ಸಮಾಚಾರ

ಬಿಬಿಎಂಪಿ ಉಪಮೇಯರ್ ರಮೀಳಾ ಹಠಾತ್ ಸಾವು- ಅನುಮಾನ ಮೂಡಿಸುವ ವೈದ್ಯಕೀಯ ವರದಿ.

ಇತ್ತೀಚಿಗಷ್ಟೇ ಬಿಬಿಎಂಪಿಯ ಉಪಮೇಯರ್ ಆಗಿ ಆಯ್ಕೆಯಾಗಿದ್ದ 44 ವರ್ಷ ವಯಸ್ಸಿನ ರಮೀಳಾ ಉಮಾಶಂಕರ್ ಅವರು ತೀವ್ರ ಹೃದಯಾಘಾತದಿಂದ ಕಳೆದ ಗುರುವಾರ ತಡರಾತ್ರಿ ವಿಧಿವಶರಾಗಿದ್ದಾರೆ. ಅವರ ಸಾವಿನ ಕುರಿತು ಆಸ್ಪತ್ರೆ ನೀಡುತ್ತಿರುವ ಹೇಳಿಕೆಗಳು ಇದೀಗ ನಾನಾ ಅನುಮಾನಗಳಿಗೆ ಎಡೆಮಾಡಿಕೊಡುತ್ತಿವೆ.

ಉಸಿರಾಡಲು ಸಮಸ್ಯೆಯಾಗುತ್ತಿದೆ ಎಂದು ರಮೀಳಾ ಹೇಳಿದ್ದಾಗ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅವರು ಅದಾಗಲೇ ಮೃತಪಟ್ಟಿದ್ದರು ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದರು.. ರಮೀಳಾ ಅವ್ರು ಹಲವು ಗಂಟೆಗಳ ಕಾಲ ಆಸ್ಪತ್ರೆಯಲ್ಲಿದ್ದರೂ ಸಾವಿಗೆ ನಿಖರ ಕಾರಣ ಏನೆಂದು ತಿಳಿದುಬಂದಿಲ್ಲ ಎಂದು ವೈದ್ಯರು ಹೇಳಿರುವುದಾಗಿ ವರದಿ ತಿಳಿಸಿದೆ. ಬಳಿಕ ಆ ಆಸ್ಪತ್ರೆ ಜೊತೆ ಸಂಬಂಧವಿಲ್ಲದ ಬೇರೆ ವೈದ್ಯರೊಬ್ಬರು ರಮೀಳಾ ಅವರು ಹೃದಯಾಘಾತದಿಂದ ಸಹಜವಾಗಿ ನಿಧನರಾಗಿದ್ದಾರೆ ಎಂದು ವರದಿ ನೀಡಿದ್ದಾರೆ ಎಂದು ವರದಿಯಾಗಿದೆ.

 

 

ಇಷ್ಟು ಮಾತ್ರವಲ್ಲದೇ ಈ ಬಗ್ಗೆ ಬಸವೇಶ್ವರ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿರುವ ಆಸ್ಪತ್ರೆಯು ಸಾವಿಗೆ ಹೃದಯಾಘಾತವೇ ಕಾರಣ ಎಂಬುದನ್ನು ಉಲ್ಲೇಖಿಸಿಲ್ಲ ಎಂದು ಆರೋಪಿಸಲಾಗಿದೆ.., ಸಾವಿಗೆ ಕಾರಣವೇನೆಂದು ತಿಳಿಯಲು ಮರಣೋತ್ತರ ಪರೀಕ್ಷೆಯನ್ನೂ ನಡೆಸಲಾಗಿಲ್ಲ. ಸಾವಿಗೆ ಕಾರಣ ನೀಡುವ ಸರ್ಟಿಫಿಕೆಟನ್ನು ರಮೀಳಾ ಅವರ ಕುಟುಂಬಕ್ಕೆ ಗೊತ್ತಿರುವ ಬೇರೊಬ್ಬ ವೈದ್ಯರು ನೀಡಿದ್ದಾರೆ ಎಂದು ವರದಿಯಲ್ಲಿ ಆರೋಪಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top