fbpx
ದೇವರು

ನವರಾತ್ರಿಯಲ್ಲಿ ಈ ಸಣ್ಣ ದೀಪವನ್ನು ಹಚ್ಚಿದರೆ ಸಾಕಂತೆ ಎಂತಹ ಬಡವರಾದರೂ ಕೂಡ ದೇವಿಯ ಕೃಪೆಗೆ ಪಾತ್ರರಾಗಿ ಸಿರಿವಂತನಾಗುತ್ತಾನಂತೆ

ಶರನ್ನವರಾತ್ರಿ ಆರಂಭವಾಗುತ್ತಿದೆ. ಇದೇ ಶರನ್ನವರಾತ್ರಿಯ ನಾಡ ಹಬ್ಬದಲ್ಲಿ ಪ್ರತ್ಯೇಕವಾಗಿ ಕೆಲವು ನಿಯಮಗಳನ್ನು ಪಾಲಿಸುತ್ತಾ ಪೂಜೆಗಳನ್ನು ಪುನಸ್ಕಾರಗಳನ್ನು ಆಚರಿಸುವುದು ಸನಾತನ ಕಾಲದಿಂದಲೂ ಆಚರಣೆಯಲ್ಲಿದೆ. ಮುಖ್ಯವಾಗಿ ಶರನ್ನವರಾತ್ರಿ ದೀಕ್ಷೆಯಲ್ಲಿ ಅಥವಾ ವ್ರತದಲ್ಲಿ ಉಪವಾಸ, ಪೂಜೆ ,ದಾನ ,ಧರ್ಮ ಇತ್ಯಾದಿಗಳನ್ನು ಮಾಡುವುದು ಅನಾದಿ ಕಾಲದಿಂದಲೂ ಸಂಪ್ರದಾಯವಾಗಿ ಬಂದಿದೆ. ಒಂಬತ್ತು ದಿನಗಳು ಕೂಡ ಉಪವಾಸವಿದ್ದು, ಕೇವಲ ಹಣ್ಣು ಹಾಲು ಸ್ವೀಕರಿಸಿ ಇರುವವರು ಇದ್ದಾರೆ. ಹೀಗೆ ದೀಕ್ಷೆಯನ್ನು ಮಾಡುವಾಗ ಕೆಲವು ನಿಯಮ ಪದ್ಧತಿಗಳನ್ನು ಪಾಲಿಸಬೇಕಾದದ್ದು ಕಡ್ಡಾಯವಾಗಿದೆ.

ಹೀಗೆ ಮಾಡಲು ಆಗದವರು ಕೇವಲ ದೀಪವನ್ನು ಪ್ರಜ್ವಲಿಸುವುದರಿಂದ ನಾವು ಶರನ್ನವರಾತ್ರಿಯನ್ನು ಆಚರಿಸಬಹುದು. ಮುಖ್ಯವಾಗಿ ಯಾವುದೇ ಹಬ್ಬ-ಹರಿದಿನಗಳಲ್ಲಿ ಮನೆಯನ್ನು ಸ್ವಚ್ಛಗೊಳಿಸುವುದು, ಅನಾದಿಕಾಲದಿಂದಲೂ ನಮ್ಮಲ್ಲಿ ರೂಢಿಯಾಗಿ ಬಂದಿದೆ. ಮನೆಯನ್ನು ಅರಿಶಿಣದ ನೀರು ಅಥವಾ ಗೋಮಯದಿಂದ ಶುಭ್ರಗೊಳಿಸಿಕೊಂಡು ತೋರಣಗಳನ್ನು ಕಟ್ಟಿಕೊಂಡು ಎಲ್ಲಿ ನಾವು ಪೂಜೆಯನ್ನು ಮಾಡಬೇಕೋ, ಅಲ್ಲಿ ಆ ಸ್ಥಳವನ್ನು ಪರಿಶುದ್ಧಗೊಳಿಸಿ ಕೊಳ್ಳಬೇಕು. ಅಲ್ಲಿ ವೇದಿಕೆಯನ್ನು ಹಾಕಿಕೊಂಡು ಮಣೆಯ ಮೇಲೆ ಕಲಶ, ದೇವಿಯನ್ನು ಪ್ರತಿಷ್ಠಾಪಿಸಿ ಪೂಜೆಗೆ ತಯಾರು ಮಾಡಿಕೊಳ್ಳಬೇಕು. ಈ ಒಂಬತ್ತು ದಿನ ವಿಶೇಷವಾಗಿ ಜಗನ್ಮಾತೆಯಾದ ದೇವಿಯನ್ನು ಆರಾಧಿಸುವುದು ಪ್ರಮುಖವಾಗಿದೆ. ಇದನ್ನು ಹೀಗೆ ಮಾಡಬೇಕೆಂದು ಕಡ್ಡಾಯ ಇಲ್ಲ. ಯಥಾನುಶಕ್ತಿ ಅವರವರಿಗೆ ತಕ್ಕಂತೆ ಪೂಜಾ-ಪುನಸ್ಕಾರಗಳನ್ನು ಮಾಡಿಕೊಳ್ಳಬೇಕು. ಇನ್ನೂ ಯಾವುದು ಆಗದೆ ಇದ್ದರೆ ಕೇವಲ ಈ ಒಂದು ಪರಿಹಾರದಿಂದ ನಾವು ಶರನ್ನವರಾತ್ರಿಯನ್ನು ಭಕ್ತಿ ಶ್ರದ್ಧೆಯಿಂದ ಆಚರಿಸಿದಲ್ಲಿ ಜಗನ್ಮಾತೆಯ ಸಂಪೂರ್ಣ ಕೃಪೆಯ ಉಂಟಾಗುತ್ತದೆ. ಯಾವುದೇ ಪೂಜೆಗೂ ಮೊದಲು, ಯಾವುದೇ ಕಾರ್ಯಕ್ಕೂ ಮೊದಲು ನಾವು ದೀಪವನ್ನು ಹಚ್ಚಿ ಬೆಳಗುವುದರಿಂದ ಆ ಕಾರ್ಯಕ್ರಮಕ್ಕೆ ಚಾಲನೆ ಸಿಗುತ್ತದೆ . ದೀಪಾರಾಧನೆಯಲ್ಲಿ ಸಕಲ ಮುಕ್ಕೋಟಿ ದೇವತೆಗಳು ನೆಲೆಸಿರುತ್ತಾರೆ ಎಂದು ಹಿರಿಯರು ಹೇಳುತ್ತಾರೆ.

 

 

 

ದೀಪದಲ್ಲಿ ಶಾಂತಿ ನೆಮ್ಮದಿ ಇರುತ್ತದೆ ಹಾಗೆ ಬೆಳಕನ್ನು ಪಸರಿಸುವ ಪ್ರಕಾಶಮಾನವಾದ ಶಕ್ತಿ ಇರುತ್ತದೆ. ಈ ದೀಪದ ಹಿಂದೆ ಸಕಲ ದೇವತೆಗಳು ನಿಂತಿರುತ್ತಾರೆ ಎಂದು ಹೇಳಲಾಗುತ್ತದೆ. ಆದ್ದರಿಂದ ಈ ಹುಟ್ಟಿದ ದಿನ ಇನ್ನಿತರ ಕಾರ್ಯಕ್ರಮಗಳಿಗೆ ದೀಪ ಪ್ರಜ್ವಲಿಸುವುದರ ನಂತರ ಆರಂಭಿಸುವುದು. ಇಂತಹ ಪ್ರಾಮುಖ್ಯತೆಯನ್ನು ಹೊಂದಿರುವ ದೀಪಕ್ಕೆ ನಾವು ಸೂರ್ಯೋದಯಕ್ಕೂ ಮುನ್ನ ಹಾಗೂ ಸೂರ್ಯಾಸ್ತದ ನಂತರ ಪ್ರದೋಷ ಕಾಲದಲ್ಲಿ ದೀಪವನ್ನು ಹಚ್ಚಿ ನಾವು ಆ ಜಗನ್ಮಾತೆಯನ್ನು ಪ್ರಾರ್ಥಿಸಿದರೆ ಸಾಕು, ನಮಗೆ ಸಕಲ ಐಶ್ವರ್ಯಗಳು ಸಿದ್ಧಿಸುತ್ತವೆ. ಮೂರು ಬತ್ತಿಗಳನ್ನು ಎಣ್ಣೆ ಅಥವಾ ತುಪ್ಪದಲ್ಲಿ ನೆನೆಸಿ ಅವುಗಳನ್ನು ಮೂರು ಲೋಕಗಳ ಪಾಪವನ್ನು ಹೋಗಲಾಡಿಸಲು ಆ ಜಗನ್ಮಾತೆಗೆ ದೀಪವನ್ನು ಬೆಳಗುವುದರಿಂದ ಪ್ರಾರ್ಥಿಸಿ, ಪ್ರಾರ್ಥನೆ ಮಾಡಬೇಕು. ಇದರಿಂದ ನಮ್ಮ ಸಮಸ್ಯೆಗಳಿಗೆ ವಿಮುಕ್ತಿ ಸಿಗುತ್ತದೆ. ಅಷ್ಟೇ ಅಲ್ಲ ಸಕಲ ಲೋಕಕ್ಕೂ ಬೆಳಕನ್ನು ಪಸರಿಸುವ ಸೂರ್ಯದೇವನನ್ನು ಈ ರೀತಿಯಾಗಿ ಪ್ರಾರ್ಥಿಸುವುದರಿಂದ ನಮಗೆ ಸೂರ್ಯನ ಸಂಪೂರ್ಣ ಅನುಗ್ರಹ ಪ್ರಾಪ್ತಿಯಾಗುತ್ತದೆ. ಸೂರ್ಯದೇವನು ಅಸ್ತಮಿಸಿದ ನಂತರ ತನ್ನ ತೇಜಸ್ಸನ್ನು ದೀಪದಲ್ಲಿ ಉಳಿಸಿ ಜಗತ್ತಿಗೆ ಬೆಳಕಾಗುತ್ತಾನೆ. ಆದ್ದರಿಂದ ದೀಪವನ್ನು ಬೆಳಗಿಸಿ ಕೆಲವು ಜನ ಕೆಲವು ಪ್ರಾಂತ್ಯಗಳಲ್ಲಿ ಲಕ್ಷ್ಮೀಪೂಜೆಯನ್ನು ಕೂಡ ಮಾಡುತ್ತಾರೆ.
ಲಕ್ಷ್ಮಿ ದೀಪಕ್ಕೆ ಪ್ರತಿರೂಪವಾಗಿ ನಿಲ್ಲುತ್ತಾಳೆ. ಹೀಗೆ ಈ ಒಂಬತ್ತು ದಿನ ಸೂರ್ಯೋದಯದ ಕಾಲದಲ್ಲಿ ಮತ್ತು ಹಾಗೆ ಸೂರ್ಯಾಸ್ತದ ಕಾಲದ ನಂತರ ಪ್ರದೋಷ ಕಾಲದಲ್ಲಿ ದೀಪವನ್ನು ಹಚ್ಚುವುದರಿಂದ ಆ ಜಗನ್ಮಾತೆಯ ಕೃಪೆಗೆ ಮತ್ತು ಅನುಗ್ರಹಕ್ಕೆ ಪಾತ್ರರಾಗಬಹುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top