fbpx
ಭವಿಷ್ಯ

07 ಅಕ್ಟೋಬರ್: ನಾಳೆಯ ಭವಿಷ್ಯ ಮತ್ತೆ ಪಂಚಾಂಗ

ಭಾನುವಾರ, ೦೭ ಅಕ್ಟೋಬರ್ ೨೦೧೮
ಸೂರ್ಯೋದಯ : ೦೬:೧೨
ಸೂರ್ಯಾಸ್ತ : ೧೮:೦೨
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಭಾದ್ರಪದ

ಪಕ್ಷ : ಕೃಷ್ಣ ಪಕ್ಷ
ತಿಥಿ : ತ್ರಯೋದಶೀ – ೧೪:೦೨ ವರೆಗೆ
ನಕ್ಷತ್ರ : ಹುಬ್ಬ – ೧೫:೧೯ ವರೆಗೆ
ಯೋಗ : ಶುಕ್ಲ – ೨೦:೩೫ ವರೆಗೆ
ಸೂರ್ಯ ರಾಶಿ : ಕನ್ಯಾ

ಅಭಿಜಿತ್ ಮುಹುರ್ತ: ೧೧:೪೩ – ೧೨:೩೧
ಅಮೃತಕಾಲ: ೦೯:೨೫ – ೧೦:೫೩
ರಾಹು ಕಾಲ:೧೬:೩೩ – ೧೮:೦೨
ಗುಳಿಕ ಕಾಲ:೧೫:೦೪ – ೧೬:೩೩
ಯಮಗಂಡ:೧೨:೦೭ – ೧೩:೩೬

ಕಷ್ಠಗಳು ಮನುಜನಿಗೆ ಬರದೆ ಮರಕ್ಕೆ ಬರುವುದಿಲ್ಲ. ಅಂತೆಯೆ ಈದಿನದ ಗಹಸ್ಥಿತಿ ಸ್ವಲ್ಪ ನಿಮ್ಮ ವಿರುದ್ಧವಾಗಿರುವುದು. ತಾಳ್ಮೆಯನ್ನು ಕಳೆದುಕೊಳ್ಳಬೇಡಿ. ತಾಳಿದವನು ಬಾಳಿಯಾನು ಎಂಬುದನ್ನು ನೆನಪಿಗೆ ತಂದುಕೊಳ್ಳಿರಿ.

ಹೃದಯದ ಮಾತುಗಳನ್ನು ಹಿಡಿತದಲ್ಲಿಡಿ. ಕಲ್ಲಿನಂತೆ ಕುಳಿತು ಗಡಿಯಾರದಂತೆ ಕೆಲಸ ಮಾಡಬೇಕಾಗುವುದು. ತಾವು ಇದ್ದ ಸ್ಥಳದಲ್ಲೇ ಇದ್ದು ಕಾರ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸುವಿರಿ.

ಕೋತಿ ಮೊಸರನ್ನ ತಿಂದು ಮೇಕೆ ಬಾಯಿಗೆ ಒರೆಸಿದಂತೆ ಇತರರು ಮಾಡುವ ತಪ್ಪಿಗೆ ನಿಮ್ಮನ್ನು ಹೊಣೆಗಾರರನ್ನಾಗಿ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಎಚ್ಚರಿಕೆಯಿಂದ ಇರಿ. ಮುಸುಕಿನ ಗುದ್ದಾಟಕ್ಕೆ ತೆರೆ ಬೀಳಲಿದೆ.

ನಿಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಸಂದರ್ಭ ಬರಬಹುದು. ನಿಮ್ಮ ಯಶಸ್ಸು ಕೆಲವರ ಅಸೂಯೆಗೂ ಕಾರಣವಾಗಬಹುದು. ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಸಂಗತಿಯೊಂದರ ಕುರಿತು ಕೊನೆಗೂ ಅಧಿಕೃತ ಮಾಹಿತಿ ದೊರೆಯುವುದು.

 

ಇದು ಪರಿವರ್ತನೆಯ ಸಮಯ. ಆರಂಭದಲ್ಲಿ ಕಿರಿಕಿರಿ ಎನ್ನಿಸಿದರೂ ನಂತರ ಒಳಿತಾಗುವುದು. ಭವಿಷ್ಯದ ದೃಷ್ಟಿಯಿಂದ ನಿಮಗಿದು ಯಶಸ್ಸಿನ ದೊಡ್ಡ ಮೆಟ್ಟಿಲು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.

 

ಯಾರೊಂದಿಗೂ ವಾದ-ವಿವಾದಕ್ಕೆ ಮುಂದಾಗಬೇಡಿ. ಉದ್ವೇಗದಲ್ಲಿ ಬಾಯಿತಪ್ಪಿ ಆಡುವ ಸಣ್ಣ ಮಾತೇ ದೊಡ್ಡ ಜಗಳಕ್ಕೆ ನಾಂದಿ ಹಾಡುವ ಅಪಾಯವಿದೆ. ಸಣ್ಣಪುಟ್ಟ ನಿರಾಶೆ ಕಾಡಬಹುದು. ಆಶಾವಾದಕ್ಕಿಂತ ಉತ್ತಮ ಪರಿಹಾರವಿಲ್ಲ.

 

ಕುಹಕದ ಮಾತುಗಳಿಗೆ ಬೆಲೆ ನೀಡಬೇಡಿ. ಕೋಪವನ್ನು ಹಿಡಿತದಲ್ಲಿಟ್ಟುಕೊಳ್ಳಿರಿ. ಕೋಪವು ಅನರ್ಥಕ್ಕೆ ದಾರಿ ಮಾಡಿಕೊಡುವುದು. ಗುರು ಹಿರಿಯರ ಸಲಹೆ ಸ್ವೀಕರಿಸಿ. ನಿಮ್ಮ ಮನೆ ದೇವರನ್ನು ಭಕ್ತಿಯಿಂದ ಪ್ರಾರ್ಥಿಸಿರಿ.

 

ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿದೆ. ಏನೇ ಕಷ್ಟಕರ ಕೆಲಸ ಎದುರಾದರೂ ಧೈರ್ಯವಾಗಿ ಎದುರಿಸುತ್ತೇನೆ ಎಂಬ ಭಾವನೆ ಇದೆ. ಇದು ಉತ್ತಮ ನಾಯಕನಲ್ಲಿರುವ ಗುಣ. ನೀವು ದಿನ ದಿನಕ್ಕೂ ಪ್ರಸಿದ್ದಿಯನ್ನು ಹೊಂದುತ್ತಾ ಹೋಗುವಿರಿ.

 

ನಿಮ್ಮ ಮನಸ್ಸನ್ನು ಕೊರೆಯುತ್ತಿರುವ ವಿಷಯವನ್ನು ಬಗೆಹರಿಸಿಕೊಳ್ಳಲು ಇಂದು ಶುಭದಿನ. ಸ್ನೇಹಿತರ ಸಲಹೆಗಳನ್ನು ತಿರಸ್ಕಾರ ಮಾಡದಿರಿ. ಗುರು ಹಿರಿಯರ ಆಶೀರ್ವಾದ ಪಡೆಯುವುದು ಒಳ್ಳೆಯದು.

ಸಣ್ಣಸಣ್ಣ ವಿಷಯಗಳನ್ನೆ ದೊಡ್ಡದು ಮಾಡಿಕೊಳ್ಳುವಿರಿ. ತಮಾಷೆಗೆ ಆಡಿದ ಮಾತುಗಳನ್ನು ಗಂಭೀರವಾಗಿ ತೆಗೆದುಕೊಂಡು ಸಂಕಟ ಪಡುವುದನ್ನು ಬಿಟ್ಟು ಬಿಡಿ. ಎಲ್ಲರೊಂದಿಗೆ ನಗು-ನಗುತಾ ಕಾಲ ಕಳೆಯಿರಿ.

 

 

ನಿಮ್ಮ ಎದುರು ನಿಂತು ಮಾತನಾಡುವ ಧೈರ್ಯವಿಲ್ಲದ ಶತ್ರುಗಳು ಬೇರೆ ರೀತಿಯ ವ್ಯೂಹವನ್ನು ರಚಿಸುವರು. ಈ ಬಗ್ಗೆ ಹೆಚ್ಚು ಜಾಗೃತರಾಗಿ. ಕಲ್ಮಶ ರಹಿತ ನಿಮ್ಮ ಧೈರ್ಯ ಧೋರಣೆಗಳು ನಿರೀಕ್ಷಿತ ಯಶಸ್ಸನ್ನು ತಂದುಕೊಡುವುದು.

ಕಷ್ಟಪಡುವ ಮನಸ್ಸಿದೆ. ಆದರೆ ಬೆಂಬಲಿಸಬೇಕಾದ ಗೆಳೆಯರು ಕೈಕೊಡುವ ಸಾಧ್ಯತೆ ಇರುತ್ತದೆ. ಆದರೆ ನಿಮ್ಮ ಆತ್ಮಬಲ ಮತ್ತು ನಿಮಗಿರುವ ದೈವಬಲದ ಮೇಲೆ ಎಲ್ಲಾ ಕಾರ್ಯವೂ ಸುಲಲಿತವಾಗುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top