ಹೆಚ್ಚಿನ

ನಾಟಿ ಸ್ಟೈಲ್ ನಾಲಿಗೆಗೆ ಹಿತ ನೀಡುವಂತ ಬೀಗರ ಊಟದ ಸ್ಪೆಷಲ್ ಬೋಟಿ ಗೊಜ್ಜು ಮಾಡುವ ವಿಧಾನ ,ನೋಡಿ ,ಮಾಡಿ ,ತಿಂದು ಆಸ್ವಾದಿಸಿ .

ಬೋಟಿ ಗೊಜ್ಜು ಮಾಡುವ ವಿಧಾನ.
ಬೇಕಾಗುವ ಸಾಮಗ್ರಿಗಳು :ಚೆನ್ನಾಗಿ ಶುಚಿಗೊಳ್ಳಿಸಿದ ಬೋಟಿ 1 ಕೆಜಿ,ಒಂದು ರಾತ್ರಿ ನೆನೆಸಿದ ಕಡಲೆ ಕಾಳು 1 ಕಪ್,ಸ್ವಲ್ಪ ಕೊತ್ತಂಬರಿ ಸೊಪ್ಪು,2 ಚಮಚ ಧನಿಯಾ ಪುಡಿ,2 ಚಮಚ ಅಚ್ಚ ಖಾರದ ಪುಡಿ,ರುಚಿಗೆ ಬೇಕಾದ ಉಪ್ಪು,2 ಉದ್ದವಾಗಿ ಕತ್ತರಿಸಿಕೊಂಡ ಈರುಳ್ಳಿ,ಚೆನ್ನಾಗಿ ತುರಿದುಕೊಂಡ ತೆಂಗಿನ ಕಾಯಿ ತುರಿ 4 / 3 ಕಪ್,ಶುಂಠಿ 1 1 /2 ಇಂಚು,ಬೆಳ್ಳುಳ್ಳಿ 10 ಹೆಸಲು,1 ಚಮಚ ಹುರಿಗಡಲೆ,ಕರಿ ಮೆಣಸು ಒಂದು ಚಮಚ,ಎಣ್ಣೆ,2 ಲವಂಗ,ಚಕ್ಕೆ 2 ಇಂಚು.

 

 

 

ಮಾಡುವ ವಿಧಾನ :
ಮೊದಲಿಗೆ ಬೋಟಿಯನ್ನು ಶುಚಿಗೊಳ್ಳಿಸುವುದಕ್ಕೂ ಮುಂಚೆ ಚೆನ್ನಾಗಿ ಬಿಸಿ ನೀರಿನಲ್ಲಿ ಅರ್ಧ ಗಂಟೆ ಬೇಯಿಸಿ ನಂತರ ಅದನ್ನು ಚೆನ್ನಾಗಿ ಶುಚಿಗೊಳ್ಳಿಸಿ ಚಿಕ್ಕ ಚಿಕ್ಕದಾಗಿ ಕತ್ತರಿಸಿ ಇಟ್ಟುಕೊಳ್ಳಿ .ನಂತರ ಕುಕ್ಕರ್ ಗೆ ಒಂದು ಲೋಟ ನೀರನ್ನು ಹಾಕಿಕೊಂಡು ಅದಕ್ಕೆ ಕಡಲೆ ಕಾಳು ಹಾಕಿ 1 ಅಥವಾ 2 ಬಾರಿ ಕುಕ್ಕರ್ ಕೂಗಿಸಿ ಬೆಂದ ನಂತರ ಒಂದು ಬಾಣಲೆಯಲ್ಲಿ ಒಂದು ಚಮಚ ಎಣ್ಣೆಯನ್ನು ಹಾಕಿ ಅದಕ್ಕೆ ಮುಕ್ಕಾಲು ಭಾಗ ಕತ್ತರಿಸಿಕೊಂಡ ಈರುಳ್ಳಿ ,ಬೆಳ್ಳುಳ್ಳಿ ,ಕರಿ ಮೆಣಸು ಮತ್ತು ಶುಂಠಿ ಹಾಕಿಕೊಂಡು ಸ್ವಲ್ಪ ಹೊತ್ತು ಬಾಡಿಸಿಕೊಳ್ಳಿ ನಂತರ ಒಂದು ಮಿಕ್ಸಿಗೆ ಬಾಡಿಸಿಕೊಂಡ ಮಿಶ್ರಣ ಹಾಗೂ ಧನಿಯಾ ಪುಡಿ,ಅಚ್ಚ ಖಾರದ ಪುಡಿ , ತೆಂಗಿನ ಕಾಯಿ ತುರಿ,ಬೆಳ್ಳುಳ್ಳಿ ,ಹುರಿಗಡಲೆ ,ಲವಂಗ ,ಚಕ್ಕೆ , ಕೊತ್ತಂಬರಿ ಸೊಪ್ಪು ಹಾಕಿ ಸ್ವಲ್ಪ ನೀರನ್ನು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ .ಇನ್ನೊಂದು ಕುಕ್ಕರ್ ನಲ್ಲಿ ಸ್ವಲ್ಪ ಎಣ್ಣೆ ಹಾಕಿ ನಂತರ ಅದಕ್ಕೆ ಉಳಿದ ಈರುಳ್ಳಿ ,ಕತ್ತರಿಸಿಕೊಂಡ ಬೋಟಿ ,ರುಚಿಗೆ ಬೇಕಾದ ಉಪ್ಪು ಹಾಗೂ ಅರ್ಧ ಚಮಚ ಅರಿಶಿನ ಹಾಕಿ ಸ್ವಲ್ಪ ಹೊತ್ತು ಹುರಿದುಕೊಳ್ಳಿ ನಂತರ ಇದಕ್ಕೆ ಆಗಲೇ ಮಿಕ್ಸಿಯಲ್ಲಿ ರುಬ್ಬಿಕೊಂಡ ಮಿಶ್ರಣ ಹಾಕಿ ,ಒಂದು ಲೋಟ ನೀರನ್ನು ಸೇರಿಸಿ,ಅನಂತರ ಬೇಯಿಸಿ ಇಟ್ಟುಕೊಂಡ ಕಡಲೆ ಕಾಳು ಹಾಗೂ ರುಚಿಗೆ ಬೇಕಾದ ಉಪ್ಪನ್ನು ಸೇರಿಸಿ 2 ರಿಂದ 3 ಬಾರಿ ಕುಕ್ಕರ್ ಕೂಗಿದ ಮೇಲೆ ಸ್ವಲ್ಪ ಸಮಯದ ನಂತರ ಅದಕ್ಕೆ 1 ಅಥವಾ 1 1 / 2 ಚಮಚ ಮಟನ್ ಮಸಾಲಾ ಸೇರಿಸಿ ಅಷ್ಟೇ ಸವಿಯಲು ಬಿಸಿ ಬಿಸಿಯಾದ ಬೋಟಿ ಗೊಜ್ಜು ರೆಡಿ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top