ದೇವರು

ಮಾಟ ಮಂತ್ರ ದುಷ್ಟ ಶಕ್ತಿಗಳಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಅಂದ್ರೆ ತಪ್ಪದೆ ಈ ಶಕ್ತಿಯುತ ಹನುಮನ ದರ್ಶನ ಮಾಡಿ ಸಾಕು

ಉತ್ತರಾಭಿಮುಖವಾಗಿರುವ ಈ ಹನುಮನ ದೇವಾಲಯಕ್ಕೆ ಬಂದರೆ ನಿಮ್ಮ ಜೀವನದಲ್ಲಿರುವ ಕಷ್ಟಗಳೆಲ್ಲಾ ಪರಿಹಾರವಾಗುತ್ತವೆ.
ಜೀವನದಲ್ಲಿ ಕಷ್ಟಗಳಿದ್ದರೆ, ಈ ಹನುಮಂತನ ದೇಗುಲಕ್ಕೆ ಬಂದು ಕೈ ಮುಗಿದರೆ ಸಾಕು , ಈ ಪವಾಡ ವಿಸ್ಮಯಕಾರಿ ಹನುಮಂತ ದೇವರ ದರ್ಶನ ಪಡೆದರೆ ಸಾಕು, ನಮ್ಮ ಸಕಲ ಸಂಕಷ್ಟಗಳು ಕೂಡ ದೂರವಾಗುತ್ತವೆ.ಸುಮಾರು 700 ವರ್ಷಗಳ ಇತಿಹಾಸ ಹೊಂದಿರುವ ಈ ದೇವಾಲಯ ಇದಾಗಿದೆ. ವ್ಯಾಸರಾಯರು ಪ್ರತಿಷ್ಠಾಪಿಸಿರುವ ಮಹಾಶಕ್ತಿಶಾಲಿ ಹನುಮಂತನು ಮಾಟ ಮಂತ್ರ ದುಷ್ಟ ಶಕ್ತಿಗಳಿಂದ ದೂರ ಮಾಡುತ್ತಾನೆ. ಹನುಮನ ದರ್ಶನ ಪಡೆದು ಇಲ್ಲಿ ಹರಕೆ ಹೊತ್ತರೆ ಸಾಕು, ಮನೆಯವರಿಗೆ ಯಾವುದೇ ದುಷ್ಟ ಶಕ್ತಿಯ ಕಾಟವಿದ್ದರೂ ದೂರವಾಗುವುದು ಖಚಿತ. ಎಂತಹ ದುಷ್ಟ ಶಕ್ತಿಗಳ ಕಾಟ ಇರುವುದಿಲ್ಲ, ಅಭಯ ನೀಡುವ ಹನುಮಂತ ದೇವನು ಇವನು.ಸಾಮಾನ್ಯವಾಗಿ ಹನುಮಂತನ ದೇವಾಲಯದಲ್ಲಿನ ಹನುಮಂತ ದೇವರು ದಕ್ಷಿಣಾಭಿಮುಖವಾಗಿ ಇರುತ್ತಾನೆ. ಆದರೆ ಈ ದೇವಾಲಯದಲ್ಲಿ ಉತ್ತರಾಭಿಮುಖವಾಗಿರುವುದು ವಿಶೇಷ . ಆದ್ದರಿಂದ ತುಂಬಾ ವಿಶೇಷವಾಗಿರುವ ಈ ಆಂಜನೇಯ ಸ್ವಾಮಿ ಪ್ರಸಿದ್ಧಿ ಪಡೆದು, ಭಕ್ತರ ಇಷ್ಟಾರ್ಥವನ್ನು ಈಡೇರಿಸುವ ಅಭಯಾಂಜನೇಯನಿವನು.

 

 

 

ತೆಂಗಿನಕಾಯಿ ಹರಕೆ:ಇಲ್ಲಿನ ದೇಗುಲಕ್ಕೆ ಬಂದಾಗ ನಿಮ್ಮ ಮನೋಕಾಮನೆಯನ್ನು ನೆನೆಸಿಕೊಂಡು ತೆಂಗಿನಕಾಯಿಯನ್ನು ಕಟ್ಟಿ ಹರಕೆ ಹೊತ್ತು ಹೋದರೆ 48 ದಿನಗಳಲ್ಲಿ ನಿಮ್ಮ ಕಾರ್ಯ ಸಿದ್ಧಿಸುವುದು ಖಚಿತ. ಈ ರೀತಿ ಹರಕೆ ಹೊತ್ತರೆ ಈಗಾಗಲೇ ಬಹಳಷ್ಟು ಮಂದಿ ಜೀವನದಲ್ಲಿರುವ ಸಂಕಷ್ಟಗಳನ್ನು ದೂರವಾಗಿಸಿಕೊಂಡಿದ್ದಾರೆ.

ಜೇನುತುಪ್ಪದ ಅಭಿಷೇಕ:ನಂತರ ಈ ಹನುಮಂತನಿಗೆ ಜೇನುತುಪ್ಪ ಎಂದರೆ ಬಹಳ ಇಷ್ಟ ನಿಮ್ಮ ಜೀವನದಲ್ಲಿ ಇರುವ ಎಲ್ಲಾ ಕಷ್ಟಗಳು ದೂರವಾಗಲಿ ಎಂದು ಜೇನುತುಪ್ಪದ ಅಭಿಷೇಕವನ್ನು ಮಾಡಿದರೆ ಕ್ಷಣಮಾತ್ರದಲ್ಲಿ ನಿಮ್ಮ ಕಷ್ಟಗಳು ದೂರವಾಗುತ್ತವೆ.ಸಾಮಾನ್ಯವಾಗಿ ಆಂಜನೇಯನ ದೇವಸ್ಥಾನಗಳಲ್ಲಿ ಈ ರೀತಿಯ ಹರಕೆ ಸಂಪ್ರದಾಯ ಇರುವುದಿಲ್ಲ. ತೆಂಗಿನಕಾಯಿ ಕಟ್ಟಿ 48 ದಿನಗಳಲ್ಲಿ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಬಹುದು. ಜೊತೆಗೆ ನಿಮ್ಮ ಕಷ್ಟಗಳು ಕಳೆಯಲಿ ಎಂದು ಜೇನು ತುಪ್ಪದ ಅಭಿಷೇಕ ಮಾಡಿಸಿದರೆ ನಕಾರಾತ್ಮಕ ಶಕ್ತಿ ತೊಲಗಿ ನಿಮ್ಮ ಮನೆಯಲ್ಲಿ ಸಿರಿ, ಸಂಪತ್ತು, ಧನ, ಧಾನ್ಯ ಸಮೃದ್ಧಿಯಾಗಿ ನೆಲೆಸುತ್ತದೆ.

 

ಶ್ರೀ ವ್ಯಾಸರಾಯರು ನಿರ್ಮಿಸಿರುವ ದೇಗುಲಗಳಲ್ಲಿ ಅತಿ ವಿಭಿನ್ನ ಮತ್ತು ವಿಶಿಷ್ಟವಾದ ಶಕ್ತಿ ಹೊಂದಿರುವ ಹನುಮಂತನಿವನು. ಸುಮಾರು ನೂರು ವರ್ಷಗಳಿಂದ ಇಂತಹ ಪವಾಡ ಮಾಡುತ್ತಾ ಇಲ್ಲಿ ನೆಲೆಸಿದ್ದಾನೆ.ಈ ಕ್ಷೇತ್ರಕ್ಕೆ ನೀವು ಬರಬೇಕೆಂದರೆ ಚಾಮರಾಜನಗರಕ್ಕೆ ಬಂದು ಅಲ್ಲಿ ಚಾಮರಾಜೇಶ್ವರ ದೇವಸ್ಥಾನದ ಬಳಿ ಈ ಹನುಮಂತ ದೇವನು ನೆಲೆಸಿದ್ದಾನೆ. ಭಕ್ತರ ಸಕಲ ಇಷ್ಟಾರ್ಥಗಳನ್ನು ಭಕ್ತರನ್ನು ಮಕ್ಕಳಂತೆ ಸಲಹುವ ಶ್ರೀ ಪವಾಡ ವಿಸ್ಮಯಕಾರಿ ಹನುಮಂತ ದೇವನಿವನು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top