ಮನೋರಂಜನೆ

ವಿಡಿಯೋ ಕಾಲ್​ ಮಾಡಿದ ಒಂದು ವರ್ಷದ ಮಗು ದಂಗಾದ ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್.

ದೊಡ್ಡ ಸಂಗೀತ ನಿರ್ದೇಶಕರಾಗಿರುವ ಎಆರ್​ ರೆಹಮಾನ್​ ತಮ್ಮ ಸರಳತೆಗೆ ಹೆಸರುವಾಸಿ.ಅವರು ಮಾಡಿರುವ ಸಾಧನೆ ಅಷ್ಟಿಷ್ಟಲ್ಲ,ರೆಹಮಾನ್ ತಮ್ಮ ಸಂಗೀತದ ಮೂಲಕ ಜನರಿಗೆ ತುಂಬಾನೇ ಹತ್ತಿರ ಅವರು ಗಳಿಸಿರುವ ಫ್ಯಾನ್ ಫಾಲೋಯಿಂಗ್ ಕಮ್ಮಿ ಏನ್ ಇಲ್ಲ ,ಅವರ ಸಂಗೀತಕ್ಕೆ ಬೀಳದೆ ಇರುವವರೇ ಇಲ್ಲ ,ಪ್ರತಿಯೊಬ್ಬ ಕಲಾವಿದನಿಗೆ ಅಭಿಮಾನಿಗಳು ತಮ್ಮದೇ ಆದ ಸ್ಟೈಲ್ ಮೂಲಕ ಅವರ ಅಭಿಮಾನ ವ್ಯಕ್ತ ಪಡಿಸುತ್ತಾರೆ ಕೆಲವರು ಗಿಫ್ಟ್ ಕೊಡುತ್ತಾರೆ ,ಇನ್ನು ಕೆಲವರು ಅವರದ್ದೇ ಚಿತ್ರವ್ನನು ಸ್ಕೆಚ್​ ಮಾಡಿ ಕೊಡುತ್ತಾರೆ ಮತ್ತು ಕೆಲವರು ಕೊಡುವ ಸಪ್ರೈಸ್ಡ್​ ಗಿಫ್ಟ್​ ಕಂಡು ಅವಕ್ಕಾದವರು ಇದ್ದಾರೆ,ಒಮ್ಮೆ ಅಭಿಮಾನಿಗಳು ತೋರುವ ಅಭಿಮಾನ ಸ್ಟಾರ್​ಗಳ ಕಣ್ಣಲ್ಲಿ ನೀರು ತರಿಸಿದ್ದೂ, ಅವರನ್ನು ಭಾವುಕರನ್ನಾಗಿಸಿದ್ದೂ ಉಂಟು.

 

 

 

ಇಲ್ಲಿ ನಾವು ನಿಮಗೆ ಹೇಳಲು ಹೊರಟಿರುವ ಒಂದು ಇಂಟ್ರೆಸ್ಟಿಂಗ್​ ವಿಚಾರ ಏನಪ್ಪಾ ಅಂದ್ರೆ ಒಂದು ವರ್ಷದ ಪುಟಾಣಿ , ಖ್ಯಾತ ಸಂಗೀತಗಾರ ಆರ್​ ರೆಹಮಾನ್​ ಅವರಿಗೆ ವಿಡಿಯೋ ಕಾಲ್​ ಮಾಡಿ ಮಾತನಾಡಿದೆ. ಇನ್ನು ರೆಹಮಾನ್​ ಕೂಡ ಅದಕ್ಕೆ ಖುಷಿಯಾಗಿ ರಿಯಾಕ್ಟ್​ ಮಾಡಿ ತಮ್ಮ ಸರಳತೆಯನ್ನ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಆ ಮಗು ಬೇರೆ ಯಾರೂ ಅಲ್ಲ, ಗಾಯಕ ಅದ್ನಾನ್​ ಸಾಮಿ ಅವರ ಪುತ್ರಿ ಮೆದಿನಾ.ಹೌದು ಮೆದಿನಾ ಒಂದು ವರ್ಷದ ಪುಟ್ಟ ಕಂದಮ್ಮ ,ಅಪ್ಪ ಅದ್ನಾನ್​ ಸಾಮಿ ಇಲ್ಲದೆ ಸಮಯದಲ್ಲಿ ಪುತ್ರಿ ಮೆದಿನಾ ಎಆರ್​​ ರೆಹಮಾನ್​ ಅವರಿಗೆ ಫೇಸ್​ಟೈಮ್​ ಮೂಲಕ ಕಾಲ್​​​ ಮಾಡಿದ್ದಳಂತೆ.

ಇದನ್ನು ಸ್ವಂತ ಅದ್ನಾನ್​ ಸಾಮಿ,ತಮ್ಮ ಇನ್ಸ್​​ಟಾಗ್ರಾಂ ಅಕೌಂಟ್​​ನಲ್ಲಿ ಪೋಸ್ಟ್​ ಮಾಡಿದ್ದಾರೆ,ಪೋಸ್ಟ್ ಮಾಡಿ ಹೇಗೆ ಬರೆದುಕೊಂಡಿದ್ದಾರೆ ರೆಹಮಾನ್​ ಅವರು 2.o ಸಿನಿಮಾಗಾಗಿ ಲಂಡನ್​​​ನಲ್ಲಿ ರೆಕಾರ್ಡಿಂಗ್​ನಲ್ಲಿದ್ದು, ಅವರೊಂದಿಗೆ ಫೇಸ್​​ಟೈಮ್​​ ಮೂಲಕ ಮೆದಿನಾ ಚಾಟ್​ ಮಾಡಿದ್ದಾಳೆ. ರೆಹಮಾನ್​​ ಅವರು ತಮ್ಮ ಸ್ಟುಡಿಯೋವನ್ನು ತೋರಿಸಿದ್ದಾರೆ. ಎಲ್ಲಾ ಫೋನ್ ಹಾಗೂ ಐಪ್ಯಾಡ್​​ಗಳಿಗೆ ಪಾಸ್​​ವರ್ಡ್​ ಹಾಕೋ ಟೈಂ ಬಂದಿದೆ ಅಂತ ಸಮಿ ಬರೆದುಕೊಂಡಿದ್ದಾರೆ.ಇಲ್ಲಿ ಆ ಮಗುವಿನ ಬುದ್ದಿವಂತಿಕೆ ಮೆಚ್ಚಬೇಕೋ ಅಥವಾ ರೆಹಮಾನ್ ರವರ ಸರಳ ಸ್ವಭಾವ ಮೆಚ್ಚಬೇಕೋ ಗೊತ್ತಿಲ್ಲ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top