fbpx
ದೇವರು

ಶುದ್ಧ ಬ್ರಹ್ಮಚಾರಿಯಾಗಿರುವ ಹನುಮಂತನಿಗೆ ಮಗನಿರಲು ಹೇಗೆ ಸಾಧ್ಯ, ಇದರ ಹಿಂದೆ ಇದೆ ಬೆಚ್ಚಿಬಿಳಿಸೋ ರಹಸ್ಯ

ಶುದ್ಧ ಬ್ರಹ್ಮಚಾರಿಯಾಗಿರುವ ಹನುಮಂತ ದೇವನಿಗೆ ಮಕರಧ್ವಜ ಎನ್ನುವ ಪುತ್ರನಿದ್ದನು. ಆ ಕಥೆಯ ಬಗ್ಗೆ ನಿಮಗೆ ಗೊತ್ತೇ ?
ಹನುಮಂತ ಬ್ರಹ್ಮಚಾರಿ ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದರೆ ಹನುಮಂತನಿಗೂ ಕೂಡ ಒಬ್ಬ ಮಕರಧ್ವಜ ಎನ್ನುವ ಪುತ್ರನಿದ್ದನು. ಆ ಕತೆಯ ಬಗ್ಗೆ ನಿಮಗೆಷ್ಟು ಗೊತ್ತು .ಒಂದು ವೇಳೆ ಪುತ್ರನಿರುವುದು ಗೊತ್ತಿದ್ದರೂ, ಅದರ ಹಿಂದಿರುವ ಕಥೆ ನಿಮಗೆ ಗೊತ್ತಿರುವುದಿಲ್ಲ. ಬನ್ನಿ ಇಂದು ನಾವು ಅದರ ಬಗ್ಗೆ ತಿಳಿದುಕೊಳ್ಳೋಣ.
ಸೀತೆಯನ್ನು ನೋಡಲು ಹನುಮಂತನು ಲಂಕೆಗೆ ಹೋದಾಗ ಹನುಮಂತನು ತನ್ನ ಬಾಲದಿಂದಲೇ ಇಡೀ ಲೋಕವನ್ನೇ ಸುಟ್ಟು ಹಾಕುತ್ತಾನೆ.ಅದಾದ ಮೇಲೆ ತನ್ನ ಬಾಲದಲ್ಲಿರುವ ಬೆಂಕಿಯನ್ನು ಆರಿಸಿಕೊಳ್ಳಲು ಸಮುದ್ರದ ನೀರಿನೊಳಗೆ ಮುಳುಗಿ ಹೇಳುತ್ತಾನೆ. ಆಗ ಹನುಮನ ಮೈಯ ಬೆವರನ್ನು ಒಂದು ಮೊಸಳೆ ಸೇವಿಸುತ್ತದೆ.ಇದಾದ ನಂತರ ಅಹಿರವನ ಎಂಬ ಪಾತಾಳದ ಅಸುರನ ಸೇವಕರು ಈ ಮೊಸಳೆಯನ್ನು ಹಿಡಿಯುತ್ತಾರೆ. ಈ ಮೊಸಳೆಯ ಹೊಟ್ಟೆ ಸೀಳಿದಾಗ ಅದರಲ್ಲಿ ವಾನರ ರೂಪದ ಒಂದು ಮಗು ಇರುತ್ತದೆ. ಈ ಮಗು ಮುಂದೆ ಪಾತಾಳದ ದ್ವಾರಪಾಲಕ ನಾಗುತ್ತಾನೆ. ಇವನ ಹೆಸರು ಮಕರಧ್ವಜ.

 

 

 

ಆದರೆ ಈ ವಿಚಾರ ಸ್ವತಃ ಹನುಮಂತನಿಗೆ ತಿಳಿದಿರುವುದಿಲ್ಲ. ಹೀಗೆ ಒಂದು ಸಲ ರಾಮ ಲಕ್ಷ್ಮಣರನ್ನು ಅಹಿರವನ ಅಸುರನು ಪಾತಾಳಕ್ಕೆ ಕರೆದುಕೊಂಡು ಹೋಗುತ್ತಾನೆ.ಇದನ್ನು ಕಂಡ ಹನುಮಂತ ಅವರನ್ನು ರಕ್ಷಿಸಲು ಪಾತಾಳಕ್ಕೆ ಹೋದಾಗ ಅಲ್ಲಿ ದ್ವಾರಪಾಲಕ ಒಳಗೆ ಹೋಗಲು ಬಿಡುವುದಿಲ್ಲ.ನೋಡಲು ಅವನು ವಾನರ ಹಾಗೂ ಮೊಸಳೆಯನ್ನು ಮಿಶ್ರಣ ಮಾಡಿದಾಗ ಬರುವ ಜೀವಿಯಂತೆ ಇರುತ್ತಾನೆ. ಆದರೆ ಒಳಗೆ ಪ್ರವೇಶಿಸಲು ಬಿಡದ ಕಾರಣ ಹನುಮಂತ ಅವನೊಂದಿಗೆ ಯುದ್ಧ ಮಾಡುತ್ತಾನೆ. ಆಗ ಹನುಮನಿಗೆ ಒಂದು ಅಚ್ಚರಿ ಎದುರಾಗುತ್ತದೆ. ಯುದ್ಧ ಮಾಡುವಾಗ ಹನುಮಂತನಿಗೆ ತಾನು ತನ್ನೊಂದಿಗೆ ಯುದ್ಧ ಮಾಡಿದಂತಾಗುತ್ತದೆ.

ಮಕರಧ್ವಜನಿಗೆ ನೀನು ಯಾರು ? ನಿನ್ನ ತಂದೆ ತಾಯಿ ಯಾರು ? ಎಂದು ಕೇಳುತ್ತಾನೆ. ಆಗ ಅವನು ನಾನು ಪವನ ಪುತ್ರ ಹನುಮಂತನ ಮಗ ಎಂದು ಹೇಳುತ್ತಾನೆ. ಇದನ್ನು ಕೇಳಿದ ಹನುಮ ಬಹಳ ಕೋಪಗೊಳ್ಳುತ್ತಾನೆ. ಆಗ ಮಕರಧ್ವಜ ತನ್ನ ಹುಟ್ಟಿನ ಹಿಂದಿರುವ ಕಥೆಯನ್ನು ಹನುಮಂತನಿಗೆ ಹೇಳುತ್ತಾನೆ.ಇದಾದ ಮೇಲೆ ಅಹಿರವನನನ್ನು ಸೋಲಿಸಿ ರಾಮ ಲಕ್ಷ್ಮಣರನ್ನು ಕರೆದುಕೊಂಡು ಹೋಗುವಾಗ ಮಕರಧ್ವಜನನ್ನು ಪಾತಾಳದ ರಾಜನಾಗಿ ಮಾಡುತ್ತಾನೆ. ಈಗಲೂ ಕೂಡ ನಮ್ಮ ಭಾರತದ, ಗುಜರಾತ್ ರಾಜ್ಯದಲ್ಲಿನ ಪೋರಬಂಧರ್ ಬಳಿ ಇರುವ ವಡೋದರ ಎಂಬ ಪುಟ್ಟ ಊರಿನಲ್ಲಿ ಮಕರಧ್ವಜನ ದೇವಾಲಯವಿದೆ.ಅಷ್ಟೇ ಅಲ್ಲದೆ ದ್ವಾರಕಾ,ಮಹಾರಾಷ್ಟ್ರ,ಮದ್ಯ ಪ್ರದೇಶದ ಗ್ವಾಲಿಯರ್,ಮತ್ತು ಬೀವಾರ ನ ರಾಜಸ್ಥಾನನಲ್ಲಿ ಮಕರದ್ವಜನನ್ನು ಪೂಜಿಸುತ್ತಾರೆ.ಕೆಲವು ಕಡೆ ಹನುಮಂತ ಹಾಗೂ ಮಕರದ್ವಜ ಇಬ್ಬರನ್ನು ಒಂದೇ ಕಡೆ ಒಟ್ಟಿಗೆ ಪೂಜಿಸಲಾಗುತ್ತದೆ.ಎಲ್ಲಾ ದೇವರಂತೆ ಮಕರಧ್ವಜನಿಗೂ ಕೂಡ ನಿತ್ಯ ಪೂಜಾ, ಪುನಸ್ಕಾರಗಳು ನಡೆಯುತ್ತವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top