್ನ ತಿನ್ನುತ್ತೀವಿ. ಆದರೆ, ಅವುಗಳ ಮಹತ್ವ ಮಾತ್ರ ನಮಗೆ ಗೊತ್ತೇ ಇರುವುದಿಲ್ಲ. ಆಗಿಂದಾಗ್ಗೆ ನಡೆಯುವ ಅಧ್ಯಯನಗಳು ಆ ಹಣ್ಣುಗಳ ಮಹತ್ವದ ಬಗ್ಗೆ ನಮಗೆ ಕಣ್ಣು ತೆರೆಸುತ್ತವೆ. ಅಂತಹ ಮಹತ್ವಪೂರ್ಣ ಹಣ್ಣುಗಳ ಸಾಲಿಗೆ ಈಗ ದ್ರಾಕ್ಷಿ ಕೂಡ ಸೇರಿದೆ.ಆರೋಗ್ಯದ ವಿಚಾರದಲ್ಲಿ ದ್ರಾಕ್ಷಿ ನಿಜವಾಗಿಯೂ ಒಂದು ಚಮತ್ಕಾರಿ ಹಣ್ಣು ಎನ್ನುತ್ತಿದೆ ಇತ್ತೀಚಿನ ಒಂದು ಅಧ್ಯಯನ. ಒಣ ಚರ್ಮ ಸಮಸ್ಯೆ ನಿವಾರಣೆ, ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಈ ಹಣ್ಣಿನ ಮತ್ತೊಂದು ಚಮತ್ಕಾರಿ ಗುಣ ಇದೀಗ ಬೆಳಕಿಗೆ ಬಂದಿದೆ.ಪ್ರತಿನಿತ್ಯ ದ್ರಾಕ್ಷಿ ಹಣ್ಣನನ್ನ ತಿನ್ನುವುದರಿಂದ ಕಣ್ಣಿನ ದೃಷ್ಟಿ ಭಾರೀ ಪ್ರಮಾಣದಲ್ಲಿ ವೃದ್ಧಿಯಾಗುತ್ತದೆಯಂತೆ.ಡಯಟ್‍ಗೆ ಅನುಕೂಲವಾದ ಅತ್ಯಮೂಲ್ಯ ಅಂಶಗಳು ದ್ರಾಕ್ಷಿಯಲ್ಲಿದ್ದು, ಇದು ಕಣ್ಣಿನ ರೆಟಿನಾಗೆ ರಕ್ಷಣೆ ನೀಡುವ ಜೊತೆಗೆ ಕಾರ್ಯವನ್ನ ಉತ್ತಮಗೊಳಿಸುತ್ತದೆ ಎಂದು ಫ್ಲಾರಿಡಾದ ಮಿಯಾಮಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಬಿಗೈಲ್ ಹ್ಯಾಕಮ್ ಹೇಳಿದ್ಧಾರೆ.

ರೆಟಿನಾ ಕಣ್ಣಿನ ಬಹುಮುಖ್ಯ ಭಾಗವಾಗಿದ್ದು, ಬೆಳಕಿಗೆ ಪ್ರತಿಕ್ರಿಯಿಸುವ ಜೀವಕೋಶಗಳನ್ನ ಒಳಗೊಂಡಿರುತ್ತದೆ. ದ್ರಾಕ್ಷಿಯಲ್ಲಿರುವ ಕೆಲ ಪ್ರೋಟೀನ್ ರೆಟಿನಾ ಕ್ಷಯವನ್ನ ತಡೆದು, ದೀರ್ಘಕಾಲ ಕೆಲಸ ನಿರ್ವಹಿಸುವಂತೆ ಮಾಡುತ್ತವೆಯಂತೆ.ಒಟ್ಟಿನಲ್ಲಿ, ಈ ಅಧ್ಯಯನದ ಸಾರಾಂಶವೆಂದರೆ ಪ್ರತಿನಿತ್ಯ ದ್ರಾಕ್ಷಿ ತಿನ್ನುವುದರಿಂದ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬಹುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top