ಭವಿಷ್ಯ

ಗುರು ಗ್ರಹ ರಾಶಿ ಪರಿವರ್ತನೆಗೊಂಡು ವೃಶ್ಚಿಕರಾಶಿಯಲ್ಲಿ ಸ್ಥಿತನಿರುತ್ತಾನೆ ಇದರಿಂದ 12 ರಾಶಿಯವರ ಮೇಲೆ ಆಗುವ ಶುಭ-ಅಶುಭ ಫಲ ಏನು ಅಂತ ತಿಳ್ಕೊಳ್ಳಿ

ಗುರು ಗ್ರಹದ ರಾಶಿ ಪರಿವರ್ತನೆಯಿಂದ ವಿದ್ಯಾರ್ಥಿಗಳ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ.ವಿದ್ಯೆ, ಬುದ್ಧಿ, ಆಯಸ್ಸು, ಆರೋಗ್ಯ ಎಲ್ಲವೂ ಬೇಕು ಎಂದರೆ ಗುರುಬಲ ಇರಬೇಕು ಎಂದು ಹೇಳಲಾಗುತ್ತದೆ. ತುಲಾ ರಾಶಿಯಿಂದ ವೃಶ್ಚಿಕ ರಾಶಿಯವರಿಗೆ ಗುರುವಿನ ಸಂಚಾರವಾಗಿದೆ. ಇನ್ನೂ ಒಂದು ವರ್ಷದವರೆಗೆ ಈ ಗುರುವಿನ ಪ್ರಭಾವ ಇರಲಿದೆ. ಇನ್ನು ಗುರು ವೃಶ್ಚಿಕರಾಶಿಯಲ್ಲಿ ಸ್ಥಿತನಿರುತ್ತಾನೆ.ಗುರುವಿನ ಈ ರಾಶಿ ಪರಿವರ್ತನೆಯಿಂದ ಯಾವ ರಾಶಿಯವರಿಗೆ ಗುರುಬಲ ಇರುತ್ತದೆ.ಗುರುಬಳ ಬರಬೇಕು ಎಂದರೆ ಏನು ಮಾಡಬೇಕು ?
ಮಕ್ಕಳ ವಿದ್ಯಾಭ್ಯಾಸ ಬಹಳ ಮುಖ್ಯ. ಅವರ ಜೀವನ ನಿಂತಿರುವುದೇ ವಿದ್ಯಾಭ್ಯಾಸದ ಮೇಲೆ,ವಿದ್ಯಾಭ್ಯಾಸಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ, ಮಕ್ಕಳಲ್ಲಿ ವಿದ್ಯಾಭ್ಯಾಸದ ಕಡೆಗೆ ಇರುತ್ತದೆ , ಹಾಗಾಗಿ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಇಂದು ಮೊದಲು ತಿಳಿದುಕೊಳ್ಳೋಣ.

 

 

 

ಮೇಷ ರಾಶಿ:ವಿದ್ಯಾಭ್ಯಾಸದಲ್ಲಿ ಗೊಂದಲಗಳನ್ನು ಉಂಟು ಉಂಟು ಮಾಡುತ್ತದೆ, ಇಲ್ಲಿಯವರೆಗೂ ಮೇಷ ರಾಶಿಯವರಿಗೆ ಗುರುಬಲ ಇತ್ತು, ಈಗ ವಿದ್ಯಾಭ್ಯಾಸದಲ್ಲಿ ಸ್ವಲ್ಪ ಹಿನ್ನಡೆಯಾಗಲಿದೆ, ಆದರೆ ಗುರುದೃಷ್ಟಿ ಇರುವುದರಿಂದ ಗೊಂದಲವನ್ನು ನಿವಾರಣೆ ಮಾಡಿಕೊಂಡರೆ ಎಲ್ಲವೂ ನಿವಾರಣೆಯಾಗಿ ವಿದ್ಯಾಭಿವೃದ್ಧಿ ಆಗುತ್ತದೆ, ಓದುವುದನ್ನು ಮರೆಯುವುದು ಮತ್ತು ಗೊಂದಲಕ್ಕೀಡಾಗುವುದು ಈ ರೀತಿಯ ಸಂದರ್ಭಗಳು ಎದುರಾಗುತ್ತವೆ .ನನಗೆಲ್ಲವೂ ಗೊತ್ತು ಎನ್ನುವ ಪರಿಸ್ಥಿತಿಯಿಂದ ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗಲಿದೆ
ವೃಷಭ ರಾಶಿ:ಅದ್ಭುತವಾದಂತಹ ವಿದ್ಯಾಭ್ಯಾಸ ಯೋಗ ಕೂಡಿ ಬರುತ್ತದೆ, ಫೇಲಾಗುವ ಮಕ್ಕಳು ಕೂಡ ಪಾಸಾಗುತ್ತಾರೆ, ತುಂಬಾ ಹೆಚ್ಚು ಕಡಿಮೆ ಪರ್ಸೆಂಟೇಜ್ ತೆಗೆಯುವ ಮಕ್ಕಳು ಕೂಡ ಅತಿ ಹೆಚ್ಚಿನ ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದುತ್ತಾರೆ.
ಮಿಥುನ ರಾಶಿ:ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗುವ ಸಾಧ್ಯತೆ ಹೆಚ್ಚಾಗಿದೆ, ಹಾಗಾಗಿ ಗುರುಬಲವು ಬೇಕು.

 

ಕಟಕ ರಾಶಿ:ವಿದ್ಯಾಭ್ಯಾಸ ಪ್ರಗತಿ, ಆದರೆ ಆರೋಗ್ಯ ಕೆಡುತ್ತದೆ, ಪರೀಕ್ಷೆಯ ಸಮಯದಲ್ಲಿ ಆರೋಗ್ಯ ಹದಗೆಡುವ ಸಂಭವ ಹೆಚ್ಚಾಗಿದೆ.
ಸಿಂಹ ರಾಶಿ:ಸಿಂಹ ರಾಶಿಯವರಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ, ಯಾವುದೋ ಬೇಡದ ಕೆಲಸ ಕಾರ್ಯಗಳು ಆಲೋಚನೆಗಳಿಗೆ ಗಮನವನ್ನು ಕೊಟ್ಟು ಅಥವಾ ಪ್ರೀತಿ ಪ್ರೇಮಗಳಲ್ಲಿ ಬಿದ್ದು ವಿದ್ಯಾಭ್ಯಾಸವನ್ನು ದೂರ ಮಾಡಿ ಕೊಳ್ಳುತ್ತಾರೆ, ಅದನ್ನು ಬಿಟ್ಟರೆ ಅದ್ಭುತವಾದ ವಿದ್ಯಾಭ್ಯಾಸ ಇವರಿಗೆ ಇದೆ.
ಕನ್ಯಾ ರಾಶಿ:ಕನ್ಯಾ ರಾಶಿಯವರಿಗೆ ಅನುಕೂಲಗಳು ಜಾಸ್ತಿ ಇದೆ, ಆದರೆ ಮರೆವು ಹೆಚ್ಚಾಗಿ ಕಾಡುತ್ತದೆ, ಓದಿದ್ದೆಲ್ಲವೂ ಮರೆತು ಹೋಗುವ ಸಾಧ್ಯತೆ ಹೆಚ್ಚಾಗಿದೆ.
ತುಲಾ ರಾಶಿ:ವಿದ್ಯಾಭ್ಯಾಸದಲ್ಲಿ ಅನುಕೂಲ ಪ್ರಾಪ್ತಿ,ಅನಗತ್ಯ ಒತ್ತಡಗಳಿಂದ ವಿದ್ಯಾರ್ಥಿಗಳು ಕಡಿಮೆ ಅಂಕಗಳನ್ನು ಗಳಿಸುತ್ತಾರೆ,ಪ್ರಯತ್ನ ಪಟ್ಟರೂ ಕೂಡ ಒತ್ತಡದಿಂದ ಅಂಕಗಳು ಕಡಿಮೆ ಬರಲಿವೆ.
ವೃಶ್ಚಿಕ ರಾಶಿ:ಗುರುವಿನ ಸಂಚಾರದಿಂದ ಅನಗತ್ಯ ಭಾವನೆಗಳಿಗೆ ಸ್ಪಂದಿಸುತ್ತೀರ,ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವುದಲ್ಲದೆ, ಟಿ.ವಿ ಮಾಧ್ಯಮ,ಮೊಬೈಲ್ ಕಡೆ ಹೆಚ್ಚಿನ ಗಮನವನ್ನು ಕೊಟ್ಟು ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗಲಿದೆ, ಆದ್ದರಿಂದ ಸ್ವಲ್ಪ ಎಚ್ಚರಿಕೆಯಿಂದಿರಿ.

 

 

 

ಧನಸ್ಸು ರಾಶಿ:ಆರೋಗ್ಯದಲ್ಲಿ ಏರುಪೇರು, ಸೋಮಾರಿತನ ,ವಿದ್ಯೆ ತಲೆಗೆ ಹತ್ತುವುದಿಲ್ಲ,ಹಿರಿಯರು ಏನೇ ಹೇಳಿದರೂ ಅದು ಅವರ ತಲೆಗೆ ಹೋಗುವುದೇ ಇಲ್ಲ.ಒರಟುತನ,ಉಡಾಫೆ ಇದೆಲ್ಲದರಿಂದ ವಿದ್ಯಾರ್ಥಿಗಳಿಗೆ ವಿದ್ಯೆಯಲ್ಲಿ ಹಿನ್ನೆಡೆಯಾಗಲಿದೆ.
ಮಕರ ರಾಶಿ:ಯಾಕೋ ಗಾಬರಿ,ಭಯ,ನನಗೆ ಎಲ್ಲ ಗೊತ್ತು ಎಂದು ಅಂದುಕೊಳ್ಳುವುದರಿಂದ ವಿದ್ಯಾಭ್ಯಾಸದಲ್ಲಿ ಹಿನ್ನಡೆ.ಸ್ವಯಂಕೃತ ಅಪರಾಧದಿಂದ ತಾವೇ ಗೊಂದಲಕ್ಕೆ ಒಳಗಾಗುತ್ತಾರೆ.
ಕುಂಭ ರಾಶಿ:ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಹೊಂದುವ ಸಾಧ್ಯತೆ ಹೆಚ್ಚಾಗಿದೆ,ವಿದ್ಯಾಭ್ಯಾಸ ಮಾಡಬೇಕು ಎನ್ನುವ ಮನಸ್ಸು ಮೂಡುತ್ತದೆ,ಅದ್ಭುತವಾದ ಅವಕಾಶಗಳು ಹುಡುಕಿಕೊಂಡು ಬರುತ್ತವೆ.
ಮೀನ ರಾಶಿ:ವಿದ್ಯಾಭ್ಯಾಸದಲ್ಲಿ ಹಿನ್ನಡೆ,ಎಳೆದಾಟಗಳು ಆಗುವ ಸಾಧ್ಯತೆಯಿದೆ,ಗುರುವಿನ ಮಾರ್ಗದಲ್ಲಿ ಮತ್ತು ಶಿಕ್ಷಕರ ಹೇಳಿದ ಮಾರ್ಗದಲ್ಲಿ ಹೇಳಿದಂತೆ ನೆಡೆದರೆ ವಿದ್ಯಾಭ್ಯಾಸದ ಹಾದಿ ಸುಗಮವಾಗುತ್ತದೆ.ಶನಿ ದೃಷ್ಟಿ ಇರುವುದರಿಂದ ಮಂಧಗತಿಯ ಮನೋಭಾವ ಈಗ ಮಾಡುವ ಕೆಲಸ ಆಮೇಲೆ ಮಾಡಿದರೆ ಆಯಿತು ಎನ್ನುವ ಸಾಧ್ಯತೆಗಳು ಇರುತ್ತವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top