fbpx
ದೇವರು

ಇಂದು ಅಕ್ಟೋಬರ್ 6 ನೇ ತಾರೀಖು ಶನಿ ಪ್ರದೋಷ ವ್ರತ .ಈ ಶನಿ ಪ್ರದೋಷ ವ್ರತದ ಆಚರಣೆ ಹೇಗೆ ಮಾಡಬೇಕು ಹಾಗೂ ಇದರ ಫಲಗಳು ಏನೇನು ಗೊತ್ತಾ

ಅಕ್ಟೋಬರ್ 6 ನೇ ತಾರೀಖಿನಂದು ಶನಿ ಪ್ರದೋಷ ವ್ರತ. ಈ ದಿನ ಭಗವಂತನಾದ ಬಂ ಬಂ ಬೋಲೇನಾಥ ,ಶಂಭೋ ಶಂಕರ ಶಿವನನ್ನು ಪ್ರದೋಷ ಕಾಲದಲ್ಲಿ ಪೂಜಿಸಿ, ಪ್ರಸನ್ನಗೊಳಿಸಿದರೆ ಸಾಕು ನಮ್ಮ ಇಷ್ಟಾರ್ಥಗಳು ಪೂರ್ಣಗೊಳ್ಳುತ್ತವೆ ಮತ್ತು ಶಿವನ ಕೃಪಾ ಕಟಾಕ್ಷಕ್ಕೆ ನಾವು ಪಾತ್ರರಾಗುತ್ತೇವೆ.
ಪ್ರತ್ಯೇಕ ಚಂದ್ರ ಮಾಸದ ತ್ರಯೋದಶಿಯ ದಿನ ಪ್ರದೋಷ ವ್ರತವು ಬರುತ್ತದೆ. ಕೃಷ್ಣ ಪಕ್ಷ ಮತ್ತು ಶುಕ್ಲಪಕ್ಷ ಎರಡರಲ್ಲೂ ಪ್ರದೋಷ ವ್ರತವನ್ನು ಆಚರಿಸಲಾಗುತ್ತದೆ. ಸೂರ್ಯಾಸ್ತದ ನಂತರ ಎರಡು ಗಂಟೆ 20 ನಿಮಿಷದವರೆಗೆ ಪ್ರದೋಷ ಕಾಲ ಎಂದು ಹೇಳಲಾಗುತ್ತದೆ. ಸೂರ್ಯಾಸ್ತದ ನಂತರ ರಾತ್ರಿಯ ಸಮಯದ ಅವಧಿಯವರೆಗೆ ಪ್ರದೋಷ ಕಾಲ ಎಂದು ಹೇಳಲಾಗುತ್ತದೆ.

ಈ ವ್ರತವು ಉಪವಾಸ ಇರುವವರಿಗೆ ಬಂಧನದಿಂದ ಮುಕ್ತಿಗೊಳಿಸುವುದಕ್ಕೆ ಭಗವಂತನನ್ನು ಪೂಜೆ ಮಾಡಲಾಗುತ್ತದೆ. ಪ್ರದೋಷ ವ್ರತದ ಕುರಿತು ಪಂಚಾಂಗದಲ್ಲಿ ವಿವಿಧ ರೀತಿಯ ಗೊಂದಲಗಳು ನಡೆಯುತ್ತಿವೆ . ಕೆಲವು ಪಂಚಾಂಗಗಳಲ್ಲಿ 6 ನೇ ತಾರೀಖು ಇನ್ನೂ ಕೆಲವು ಪಂಚಾಂಗಗಳಲ್ಲಿ 7 ನೇ ತಾರೀಖು ಪ್ರದೋಷ ವ್ರತ ಎಂದು ಹೇಳಲಾಗಿದೆ.
ಆದರೆ ನಿಜ ಏನೆಂದರೆ ಅಕ್ಟೋಬರ್ 6 ನೇ ತಾರೀಖು, ದ್ವಾದಶೀ ತಿಥಿಯು ಸಾಯಂಕಾಲ 4 ಗಂಟೆ 40 ನಿಮಿಷದವರೆಗೆ ಇರುತ್ತದೆ .ಆನಂತರ ತ್ರಯೋದಶಿಯ ತಿಥಿ ಪ್ರಾರಂಭವಾಗುತ್ತದೆ. ಅಕ್ಟೋಬರ್ 7 ನೇ ತಾರೀಖು ಮಧ್ಯಾಹ್ನ 2 ಗಂಟೆ 2 ನಿಮಿಷದವರೆಗೆ ಇರುತ್ತದೆ.

 

 

 

ಆದರೆ ಪ್ರದೋಷ ಕಾಲದ ಪೂಜೆ ಸಾಯಂಕಾಲದ ಸಮಯದಲ್ಲಿ ಬರುವುದರಿಂದ ಈ ಪೂಜೆಯನ್ನು ಅಕ್ಟೋಬರ್ 6ನೇ ತಾರೀಕು ಮಾಡಲಾಗುತ್ತದೆ ಮತ್ತು ಶನಿ ಪ್ರದೇಶವು ಶನಿವಾರ ಬಂದಿರುವುದರಿಂದ ಶನಿ ಪ್ರದೋಷ ವ್ರತ ಇದ್ದು, ತುಂಬಾ ಶುಭ ಸಂಯೋಗ ಉಂಟಾಗುತ್ತಿದೆ.

ಈ ಪ್ರದೋಷ ವ್ರತವನ್ನು ಏನಕ್ಕೂಸ್ಕರ ಮಾಡಲಾಗುತ್ತದೆ ?
ಉತ್ತಮ ಸಂತಾನ ಪ್ರಾಪ್ತಿಗೆ , ಧನ-ಧಾನ್ಯ , ಐಶ್ವರ್ಯ, ಸಂಪತ್ತು ಪ್ರಾಪ್ತಿಯಾಗಲಿ ಎಂದು ಶಿವನ ಕೃಪೆಯಿಂದ ದೊಡ್ಡ ದೊಡ್ಡ ರೋಗಗಳಿಂದ ಮುಕ್ತಿ ಹೊಂದಬೇಕು ಎಂದು ಈ ಪ್ರದೋಷ ವ್ರತವನ್ನು ಆಚರಣೆ ಮಾಡಲಾಗುತ್ತದೆ.ಪ್ರದೋಷ ವ್ರತವನ್ನು ಆಚರಣೆ ಮಾಡುವುದಕ್ಕೆ ತ್ರಯೋದಶಿ ತಿಥಿಯ ದಿನ ಪ್ರಾತಃಕಾಲ ಸೂರ್ಯೋದಯಕ್ಕಿಂತ ಮುಂಚೆ ಎದ್ದು ನಿತ್ಯಕರ್ಮಗಳನ್ನು ಮುಗಿಸಿ ಕೊಂಡು ಭಗವಂತನಾದ ಶ್ರೀ ಬೋಲೇನಾಥ ಶಿವನ ನಾಮಸ್ಮರಣೆಯನ್ನು ಮಾಡಿ ಸಂಪೂರ್ಣ ದಿನ ಉಪವಾಸ ವ್ರತವನ್ನು ಮಾಡಿ ಸೂರ್ಯಾಸ್ತದ ಒಂದು ಗಂಟೆಯ ಮುಂಚೆ ಸ್ನಾನ ಮಾಡಿ, ಬಿಳಿ ವಸ್ತ್ರಗಳನ್ನು ಧರಿಸಿ ಈಶಾನ್ಯ ದಿಕ್ಕಿನಲ್ಲಿ ಯಾವುದಾದರೂ ಪ್ರಶಾಂತತೆಯಿಂದ ಕೂಡಿರುವ ಸ್ಥಳವನ್ನು ಆಯ್ಕೆ ಮಾಡಿಕೊಂಡು ಪೂಜೆ ಮಾಡುವುದಕ್ಕೆ ಉಪಯೋಗಿಸಬೇಕು.

ಪೂಜಾ ಸ್ಥಳವನ್ನು ಗಂಗಾಜಲದಿಂದ ಸ್ವಚ್ಛಗೊಳಿಸಿ ಒಂದು ಸುಂದರ ಮಂಟಪವನ್ನು ತಯಾರು ಮಾಡಿಕೊಳ್ಳಿ. ಈ ಮಂಟಪದಲ್ಲಿ ಕಮಲದ ಪುಷ್ಪದ ಐದು ಬಣ್ಣಗಳನ್ನು ಉಪಯೋಗಿಸಿ ಮಂಟಪ ನಿರ್ಮಿಸಿ.ಈ ಪ್ರದೋಷವನ್ನು ಆಚರಣೆ ಮಾಡುವವರು ದರ್ಬಾಸನದಲ್ಲಿ ಕುಳಿತುಕೊಳ್ಳಬೇಕು. ಈ ಪ್ರಕಾರವಾಗಿ ಪೂಜೆಗೆ ತಯಾರು ಮಾಡಿ ಉತ್ತರ ಪೂರ್ವ ದಿಕ್ಕಿನ ಕಡೆಗೆ ಮುಖಮಾಡಿ ಕುಳಿತು, ಭಗವಂತನ ಪೂಜೆಯನ್ನು ವಿಧಿ ವಿಧಾನದಿಂದ ಮಾಡಿ ಶಿವನ ಕೃಪೆಗೆ ಪಾತ್ರರಾಗಿ.ಪೂಜೆ ಮುಗಿದ ನಂತರ ಭಕ್ತಿ ಶ್ರದ್ಧೆಯಿಂದ ಶಿವ ಪಂಚಾಕ್ಷರಿ ಮಂತ್ರವಾದ “ ಓಂ ನಮಃ ಶಿವಾಯ” ಈ ಮಂತ್ರವನ್ನು ಸಾಧ್ಯವಾದಷ್ಟು ಬಾರಿ ಅಥವಾ 108 ಬಾರಿ ಜಪಿಸಿ, ಶಿವನಿಗೆ ನೀರಿನಿಂದ ಅರ್ಘ್ಯವನ್ನು ಅರ್ಪಿಸಿ ನಮಸ್ಕಾರ ಮಾಡಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top