fbpx
ಭವಿಷ್ಯ

ವಾರಭವಿಷ್ಯ ಅಕ್ಟೋಬರ್ 8 ನೇ ತಾರೀಖಿನಿಂದ 14 ನೇ ತಾರೀಖಿನವರೆಗೆ.

ಮೇಷ ರಾಶಿ

 

 

ಮನೆಯ ವಾತಾವರಣದಲ್ಲಿ ಆಶಾಂತಿ ಸೃಷ್ಟಿಯಾಗುತ್ತದೆ, ಮನಸ್ಸಿನಲ್ಲಿ ನಾನಾ ಆಲೋಚನೆಗಳು ಮೂಡುತ್ತವೆ, ಮಾನಸಿಕ ವ್ಯಥೆ, ಮುಂಗೋಪ ಹೆಚ್ಚಾಗುವುದು, ಕೆಲಸ ಕಾರ್ಯಗಳಲ್ಲಿ ವಿಳಂಬ, ಆತುರ ನಿರ್ಧಾರದಿಂದ ಸಂಕಷ್ಟಕ್ಕೀಡಾಗುತ್ತೀರ, ಯೋಚಿಸಿ ಕೆಲಸದಲ್ಲಿ ಮುನ್ನಡೆಯುವುದು ಉತ್ತಮ.
ಪರಿಹಾರ:“ಓಂ ದುರ್ಗಾಯೈ ನಮಃ” ಈ ಮಂತ್ರವನ್ನು ಪ್ರತಿನಿತ್ಯ 48 ಬಾರಿ ಜಪಿಸಿ, ಸುಮಂಗಲಿಯರಿಗೆ ಪಾದಪೂಜೆಯನ್ನು ಮಾಡಿ, ಅರಿಶಿನ ಕುಂಕುಮ ಕೊಟ್ಟು ನಮಸ್ಕರಿಸಿ ಆಶೀರ್ವಾದವನ್ನು ಪಡೆಯಿರಿ.

ವೃಷಭ ರಾಶಿ 

 

 

ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ , ಅಧಿಕವಾದ ಖರ್ಚು, ಆತ್ಮೀಯರಲ್ಲಿ ವೈಮನಸ್ಯ, ಅನ್ಯರೊಂದಿಗೆ ವಾದ-ವಿವಾದಗಳು ಉಂಟಾಗುತ್ತವೆ, ಕುಟುಂಬದಲ್ಲಿ ಕಲಹ ಮಾಡುವ ಸಾಧ್ಯತೆ ಹೆಚ್ಚಾಗಿದೆ,ನೀವು ಆಡುವ ಮಾತಿನ ಮೇಲೆ ಹಿಡಿತ ಅಗತ್ಯ, ಎಷ್ಟೇ ಕಷ್ಟಗಳು ಬಂದರೂ ಎದುರಿಸುವಿರಿ.
ಪರಿಹಾರ:ಪ್ರತಿನಿತ್ಯ ಲಲಿತ ಸಹಸ್ರನಾಮವನ್ನು ಪಠಿಸಿ, ಶುಕ್ರವಾರ ಸುಮಂಗಲಿಯರಿಗೆ ಅರಿಶಿನ ಕುಂಕುಮವನ್ನು ಕೊಟ್ಟು ನಮಸ್ಕಾರ ಮಾಡಿ.

ಮಿಥುನ ರಾಶಿ

 

 

ಉನ್ನತ ವಿದ್ಯಾಭ್ಯಾಸದ ಯೋಗ, ಮಕ್ಕಳಿಗೆ ಓದಿನಲ್ಲಿ ಅಧಿಕವಾದ ಆಸಕ್ತಿ ಮೂಡಲಿದೆ, ಸ್ನೇಹಿತರಿಂದ ಖರ್ಚು ಮತ್ತು ನಷ್ಟವನ್ನು ಅನುಭವಿಸುವಿರಿ, ಮನಸ್ಸಿನಲ್ಲಿ ಅಂದುಕೊಂಡಿದ್ದನ್ನು ಸಾಧಿಸುವಿರಿ, ಇಷ್ಟಾರ್ಥಗಳು ಸಿದ್ಧಿಯಾಗುವುದು, ಅಪಘಾತವಾಗುವ ಸಾಧ್ಯತೆ ಹೆಚ್ಚಾಗಿದೆ, ಆದ್ದರಿಂದ ವಾಹನ ಚಾಲನೆಯಲ್ಲಿ ಆದಷ್ಟು ಎಚ್ಚರಿಕೆ ವಹಿಸಿ.
ಪರಿಹಾರ:ಪ್ರತಿನಿತ್ಯ ಸೂರ್ಯ ನಮಸ್ಕಾರವನ್ನು ಮಾಡಿ, ಪಕ್ಷಿಗಳಿಗೆ ಧಾನ್ಯವನ್ನು ಹಾಕಿ .

ಕಟಕ ರಾಶಿ 

 

 

ಅಧಿಕವಾದ ಶೀತಬಾಧೆ, ಆರೋಗ್ಯಕ್ಕಾಗಿ ಹಣ ವ್ಯಯ, ಷೇರು ವ್ಯವಹಾರಗಳಲ್ಲಿ ನಷ್ಟ ಉಂಟಾಗುವುದು, ಹಣಕಾಸಿನ ವಿಚಾರದಲ್ಲಿ ಎಚ್ಚರ ವಹಿಸಿ, ಈ ವಾರ ಬಂಡವಾಳ ಹೂಡಿಕೆ ಮಾಡುವುದು ಬೇಡ, ಎಷ್ಟೇ ಐಶ್ವರ್ಯವಿದ್ದರೂ ಕೂಡ ಮಾನಸಿಕ ನೆಮ್ಮದಿಗೆ ಭಂಗ ಬರಲಿದೆ, ಮನಸ್ಸಿನಲ್ಲಿ ಅತಿಯಾದ ನೋವು ಬಾಧಿಸುವುದು.
ಪರಿಹಾರ:ಪ್ರತಿನಿತ್ಯ ಗೋಪೂಜೆಯನ್ನು ಮಾಡಿ ಹಸು ಮತ್ತು ಕರುವಿಗೆ ಬೆಲ್ಲ ಮತ್ತು ಬಾಳೆಹಣ್ಣನ್ನು ತಿನ್ನಿಸಿ.

ಸಿಂಹ ರಾಶಿ 

 

 

ಎಷ್ಟೆ ಹಣಕಾಸಿನ ಸಮಸ್ಯೆ ಇದ್ದರೂ ನೆಮ್ಮದಿ ಇರುವುದಿಲ್ಲ, ಇಷ್ಟಾರ್ಥ ಸಿದ್ಧಿಗಾಗಿ ಅಧಿಕ ತಿರುಗಾಟವನ್ನು ಮಾಡಬೇಕಾಗುತ್ತದೆ, ಮನಸ್ಸಿನಲ್ಲಿ ಅಲ್ಪ ಆತಂಕ ಮತ್ತು ಗೊಂದಲ ಮೂಡುತ್ತದೆ, ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ, ಅನಗತ್ಯ ಮತ್ತು ಅಧಿಕವಾದ ಖರ್ಚು ಮಾಡುವಿರಿ, ಕುಟುಂಬದಲ್ಲಿ ಅಧಿಕವಾದ ಕೋಪ ಇದರಿಂದ ಜಗಳಗಳು ವೈಮನಸ್ಸು ಉಂಟಾಗುವುದು.ವಾದ ವಿವಾದಗಳಿಂದ ದೂರ ಇರುವುದು ಉತ್ತಮ, ಇಲ್ಲವೆಂದರೇ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ .
ಪರಿಹಾರ:ಪ್ರತಿನಿತ್ಯ 18 ಬಾರಿ ಅಶ್ವಥ ವೃಕ್ಷ ಪ್ರದಕ್ಷಿಣೆಯನ್ನು ಮಾಡಿ, ನಮಸ್ಕಾರ ಮಾಡಿ.

ಕನ್ಯಾ ರಾಶಿ 

 

 

ದಾಯಾದಿಗಳೊಂದಿಗೆ ವೈಮನಸ್ಸು , ಬಂಧುಗಳಿಂದ ನಿಂದನೆ ಅವಮಾನ, ವ್ಯವಹಾರಗಳಲ್ಲಿ ನಿದಾನ ಗತಿ, ವ್ಯಾಪಾರದಲ್ಲಿ ನಷ್ಟವಾಗುವ ಸಾಧ್ಯತೆ ಇದೆ, ಹಣಕಾಸು ವಿಚಾರದಲ್ಲಿ ತಗಾದೆಗಳು ಬರುತ್ತವೆ, ತಪ್ಪು ಮಾಡಿ ದಂಡ ಕಟ್ಟುವ ಪ್ರಸಂಗ ಎದುರಾಗುತ್ತದೆ, ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿರುವವರಿಗೆ ಲಾಭ ಉಂಟಾಗಲಿದೆ.
ಪರಿಹಾರ:ಪ್ರತಿನಿತ್ಯ ಗಜೇಂದ್ರಮೋಕ್ಷ ಪಾರಾಯಣವನ್ನು ಮಾಡಿ, ಬುಧವಾರ ನಾಟಿ ತುಳಸಿಯನ್ನು ವಿಷ್ಣುವಿಗೆ ಅರ್ಪಿಸಿ, ದೀರ್ಘದಂಡ ನಮಸ್ಕಾರವನ್ನು ಮಾಡಿ.

ತುಲಾ ರಾಶಿ

 

 

ಹಣಕಾಸಿನ ವಿಚಾರದಲ್ಲಿ ಯೋಚನೆಗೆ ಈಡಾಗುತ್ತೀರ, ವ್ಯವಹಾರ ಆರಂಭಕ್ಕೆ ಯೋಜನೆ ರೂಪಿಸುವಿರಿ, ಮಾನಸಿಕವಾಗಿ ವೇದನೆ ಪಡುವಿರಿ, ಮನಸ್ಸಿನಲ್ಲಿ ಭಯ ಆತಂಕಗಳ ಪಡುತ್ತೀರ, ಮನೆಯಲ್ಲಿ ಗೊಂದಲ ಮಯವಾದ ವಾತಾವರಣ ಸೃಷ್ಟಿಯಾಗಲಿದೆ, ಅತಿಯಾದ ದುಃಖ ಕಾಡುವುದು, ಹಿರಿಯರಾದ ಉತ್ತಮ ಸಲಹೆ ಲಭಿಸುವುದು.
ಪರಿಹಾರ:ಪ್ರತಿನಿತ್ಯ ಆಂಜನೇಯನಿಗೆ ತುಳಸಿ ಹಾರವನ್ನು ಹಾಕಿ ನಮಸ್ಕಾರ ಮಾಡಿ.

ವೃಶ್ಚಿಕ ರಾಶಿ

 

 

ನಾನಾ ವಿಚಾರಗಳ ಬಗ್ಗೆ ಚರ್ಚೆ, ಹಣಕಾಸು ವಿಚಾರವಾಗಿ ನಷ್ಟ ಸಾಧ್ಯತೆ, ದೇಹದಲ್ಲಿ ಆಲಸ್ಯ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಸ್ನೇಹಿತರೊಂದಿಗೆ ಕಲಹ, ವಾಗ್ವಾದ, ಶತ್ರುತ್ವ ಹೆಚ್ಚಾಗುವುದು, ಷೇರು ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ.
ಪರಿಹಾರ:ಪಂಚಮುಖಿ ಗಣಪತಿ ದರ್ಶನ ಮಾಡಿ ಪ್ರತಿನಿತ್ಯ ದೀರ್ಘದಂಡ ನಮಸ್ಕಾರ ಮಾಡಿ.

ಧನಸ್ಸು ರಾಶಿ

 

 

ಯತ್ನ ಕಾರ್ಯದಲ್ಲಿ ಯಶಸ್ಸನ್ನು ಗಳಿಸುವಿರಿ, ಪರಿಶ್ರಮಕ್ಕೆ ತಕ್ಕ ಪ್ರತಿಫಲ ಲಭಿಸುವುದು, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಹಣಕಾಸು, ಆಹಾರ ದಾನ ಮಾಡುವಿರಿ, ಅಪರಿಚಿತರ ಮತ್ತು ಅಪರೂಪದ ವ್ಯಕ್ತಿಯನ್ನು ಭೇಟಿಯಾಗುವುದು, ನೆಮ್ಮದಿಯ ಜೀವನಕ್ಕೆ ಮನಸ್ಸು ಹಾತೊರೆಯುವುದು.
ಪರಿಹಾರ:ಪ್ರತಿನಿತ್ಯ ಆಶ್ವತ ವೃಕ್ಷಕ್ಕೆ ಪ್ರದಕ್ಷಿಣೆ ಹಾಕಿ ನಮಸ್ಕಾರ ಮಾಡಿ.

ಮಕರ ರಾಶಿ

 

 

ಈ ವಾರ ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ದುರ ಪ್ರಯಾಣ ಮಾಡುವ ಸಾಧ್ಯತೆ ಇದೆ, ವಿದೇಶದಲ್ಲಿ ಉದ್ಯೋಗ ಅವಕಾಶ, ಮಾಡುವ ಕೆಲಸದಲ್ಲಿ ಒತ್ತಡ ಹೆಚ್ಚಾಗಲಿದೆ ,ಗೆಳೆಯರಿಂದ ಬುದ್ಧಿ ಮಾತು, ಹಿತ ಶತ್ರುಗಳ ಕಾಟ, ಯಾರು ನೀವು ಒಳ್ಳೆಯವರು ಎಂದು ತಿಳಿದುಕೊಂಡಿರುವಿರಿ ಅವರಿಂದಲೇ ಹೆಚ್ಚು ಕಾಟ.
ಪರಿಹಾರ:ಪ್ರತಿನಿತ್ಯ ಶಿವನಿಗೆ ಬಿಲ್ವಾರ್ಚನೆಯನ್ನು ಮನೆಯನ್ನು ಮಾಡಿ ನಮಸ್ಕಾರ ಮಾಡಿ.

ಕುಂಭ ರಾಶಿ

 

 

ಆನ್ಯರೊಂದಿಗೆ ದ್ವೇಷ, ಚಂಚಲವಾದ ಮನಸ್ಸು, ಶತ್ರುಬಾಧೆ ಹೆಚ್ಚಾಗುವುದು, ಅನ್ಯರ ಕುತಂತ್ರಕ್ಕೆ ಬಲಿಯಾಗುವಿರಿ, ನಂಬಿಕಸ್ತರಿಂದ ಮೋಸ ಹೋಗುವ ಸಾಧ್ಯತೆ ಇದೆ, ವಿದ್ಯಾರ್ಥಿಗಳಿಗೆ ಅಪಯಶಸ್ಸು, ಸಾಲ ಮಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ.
ಪರಿಹಾರ:ಶಿರಡಿ ಸಾಯಿಬಾಬನ ದರ್ಶನ ಮಾಡಿ ಪ್ರತಿ ಗುರುವಾರ ಸಾಯಿಬಾಬಾ ದೇವರಿಗೆ ನಮಸ್ಕಾರ ಮಾಡಿ.

ಮೀನ ರಾಶಿ 

 

 

ಸೈಟ್ ವಾಹನದಿಂದ ಲಾಭ, ಪಿತ್ರಾರ್ಜಿತ ಆಸ್ತಿ ತಗಾದೆ ನಿವಾರಣೆ, ಕೆಲಸ ಕಾರ್ಯಗಳಲ್ಲಿ ವಿಳಂಬ , ಗುರುಗಳಿಂದ ಸೂಕ್ತ ಸಲಹೆಯನ್ನು ಪಡೆದುಕೊಳ್ಳಿ, ಹಿರಿಯರಿಂದ ಬುದ್ಧಿ ಮಾತು, ಅದನ್ನು ಸ್ವೀಕರಿಸುವುದು ಉತ್ತಮ ,ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗುವುದು,ನೆಮ್ಮದಿ ಇಲ್ಲದ ಜೀವನ ನಿಮ್ಮದಾಗುವುದು.
ಪರಿಹಾರ:“ಓಂ ಕುಬೇರಾಯ ನಮಃ” ಈ ಮಂತ್ರವನ್ನು ಪ್ರತಿನಿತ್ಯ 48 ಬಾರಿ ಜಪಿಸಿ, ಬಡ ಮಕ್ಕಳಿಗೆ ಅಂಧ ಮಕ್ಕಳಿಗೆ ಕೈಲಾದ ಸೇವೆಯನ್ನು ಮಾಡಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top