fbpx
ದೇವರು

108 ಹೆಸರುಗಳಿಂದ ಕರೆಸಿಕೊಳ್ಳುವ ಮಹಾತಾಯಿ,ಕಷ್ಟ ಎಂದು ಹೋದವರನ್ನು ಕಾಪಾಡಿ ಸಕಲ ಇಷ್ಟಾರ್ಥಗಳನ್ನು ಸಿದ್ಧಿಸುವ ಈ ತಾಯಿ ಮಹಿಮೆ ಗೊತ್ತಾದ್ರೆ ಖಂಡಿತಾ ಈ ಒಂದ್ಸಲ ಈ ತಾಯಿ ದರ್ಶನ ಮಾಡ್ತೀರಾ

ಬನಶಂಕರಿ ದೇವಿ,ಆದಿಶಕ್ತಿ, ಬನದೇವಿ, ವನದೇವಿ, ವಿಶ್ವೇಶ್ವರಿ ಹೀಗೆ ಬರೋಬ್ಬರಿ 108 ಹೆಸರುಗಳಿಂದ ಕರೆಸಿಕೊಳ್ಳುವ ಆ ತಾಯಿಯ ಮಹಿಮೆ ಅಪಾರ. ವಾತಾಪಿ ನಾಡನ್ನು ಅಳುತ್ತಿದ್ದ ಚಾಲುಕ್ಯ ಅರಸರಿಗೆ ಶಕ್ತಿಯ ದೇವತೆಯಾಗಿದ್ದಾಳೆ ಈಕೆ. ಅಷ್ಟೇ ಅಲ್ಲದೆ ಚಾಲುಕ್ಯರ ಕುಲದೇವಿಯಾಗಿದ್ದ ತಾಯಿ ಬನಶಂಕರಿ ದೇವಿ, ಬಾದಾಮಿ ಬನಶಂಕರಿ ದೇವಿಯ ಮಹಿಮೆಯನ್ನು ತಿಳಿದುಕೊಳ್ಳೋಣ ಬನ್ನಿ.

ಈ ಪವಿತ್ರ ಸ್ಥಳ ಶಕ್ತಿದೇವತೆ ತಾಯಿ ಬನಶಂಕರಿ ದೇವಿಯ ದೇವಾಲಯ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬನಶು ಗ್ರಾಮದಲ್ಲಿ ತಾಯಿ ಶಾಕಾಂಬರಿ ಪ್ರತಿಷ್ಠಾಪಿತವಾಗಿದ್ದಾಳೆ. ಹಾಗಾಗಿ ಈ ಗ್ರಾಮವನ್ನು ಬನದೇವಿಯ ಹೆಸರಿನಲ್ಲಿ ಬನಶಂಕರಿ ಎಂದೇ ಕರೆಯಲಾಗುತ್ತದೆ. ಸುತ್ತ ಹಚ್ಚ ಹಸಿರಿನ ತಾಣದ ಮಧ್ಯದಲ್ಲಿ ನೆಲೆಸಿರುವ ಈ ದುಷ್ಟರ ಶಿಕ್ಷಕಿ ಮತ್ತು ಶಿಷ್ಟರ ರಕ್ಷಕಿ . ಹೌದು, ಇಂದಿನ ಚಾಲುಕ್ಯರ ಶ್ರೀಮಂತ ಶಕ್ತಿ ದೇವತೆಯಾಗಿ ಆರಾಧನೆಗೆ ಬರುವ ಅಸಂಖ್ಯಾತ ಭಕ್ತ ಸಮೂಹ ದರ್ಶನ ಪಡೆದು ಪುನೀತರಾಗುತ್ತಾರೆ. ಭಾರತ ದೇಶದ ಜಾಗೃತ ಶಕ್ತಿ ಪೀಠಗಳಲ್ಲಿ ಈ ಬಾದಾಮಿಯ ಬನಶಂಕರಿ ದೇವಾಲಯವು ಒಂದು ಈಕೆಗೆ ಬನದ ಸಿರಿದೇವಿ, ಬನಶಂಕರಿ ಎಂದು ಕರೆಯಲಾಗುತ್ತದೆ.ಶ್ರೀ ಬನಶಂಕರಿ ದೇವಿಯ ವಿವರವನ್ನು ಸ್ಕಂದ ಪುರಾಣದಲ್ಲಿ ಕಾಣಬಹುದಾಗಿದೆ. ಬಾದಾಮಿಯ ಶ್ರೀ ಬನಶಂಕರಿ ದೇವಿ ನಾಡಿನ ಜನತೆಯ ಆರಾಧ್ಯ ದೇವಿಯಾಗಿ ಶಕ್ತಿ ದೇವಿಯಾಗಿ ಭಕ್ತರ ಇಷ್ಟಾರ್ಥಗಳನ್ನು ಸಿದ್ಧಿಸುವ ಕಾಮಧೇನುವಾಗಿ ಕಷ್ಟವನ್ನು ದೂರ ಮಾಡುತ್ತಾಳೆ.

ಶತಮಾನಗಳ ಹಿಂದೆ ಚಾಲುಕ್ಯರನ್ನು ಸಂಕಷ್ಟದಿಂದ ಪಾರು ಮಾಡಿ ಬನಶಂಕರಿ ಚಾಲುಕ್ಯರ ಆರಾಧ್ಯ ದೈವವಾಗಿದ್ದಾಳೆ. ಬಾದಾಮಿ ಹಾಗೂ ಮಲಪ್ರಭಾ ಬಯಲಿನಲ್ಲಿ ನೆಲೆಸಿರುವ ಈ ತಾಯಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅದು ಕ್ರಿಸ್ತಶಕ ಎರಡನೇ ಶತಮಾನ ಆಗಿನ ಕಾಲದಲ್ಲಿ ಇಲ್ಲಿ ಮಂಗಗಳು ಹೆಚ್ಚಾಗಿದ್ದವಂತೆ. ಆದ್ದರಿಂದ ಇದು “ವಾತಾಪಿ” ಎಂದೇ ಪ್ರಸಿದ್ಧವಾಗಿತ್ತು. ಇಲ್ಲಿ ಚಾಲುಕ್ಯರ ವಾಸ ಸ್ಥಳವಾಗಿತ್ತು. ಬನದಮ್ಮ ದೇವಿ ನೆಲೆಸಿದಾಗ ಕಾರಣ ಬಾದಾಮಿ ಎಂದು ಬದಲಾಯಿತು. ಅಗಸ್ತ್ಯತೀರ್ಥ ಮಹರ್ಷಿಗಳು ಇಲ್ಲಿ ತಪಸ್ಸುಗೈದ ಪರಿಣಾಮವೇ ಇಲ್ಲಿ ಶಕ್ತಿದೇವತೆ ನೆಲೆಸಲು ಕಾರಣವಾಯಿತು ಎಂದು ಹೇಳಲಾಗುತ್ತದೆ.

 

 

 

ಪ್ರತಿಯೊಂದು ಶಕ್ತಿ ದೇವರುಗಳ ಹಿಂದೆ ಒಂದು ಐತಿಹಾಸಿಕ ಘಟನೆಗಳು ಇರುವಂತೆ, ಬನದ ದೇವಿಗೂ ನೂರಾರು ವರ್ಷಗಳ ಇತಿಹಾಸವಿದೆ. ಹಿಂದೆ ಘೋರ ಬರಗಾಲ ಬಂದಿದ್ದ ಸಂದರ್ಭದಲ್ಲಿ ಸಕಲ ಜೀವರಾಶಿಗಳು ಕೂಡ ತತ್ತರಿಸಿ ಹೋಗಿದ್ದವು. ಇಂತಹ ದುರ್ಭಿಕ್ಷ ಸಂದರ್ಭದಲ್ಲಿ ಕೆಲವು ದೇವಾನು ದೇವತೆಗಳು ಶಿವನನ್ನು ಕುರಿತು ಪ್ರಾರ್ಥಿಸಿದರು. ನಂತರ ಶಿವ,ಬ್ರಹ್ಮಾದಿ-ದೇವತೆಗಳೆಲ್ಲಾ ಸೇರಿ ತ್ರಿಗುಣಾತ್ಮಿಕ ಸ್ವರೂಪಳಾದ ಬನಶಂಕರಿ ದೇವಿಯನ್ನು ಪ್ರಾರ್ಥಿಸಿದರು. ದೇವಾನು ದೇವತೆಗಳ ಪ್ರಾರ್ಥನೆಗೆ ಒಲಿದ ಬನದೇವಿ ತನ್ನ ಶರೀರದಿಂದ ಉತ್ಪನ್ನವಾದ ಶಾಖಾಹಾರದಿಂದ ಸರ್ವ ಜಗತ್ತನ್ನು ಕಾಪಾಡಿದಳು. ಹೀಗಾಗಿ ಅವಳ ಕೃಪೆಯಿಂದಾಗಿ ಬರನೀಗಿ, ದಾಹ ತೀರಿ, ಹಶಿವು ನೀಗುವುದರೊಂದಿಗೆ ಬನಗಳೆಲ್ಲ ಹಚ್ಚ ಹಸಿರಿನಿಂದ ಕಂಗೊಳಿಸಿದವು. ಅಂದಿನಿಂದ ಈಕೆ ಬನದ ದೇವಿ ಶಾಕಾಂಬರಿ ಎಂದೇ ಪ್ರಸಿದ್ಧಿ ಪಡೆದಳು.

ಬರಗಾಲದಲ್ಲಿ ಜನರ ಹಸಿವನ್ನು ನೀಗಿಸಿ ಶಿಷ್ಟರನ್ನು ರಕ್ಷಿಸಿದ ಈ ತಾಯಿ ಚಾಲುಕ್ಯರನ್ನು ಕಾಪಾಡಲು ರಾಕ್ಷಸರನ್ನು ಸಂಹಾರ ಮಾಡಿದಳು. ಅಲ್ಲದೆ ಇಂದು ಬನಶಂಕರಿ ತಾಯಿ ತನ್ನ ಪವಾಡಗಳಿಂದ ತನ್ನ ಭಕ್ತರನ್ನು ತನ್ನತ ಸೆಳೆಯುತ್ತಿದ್ದಾರೆ. ದೇವಸ್ಥಾನದ ಮುಂದಿನ ಕಲ್ಯಾಣಿಯೂ ಹಲವು ಪವಾಡಗಳಿಗೆಯೇ ಹೆಸರುವಾಸಿಯಾಗಿದೆ. ಈ ಕಲ್ಯಾಣಿಯಲ್ಲಿ ಮುಳುಗೆದ್ದು ದೇವಿಯಲ್ಲಿ ಪ್ರಾರ್ಥನೆ ಮಾಡಿದರೆ ಸಂತಾನಭಾಗ್ಯ ಕರುಣಿಸುತ್ತಾಳೆ ಎಂಬ ನಂಬಿಕೆ ಇದೆ. ಆದ್ದರಿಂದ ಇಂದಿಗೂ ನೂರಾರು ಭಕ್ತರು ಈ ದೇವಿಗೆ ಹರಕೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಮಕ್ಕಳಾದರೆ ಹೊಂಡದಲ್ಲಿ ತೊಟ್ಟಿಲು ಸೇವೆ ಮಾಡುವುದಾಗಿ ಹರಕೆಗಳನ್ನು ಮಾಡಿಕೊಂಡು ಮಕ್ಕಳಾದ ಮೇಲೆ ಚಿಕ್ಕ ಮಕ್ಕಳನ್ನು ಬಾಳೆದಿಂಡಿನ ತೊಟ್ಟಿಲನ್ನು ಮಾಡಿ ಅದರಲ್ಲಿ ಮಕ್ಕಳನ್ನು ಕೂಡಿಸಿ ಹೊಂಡದಲ್ಲಿ ಸುತ್ತಿಸುತ್ತಾರೆ.ಮುಂಜಾನೆ ದೇವಿಯ ಪೂಜೆ ಪ್ರಾರಂಭವಾಗುತ್ತದೆ. ಭಕ್ತರು ಹರಿದ್ರಾ ತೀರ್ಥ ಹೊಂಡದಲ್ಲಿ ಮಿಂದೆದ್ದು ಮಡಿ ಬಟ್ಟೆಯಲ್ಲಿ ತಾಯಿಯ ದರ್ಶನ ಪಡೆದು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪೂಜೆ ಸಲ್ಲಿಸುತ್ತಾರೆ. ತಾಯಿ ಶಾಕಾಂಬರಿಗೆ ಹೂವು, ಹಣ್ಣು, ನಿಂಬೆ , ಮೆಣಸು ಹೀಗೆ ಎಲ್ಲಾ ಹಸಿರು ತರಕಾರಿಗಳನ್ನು ಹಾಕಿ ಅಲಂಕರಿಸಿ ಪೂಜೆ ಮಾಡಲಾಗುತ್ತದೆ. ಪೂಜೆ ಆರಂಭವಾಗುತ್ತಿದ್ದಂತೆ ತಾಯಿಯ ಆಶೀರ್ವಾದ ಪಡೆಯಲು ಭಕ್ತರ ದಂಡು ಸಾಗರೋಪಾದಿಯಲ್ಲಿ ಹರಿದು ಬರುತ್ತದೆ. ಶ್ರೀ ದೇವಿಯ ದರ್ಶನ ಮಾಡಿಕೊಂಡ ಜನ ಶೌರ್ಯ ಹಾಗೂ ಐಶ್ವರ್ಯಕ್ಕಾಗಿ ದೇವಿಯನ್ನು ಆರಾಧಿಸಿ ಬದುಕನ್ನು ಸಾರ್ಥಕಪಡಿಸಿಕೊಳ್ಳಿ.

 

 

 

ತನ್ನ ದೇಹದಲ್ಲಿನ ಶಾಖವೆರಿ4 ಬರಡು ಭೂಮಿಯನ್ನು ಹಸಿರಾಗಿಸಿದ ಈ ತಾಯಿಯ ಮಹಿಮೆ ಅಪಾರ. ಬಡ ಜನರ ಹಸಿವನ್ನು ನೀಗಿಸಿ ರಾಕ್ಷಸರನ್ನು ಸಂಹಾರ ಮಾಡಿದ ತಾಯಿ ರ್ ಶಕ್ತಿ ದೇವತೆ. ಭಕ್ತರ ರಕ್ಷಣೆಗಾಗಿ ಅವತರಿಸಿರುವ ಈ ತಾಯಿಯ ಆಶೀರ್ವಾದ ಸಕಲ ಜೀವರಾಶಿಗಳ ಮೇಲಿದೆ ಎನ್ನುವುದು ಇಲ್ಲಿನ ಪ್ರತೀತಿ. ಬಾದಾಮಿ, ಐಹೊಳೆ ಪಟ್ಟದಕಲ್ಲು ಹೀಗೆ ಸಾಕಷ್ಟು ಐತಿಹಾಸಿಕ ಸ್ಥಳಗಳು ಇಲ್ಲಿರುವುದರಿಂದ ಬಾದಾಮಿಯ ಪ್ರವಾಸ ಭಕ್ತ ಸಮೂಹವನ್ನು ಕೈಬೀಸಿ ಕರೆಯುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top