fbpx
ದೇವರು

ನವರಾತ್ರಿಯ ದಸರಾ ಸಂದರ್ಭದಲ್ಲಿ ದೇವಿಗೆ ಈ ಹೂವನ್ನು ಸಮರ್ಪಿಸಿದರೆ ನಿಮ್ಮ ಎಂತಹ ಬೇಡಿಕೆ ಇದ್ದರೂ ಕೂಡ ಖಂಡಿತಾ ನೆರವೇರುತ್ತವೆ.

ಆಶ್ವೀಜ ಶುದ್ಧ ಪಾಡ್ಯದಿಂದ ಆಶ್ವೀಜ ಶುದ್ಧ ನವಮಿಯವರೆಗೆ ಶರನ್ನವರಾತ್ರಿ. ಈ ಸಂದರ್ಭದಲ್ಲಿ ದೇವಿಯ ನವರಾತ್ರಿಯನ್ನು ಆಚರಣೆ ಮಾಡಲಾಗುತ್ತದೆ. ಈ ದಸರಾ ಹಬ್ಬವನ್ನು ಒಂಬತ್ತು ದಿನಗಳ ಕಾಲ ಭಕ್ತಿ-ಶ್ರದ್ಧೆಯಿಂದ ಸಂಪೂರ್ಣ ಭಾರತದಲ್ಲಿ ಆಚರಿಸಲಾಗುತ್ತದೆ. ಈ ಒಂಬತ್ತು ದಿನಗಳು ಪವಿತ್ರ ಭಾವನೆಯಿಂದ ಶ್ರದ್ಧಾ, ಭಕ್ತಿಯಿಂದ ಆರಾಧಿಸುತ್ತಾರೆ ದೇವಿಯ ನವರಾತ್ರಿ .
ನವ ಎಂದರೆ ಒಂಬತ್ತು ಮತ್ತು ಹೊಸತು ಎಂದರ್ಥ . ಈ ಒಂಬತ್ತರ ಸಂಖ್ಯೆಯಲ್ಲಿ ಒಂದು ವಿಶೇಷತೆ ಇದೆ, ಅದೇನೆಂದರೆ 9 ಗುಣಾಕಾರದಲ್ಲಿ ಗುಣಾಕಾರವನ್ನು ಮಾಡಿದರೆ,9 ಎನ್ನುವ ಸಂಖ್ಯೆಯನ್ನು ಪರಸ್ಪರ ಕೂಡಿಸುತ್ತ ಬಂದರೆ ಕೊನೆಯಲ್ಲಿ 9 ಬರುತ್ತದೆ. ಈ ಸಂಖ್ಯೆಯಲ್ಲಿ ಪರಿಪೂರ್ಣತೆ ಇದೆ ಎಂದು ಶಾಸ್ತ್ರಕಾರರು ಹೇಳುತ್ತಾರೆ. ಅಂದರೆ ದೇವಿಯು ಎಷ್ಟೇ ಅವತಾರ ತಾಳಿದರು ಕೊನೆಯಲ್ಲಿ ಆದಿಶಕ್ತಿಯಾಗಿ ಉಳಿಯುತ್ತಾಳೆ ಎಂದು ಅದರರ್ಥ. ಇಂತಹ ದೇವಿಯನ್ನು ನವರಾತ್ರಿಯಲ್ಲಿ ಒಂಬತ್ತು ದಿನಗಳ ಕಾಲ ಆರಾಧಿಸಿ ಪೂಜಿಸುತ್ತಾರೆ.

 

 

 

ಒಂಬತ್ತು ದಿನಗಳ ಕಾಲ ದೇವಿಯನ್ನು 9 ಅವತಾರಗಳಲ್ಲಿ ಪೂಜಿಸುವುದೂ ಉಂಟು. 9 ಅವತಾರಗಳಲ್ಲಿ ಆಕೆಯನ್ನು ಪೂಜಿಸುತ್ತಾ, ಸಹಸ್ರನಾಮ ಪಾರಾಯಣ, ಅಷ್ಟೋತ್ತರ ಶತನಾಮಾವಳಿಗಳಿಂದ, ದೇವಿ ಭಾಗವತಗಳಿಂದ, ದುರ್ಗಾ ಸಪ್ತಶತಿಗಳಿಂದ ಪ್ರಾರ್ಥಿಸಿ ಪೂಜಿಸುತ್ತಾರೆ, ಹೀಗೆ ಪ್ರತಿನಿತ್ಯ ನವ ವಿಧ ಭಕ್ತಿಯಲ್ಲಿ ಪೂಜಿಸುತ್ತಾ, ನವ ವಿಧದಲ್ಲಿ ಭಕ್ಷ್ಯ, ಭೋಜನಗಳನ್ನು ಮಾಡಿ ನೈವೇದ್ಯ ಮಾಡುತ್ತಾ ಆರಾಧಿಸಿದರೆ ಈ ಒಂಬತ್ತು ದಿನಗಳ ನವರಾತ್ರಿಯಲ್ಲಿ ದೇವಿಯನ್ನು ಪುಷ್ಪಗಳಿಂದ ಮತ್ತು ಫಲಗಳಿಂದ ಪೂಜಿಸುವುದರಿಂದ ಬಹು ಶೀಘ್ರವಾಗಿ ಆಕೆಯ ಅನುಗ್ರಹ ಪ್ರಾಪ್ತಿಯಾಗುತ್ತದೆ.

ಆಕೆಗೆ ಪ್ರಿಯವಾದ ಪುಷ್ಪಗಳನ್ನು ಸಮರ್ಪಿಸಿ ಪೂಜಿಸುವುದರಿಂದ ಆಕೆಯ ಸಂಪೂರ್ಣ ಅನುಗ್ರಹ ಲಭಿಸುತ್ತದೆ ಎಂದು ಹಿರಿಯರು ಹೇಳುತ್ತಾರೆ. ಇಂತಹ ಹೂವುಗಳಿಂದ ಪೂಜಿಸುವುದರಿಂದ ಶುಭ ಫಲಿತಾಂಶಗಳು ಉಂಟಾಗುತ್ತವೆ. ಯಾವ ಹೂಗಳಿಂದ ಪೂಜಿಸಬೇಕು ? ಎನ್ನುವುದನ್ನು ನೋಡೋಣ.ಸಂಪಿಗೆ, ದಾಸವಾಳ, ಮಲ್ಲಿಗೆ ಹಾಗೂ ಕೇದಿಗೆ. ಇಂತಹ ಸುಗಂಧ ಭರಿತ ಹೂವುಗಳಿಂದ ಆ ಜಗನ್ಮಾತೆಯನ್ನು ಪೂಜಿಸಬೇಕು. ಹೀಗೆ ಪೂಜಿಸುವಾಗ ಷೋಡಶೋಪಚಾರ ಪೂಜೆಯಿಂದ ಆಕೆಯನ್ನು ಪೂಜಿಸಬೇಕು. ಆಗ ಆಕೆ ಪ್ರಸನ್ನಳಾಗುತ್ತಾಳೆ. ಕರ್ಪೂರ, ತೆಂಗು, ಬಾಳೆ ಹಣ್ಣು, ಕಿತ್ತಳೆ, ದಾಳಿಂಬೆ ಮೊದಲಾದ ಹಣ್ಣುಗಳಿಂದ ಆಕೆಗೆ ನೈವೇದ್ಯ ಮಾಡಬೇಕು. ಹೀಗೆ ಆಕೆಯನ್ನು ಭಕ್ತಿ ,ಶ್ರದ್ಧೆಯಿಂದ ಪೂಜಿಸುತ್ತಾ ಬಗೆಬಗೆಯ ಭಕ್ಷ್ಯ, ಭೋಜ್ಯ, ಲೇಹ್ಯ, ಪಾನೀಯಗಳಿಂದ ನಿವೇದನೆಯನ್ನು ಸಮರ್ಪಿಸಬೇಕು. ಹೀಗೆ ಆಕೆಯನ್ನು ನವ ವಿಧದಲ್ಲಿ ಪೂಜಿಸುವುದರಿಂದ ಆಕೆಯ ಸಂಪೂರ್ಣ ಕೃಪೆ ಉಂಟಾಗುತ್ತದೆ.ದೇವಿಯನ್ನು ದುರ್ಗಾ ಸಪ್ತಶುತಿ, ಲಲಿತ ಸಹಸ್ರನಾಮಗಳಿಂದ ಪೂಜಿಸುವುದರಿಂದ ಸಿರಿ, ಸಂಪತ್ತು ಉಂಟಾಗುತ್ತದೆ . ಐಶ್ವರ್ಯ, ಸಂಪತ್ತು ,ಶಾಂತಿ, ನೆಮ್ಮದಿ ನೆಲೆಸುತ್ತದೆ. ಹೀಗೆ ಈ ಹೂವುಗಳನ್ನು ಹಾಗೂ ಹಣ್ಣುಗಳನ್ನು ಜಗನ್ಮಾತೆಗೆ ಸಮರ್ಪಿಸಿ, ಆಕೆಯ ಪ್ರಸಾದವನ್ನು ಸ್ವೀಕರಿಸುವುದರಿಂದ ಸಾಕಷ್ಟು ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬುದು ಹಿರಿಯರ ಮಾತು. ಹೀಗೆ ನಾವು ಕೂಡ ಈ ನವರಾತ್ರಿಯಲ್ಲಿ ನವ ವಿಧವಾಗಿ ಭಕ್ತಿಯಿಂದ ಜಗನ್ಮಾತೆಯನ್ನು ಪೂಜಿಸುವುದರಿಂದ ಸಕಲ ಸಂಪತ್ತು, ಭೋಗ,ಭಾಗ್ಯ ಸಿದ್ಧಿಸುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top