fbpx
ದೇವರು

ಶೃಂಗಗಿರಿಯಲ್ಲಿ ನೆಲೆಸಿರುವ ಶೃಂಗೇರಿ ಶಾರದಾಂಬೆ ಮಹಿಮೆ ಹಾಗೂ ಈ ತಾಯಿಯ ಪವಾಡ ಸಾರುವ ರೋಚಕ ಕಥೆ ಬಗ್ಗೆ ತಪ್ಪದೆ ತಿಳ್ಕೊಳ್ಳಿ

ವಿದ್ಯಾ ದೇವತೆ ಶೃಂಗೇರಿ ಶಾರದಾಂಬೆ ಶೃಂಗಗಿರಿ ಯಲ್ಲಿ ನೆಲೆಸಿರುವ ಹಿಂದಿದೆ ಒಂದು ರೋಚಕ ಕಥೆ.
ಶೃಂಗಗಿರಿ ಕ್ಷೇತ್ರದಲ್ಲಿ ದೇವಿ ನೆಲೆನಿಂತಿದ್ದು ಅತ್ಯಂತ ರೋಚಕ.ಇಲ್ಲಿ ಅಕ್ಷರಾಭ್ಯಾಸ ಮಾಡಿದವರು ಶಾರದೆಯ ವರ ಪುತ್ರರಾಗುತ್ತಾರೆ . ಇಲ್ಲಿನ ನದಿಯಲ್ಲಿರುವ ಮೂಗುತಿ ಧರಿಸಿರುವ ಮೀನು ಕಂಡರೆ ವಿಶೇಷ ಫಲ ಪ್ರಾಪ್ತಿಯಾಗುತ್ತದೆ.

ಶೃಂಗೇರಿ ಶಾರದೆಯು ಇಲ್ಲಿ ನೆಲೆಸಿರುವುದರ ಹಿಂದಿದೆ ಒಂದು ಪೌರಾಣಿಕ ಕಥೆ.
ಒಮ್ಮೆ ತುಂಗೆಯ ತಟಕ್ಕೆ ಶಂಕರಾಚಾರ್ಯರು ಬಂದಾಗ ಧಾರಾಕಾರವಾಗಿ ಮಳೆ ಸುರಿಯುತ್ತಿತ್ತಂತೆ, ಆ ಸಂದರ್ಭದಲ್ಲಿ ಒಂದು ಹಾವು ಎಡೆ ಬಿಚ್ಚಿ ಪ್ರಸವದ ವೇದನೆಯಲ್ಲಿ ಇರುವ ಒಂದು ಕಪ್ಪೆಗೆ ರಕ್ಷಣೆ ನೀಡುತ್ತಿತ್ತಂತೆ . ಶತ್ರುಗಳು ಮಿತ್ರರಾಗಿ ಸಹಕಾರಕ್ಕೆ ನಿಂತ ಈ ಸ್ಥಳದಲ್ಲಿ ಅಭೂತಪೂರ್ವ ಶಕ್ತಿ ಇದೆ ಎನ್ನುವುದನ್ನು ಮನಗಂಡು ಅರಿತ ಆಚಾರ್ಯರು ಈ ಕ್ಷೇತ್ರವನ್ನು ಪವಿತ್ರ ಪುಣ್ಯ ಕ್ಷೇತ್ರ ಮಾಡಿದರು ಎನ್ನಲಾಗುತ್ತದೆ.

 

 

 

ಆದಿಗುರು ಶಂಕರಾಚಾರ್ಯರು ಸ್ಥಾಪಿಸಿದ ಈ ಪುಣ್ಯ ಭೂಮಿ ಶ್ರೀ ಕ್ಷೇತ್ರ ಯಜುರ್ವೇದ ಪೀಠವಾಗಿದೆ. ಶಂಕರಾಚಾರ್ಯರು ತಮ್ಮ ಜೀವಿತದ ಅವಧಿಯಲ್ಲಿ ಹನ್ನೆರಡು ವರ್ಷಗಳನ್ನು ಇಲ್ಲೇ ಕಳೆದಿದ್ದರಂತೆ.ಶೃಂಗೇರಿ ಶಾರದೆಯ ಮಹಿಮೆ ಅಪಾರವಾದದ್ದು. ಟಿಪ್ಪು ಸುಲ್ತಾನ್, ಹೈದರಾಲಿ ಈ ಶಾರದೆಯ ಪರಮ ಭಕ್ತರಾಗಿದ್ದರು. ಯುದ್ಧಕ್ಕೆ ಹೋಗುವಾಗ ಟಿಪ್ಪು ಸುಲ್ತಾನ್ ಶಾರದೆಯ ದರ್ಶನ ಮಾಡಿ ಶ್ರೀ ಪೀಠದ ದರ್ಶನ ಪಡೆಯುತ್ತಿದ್ದರಂತೆ. ಅಲ್ಲದೆ ಶತ ಚಂಡಿ ಹೋಮ ,ಯಾಗವನ್ನು ಮಾಡಿಸುತ್ತಿದ್ದರಂತೆ, ದೇವಿಯ ಮಹಿಮೆಗೆ ಶರಣಾದ ಹೈದರಾಬಾದ್ ನಿಜಾಮರು ಅಪಾರ ಪ್ರಮಾಣದ ವಜ್ರ ವೈಢೂರ್ಯಗಳನ್ನು ನೀಡಿದ ಬಗ್ಗೆ ದೇವಸ್ಥಾನದ ಇತಿಹಾಸದಲ್ಲಿ ಉಲ್ಲೇಖವಿದೆ.

ದೇವಾಲಯದ ನವರಂಗದಲ್ಲಿ ಭೌತಶಾಸ್ತ್ರಕ್ಕೆ ಅನುಕೂಲವಾಗಿರುವ ಹಾಗೆ ದ್ವಾದಶ ರಾಶಿಗಳ ಸಂಕೇತವುಳ್ಳ ಹನ್ನೆರಡು ಕಂಬಗಳು ಇವೆ. ಆಯಾ ಮಾಸದಲ್ಲಿ ಸೂರ್ಯೋದಯವಾದಗ ರವಿಯ ಕಿರಣಗಳು ಆಯಾ ರಾಶಿಗೆ ಸಂಬಂಧಿಸಿದ ಕಂಬಗಳ ಮೇಲೆ ಬೀಳುತ್ತವೆ. ಇಂತಹ ವಿಶೇಷತೆ ಇರುವ ಈ ದೇವಾಲಯ ಭಾರತೀಯರ ವಾಸ್ತು ವೈಭವಕ್ಕೆ ಸಾಕ್ಷಿಯಾಗಿದೆ.
ಇಲ್ಲಿ ನಿರ್ಮಲವಾಗಿ ಶಾಂತವಾಗಿ ತುಂಗೆ ಹರಿಯುತ್ತಿದ್ದಾಳೆ. ಇಲ್ಲಿನ ನೀರಿನ ನದಿಯಲ್ಲಿ ನಿರ್ಭಯವಾಗಿ ಮೀನುಗಳು ಈಜಾಡುತ್ತದೆ. ಇಲ್ಲಿ ಇಷ್ಟೊಂದು ಮೀನುಗಳಿದ್ದರೂ ಯಾರು ಬಲೆ ಹಾಕಿ ಹಿಡಿಯುವುದಿಲ್ಲ. ಯಾಕೆಂದರೆ ಈ ಮೀನುಗಳು ಸಾಕ್ಷಾತ್ ದೇವಿಯ ಸ್ವರೂಪ. ನಿತ್ಯ ಈ ಮೀನುಗಳಿಗೆ ನೈವೇದ್ಯ ಹಾಕಲಾಗುತ್ತದೆ.ವಿಶೇಷ ಏನೆಂದರೆ ಶಂಕರಾಚಾರ್ಯರು ಒಂದು ಮೀನನ್ನು ತಂದು ಆ ಮೀನಿಗೆ ಮೂಗುತಿಯನ್ನು ಹಾಕಿದ್ದರಂತೆ. ಆ ಮೀನು ಇಂದಿಗೂ ಇಲ್ಲಿ ಇದೆ ಎನ್ನಲಾಗುತ್ತದೆ. ಇಲ್ಲಿರುವ ಸಾವಿರಾರು ಮೀನುಗಳ ನಡುವೆ ನೀವು ಮೂಗುತಿ ಇರುವ ಆ ದೈವೀ ಸ್ವರೂಪವಾದ ಮೀನನ್ನು ನೋಡಿದರೆ ಶುಭವಾಗುತ್ತದೆ ಎನ್ನುವ ನಂಬಿಕೆ ಇದೆ.

ಶೃಂಗೇರಿ ಶಾರದೆ ಕಲಿಕೆ ಮತ್ತು ಪಾಂಡಿತ್ಯಕ್ಕೆ ಅಧಿದೇವತೆ.ಶಾರದೆಯ ಸನ್ನಿಧಿಯಲ್ಲಿ ಶ್ರೀಚಕ್ರವನ್ನು ರಚಿಸಿ ದಕ್ಷಿಣಾಮ್ನಾಯ ಪೀಠವನ್ನು ಶ್ರೀ ಆದಿಶಂಕರರು ಪ್ರತಿಷ್ಠಾಪಿಸಿದ್ದರಂತೆ. ಆದ್ದರಿಂದ ಈ ಕ್ಷೇತ್ರದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುತ್ತಾರೆ. ಇಲ್ಲಿ ಅಕ್ಷರಾಭ್ಯಾಸ ಮಾಡಿಸಿದ ಮಗು ಮುಂದೆ ವಿಧ್ಯಾವಂತನಾಗುತ್ತಾನೆ ಎಂಬ ನಂಬಿಕೆ ಇದೆ. ಈ ತಾಯಿ ಭಕ್ತರಿಗೆ ಆಶ್ರಯದಾತರಾಗಿ ಜ್ಞಾನಾಮೃತ ನೀಡುತ್ತಾ, ಸೋತವರಿಗೆ ಸಹಕಾರ ನೀಡುತ್ತಾ ಬಂದಿದ್ದಾಳೆ ಜೊತೆಗೆ ಇಡೀ ಸಮಾಜವನ್ನು ಧರ್ಮದ ಹಾದಿಯಲ್ಲಿ ನಡೆಸುವ ಕಾರ್ಯವಾಗಿ ಈ ಕ್ಷೇತ್ರ ಹಿಂದಿನಿಂದ ಕಾಲದಿಂದ ಇಂದಿನವರೆಗೂ ಮಾಡುತ್ತಾ ಬಂದಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top