fbpx
ಹೆಚ್ಚಿನ

ಈ ವಸ್ತುವನ್ನು ಶುಕ್ರವಾರದ ದಿನ ಶ್ವೇತ ವಸ್ತ್ರದಲ್ಲಿ ಗಂಟು ಕಟ್ಟಿ ಮನೆಯಲ್ಲಿ ಇಟ್ಟರೆ ನಿಮ್ಮ ಮನೆ ಅಕ್ಷಯ ಪಾತ್ರೆಯಾಗಿ ಅನ್ನಕ್ಕೆ ಯಾವತ್ತು ಕೊರತೆ ಬರುವುದಿಲ್ಲವಂತೆ

ಈ ವಸ್ತುವನ್ನು ಮನೆಯಲ್ಲಿಟ್ಟರೆ ಮನೆ ಅಕ್ಷಯ ಪಾತ್ರೆ ಯಾಗುತ್ತದೆ. ಆ ಮನೆಯಲ್ಲಿ ಅನ್ನಕ್ಕೆ ಕೊರತೆ ಎಂದಿಗೂ ಬರುವುದಿಲ್ಲ.ನಿಮ್ಮ ಅಡುಗೆ ಮನೆಯಲ್ಲಿ ಈ ವಸ್ತುವನ್ನು ಇಟ್ಟರೆ ಅಲ್ಲಿ ಅಕ್ಷಯ ಪಾತ್ರೆ ಆಗುತ್ತದೆ. ಏನಿದು ? ಅಕ್ಷಯ ಪಾತ್ರೆ ಎಂದು ನೀವು ಯೋಚನೆ ಮಾಡಬಹುದು. ಹಿಂದೆ ಮಹಾಭಾರತದಲ್ಲಿ ಧರ್ಮರಾಯ, ಭೀಮ, ಅರ್ಜುನ, ನಕುಲ, ಸಹದೇವ, ದ್ರೌಪದಿ, ಎಲ್ಲರೂ ಅಜ್ಞಾತವಾಸದಲ್ಲಿ ಇರುತ್ತಾರೆ. ಅವರು ಜೂಜಿನಲ್ಲಿ ಎಲ್ಲವನ್ನೂ ಕಳೆದುಕೊಂಡು ಬಿಡುತ್ತಾರೆ. ಆ ಸಂದರ್ಭದಲ್ಲಿ ಅಜ್ಞಾತ ವಾಸಕ್ಕೆ ಹೋಗಿದ್ದಾಗ ಅವರಿಗೆ ತಿನ್ನಲು ಸಹ ಏನೂ ಇರುವುದಿಲ್ಲ. ಅಂತಹ ಕಷ್ಟ ಕಾಲ ಅವರಿಗೆ ಬರುತ್ತದೆ.ಆ ಸಂದರ್ಭದಲ್ಲಿ ಕೃಷ್ಣನನ್ನು ನೆನಪಿಸಿಕೊಳ್ಳುತ್ತಾರೆ. ಕೃಷ್ಣ ಎಷ್ಟೇ ಆದರೂ ಪಾಂಡವರ ಪಕ್ಷ ಪಾತ್ರದಲ್ಲಿ ಇರುತ್ತಾನೆ. ಅವನು ಬಂದು ಹೇಳಿ ಕೊಡುತ್ತಾನೆ . ಸೂರ್ಯ ದೇವನನ್ನು ಪೂಜಿಸಿ, ಆಗ ಅವನು ನೀನು ಕೇಳಿದ್ದನ್ನು ವರವಾಗಿ ಕೊಡುತ್ತಾನೆ.

 

 

 

ಸೂರ್ಯನಿಗೆ ಆದಿತ್ಯ ನಾರಾಯಣ ಎಂದು ಹೇಳುತ್ತಾರೆ ಆದ್ದರಿಂದ ಸೂರ್ಯನನ್ನು ಪೂಜಿಸಿ ಯಾಕೆಂದರೆ ನೀವು ಚಂದ್ರ ವಂಶಸ್ಥರು ಎಂದು ಹೇಳುತ್ತಾನೆ ಕೃಷ್ಣ. ಆಗ ದ್ರೌಪದಿ ಸಹಿತ ಪಾಂಡವರು ಸೂರ್ಯನನ್ನು ಭಕ್ತಿಯಿಂದ ಪೂಜೆ ಮಾಡಿದರು.
ಸೂರ್ಯ ದೇವನು ಪ್ರತ್ಯಕ್ಷನಾಗಿ ಆ ಅಕ್ಷಯ ಪಾತ್ರೆಯನ್ನು ಕೊಡುತ್ತಾರೆ. ಅಕ್ಷಯ ಪಾತ್ರೆಯ ವಿಶೇಷತೆ ಎಂದರೆ ಏನು ಇರುತ್ತದೋ ಅದು ವೃದ್ಧಿಯಾಗುತ್ತದೆ. ಅವರು ಏನು ಹೇಳುತ್ತಾರೋ ಅದು ಅವರಿಗೇ ಸಿಗುತ್ತದೆ. ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ಕೂಡ ಅವರು ಏನು ? ಕೇಳುತ್ತಾರೋ ,ಅದನ್ನು ಕೊಡುತ್ತದೆ. ಅದಕ್ಕೆ ಅಕ್ಷಯ ಪಾತ್ರೆ ಎಂದು ಹೇಳುತ್ತಾರೆ. ಅಂದರೆ ವೃದ್ಧಿಯಾಗುತ್ತದೆ.

ಪ್ರತಿಯೊಬ್ಬರೂ ಕೂಡ ಬಯಸುತ್ತೀರ ನನ್ನ ಗಂಡ ಆಥವಾ ಹೆಂಡತಿ ಮಕ್ಕಳಿಗೆ ನನ್ನ ಮನೆಯವರಿಗೆ ಸದಾ ಎಲ್ಲವೂ ಸಂತೃಪ್ತಿಯಾಗಿ ಇರಬೇಕು. ಅನ್ನಕ್ಕೆ ಕೊರತೆ ಎಂದಿಗೂ ಬರಬಾರದು ಎಂದು ಬಯಸುತ್ತೀರಾ. ಒಂದು ಹೊತ್ತಿನ ಊಟ ಸಿಕ್ಕಿದರೆ ಸಾಕು ಎಂದು ಬಯಸುತ್ತೀರಾ, ಊಟಕ್ಕೂ ಪರದಾಡಿದರೆ ನಮಗೆ ಸಮಸ್ಯೆಯಾಗುತ್ತದೆ, ಅಂದರೆ ಅಂತಹ ದುಃಖ ಸಮಸ್ಯೆಯಿಂದ ಹೊರಗಡೆ ಬರುವುದಕ್ಕೆ, ಒಂದು ಅದ್ಭುತವಾದ ಉಪಾಯ ಇದೆ. ಅದನ್ನು ಎಲ್ಲರೂ ಪಾಲಿಸಬೇಕು. ಆಗ ಅನ್ನಕ್ಕೆ ಕೊರತೆ ಉಂಟಾಗುವುದಿಲ್ಲ .

 

 

 

ಅದು ಏನೆಂದರೆ ನೂರಾ ಎಂಟು ಲವಂಗಗಳನ್ನು ತೆಗೆದುಕೊಂಡು, ಒಂದು ಶ್ವೇತ ವಸ್ತ್ರದಲ್ಲಿ ಅಂದರೆ ಹೊಸದಾದ ಬಿಳಿಯ ಬಟ್ಟೆಯನ್ನು ತೆಗೆದುಕೊಂಡು ಒಂದು ಶುಕ್ರವಾರ, ಮೂಲ ನಕ್ಷತ್ರ ಇರುವ ದಿನ, ನೂರಾ ಎಂಟು ಲವಂಗಗಳನ್ನು ಶ್ವೇತ ವಸ್ತ್ರದಲ್ಲಿ ಹಾಕಿ ಅದರ ಜೊತೆಗೆ ಹನ್ನೊಂದು ರೂಪಾಯಿಯನ್ನು ( ನಾಣ್ಯಗಳನ್ನೇ ಹಾಕಬೇಕು ) ಹಾಕಿ ,ತಾಂಬೂಲ ,ಚಂದನ,ಗೋರೋಚನವನ್ನು ಹಾಕಿ ಕಟ್ಟಿ. ಆ ಗಂಟನ್ನು ನಿಮ್ಮ ಮನೆಯ ದೇವರ ಬಳಿಯಿಟ್ಟು, ಹನ್ನೊಂದು ದಿನ ಪೂಜೆ ಮಾಡಿ.ನಂತರ ತೆಗೆದುಕೊಂಡು ಬಂದು ನೀವು ಎಲ್ಲಿ ಅಕ್ಕಿ, ಬೇಳೆ ,ಸಕ್ಕರೆ ಇಡುತ್ತೀರೋ, ಅಂತಹ ಒಂದು ಉಗ್ರಾಣದಲ್ಲಿ ಅಂದರೆ ಅಡುಗೆ ಮನೆಯಲ್ಲಿ ಅಕ್ಕಿ ಪಾತ್ರೆಯಾದರೂ ಆಗಬಹುದು, ಅದರೊಳಗೆ ಇಟ್ಟು ಬಿಡಿ. ಆಗ ನೋಡಿ ನಿಮಗೆ ಯಾವತ್ತಿಗೂ ಅನ್ನಕ್ಕೆ ಕೊರತೆ ಬರುವುದಿಲ್ಲ. ರೇಷನ್ ಎನ್ನುವುದು ಕಡಿಮೆಯಾಗುವುದಿಲ್ಲ. ಎಲ್ಲವೂ ಅಕ್ಷಯವಾಗುತ್ತದೆ. ನಿಮ್ಮ ಮನೆಗೆ ನೂರು ಜನ ಬಂದರೂ ಸಹ , ಸಾವಿರ ಜನ ಬಂದರೂ ನಿಮ್ಮ ಮನೆಯಲ್ಲಿ ನಿತ್ಯ ಅನ್ನದಾಸೋಹ ನಡೆಯುತ್ತಿರುತ್ತದೆ. ಇಂದಿಗೂ ಅನ್ನಕ್ಕೆ ಕೊರತೆ ಉಂಟಾಗುವುದಿಲ್ಲ.ಆ ಮನೆಯಲ್ಲಿ ಅನ್ನಪೂರ್ಣೇಶ್ವರಿ ದೇವಿ ಸದಾ ನೆಲೆಸಿರುತ್ತಾಳೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top