ಹೆಚ್ಚಿನ

ಭಿಕ್ಷುಕರಿಗಾಗಿ ಎಲ್ಲರೂ ಮೆಚ್ಚುವಂತ ಕೆಲಸ ಮಾಡಿದ ಹೆಣ್ಣುಮಗಳು,ಏನ್ ಆ ಕೆಲಸ ಗೊತ್ತಾ,ಗೊತ್ತಾದ್ರೆ ನೀವು ಶಭಾಷ್ ಅಂತೀರಾ

ಅಮೇರಿಕಾದ ವಾಷಿಂಗ್ಟನ್ ನಲ್ಲಿ ವಾಸಿಸುವ ಈ ಮಹಿಳೆ ಭಿಕ್ಷುಕರಿಗಾಗಿ ಒಂದು ಅದ್ಬುತ ಹೆಜ್ಜೆ ಇಟ್ಟಿದ್ದಾರೆ ,ನಾವು ವಾಸವಿರುವ ಜಾಗದಲ್ಲಿ ,ನಮ್ಮನಿಮ್ಮ ಮನೆಗಳ ಹತ್ತಿರ ,ಟ್ರಾಫಿಕ್ ಸಿಗ್ನಲ್ ಗಳ ಹತ್ತಿರ ಹಾಗೂ ಹೋಟೆಲ್ ಗಳ ಬಳಿ ನಾವು ಭಿಕ್ಷುಕರು ಮತ್ತು ನಿರಾಶ್ರಿತರನ್ನು ನಾವು ನೋಡುತ್ತಿರುತ್ತೇವೆ,ನೋಡಿದ್ರೆ ಏನ್ ಮಾಡ್ತೀರಿ ಕೊಟ್ರೆ ಒಂದು ರೂಪಯಿ.

ಇಲ್ಲಿ ಮಹಿಳೆ ಒಬ್ಬಳು ಎಲ್ಲ ಮೆಚ್ಚುವಂತ ಕೆಲಸ ಮಾಡಿದ್ದಾಳೆ ,ಏನ್ ಆ ಕೆಲಸ ಗೊತ್ತಾ ?ಮಿಶೆಲ್ ಲುಸಿಯರ್ ಎಂಬ ಈ ಮಹಿಳೆ ಉತ್ತರ ಡಕೋಟಾದ ಫಾರ್ಗೋದಲ್ಲಿ ಪಿಜ್ಜಾ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದರು. ಇವರ ಅಂಗಡಿಗೆ ನಿತ್ಯವೂ ನೂರಾರು ಜನರು ಪಿಜ್ಜಾ ತಿನ್ನಲು ಬರುತ್ತಿದ್ದರು. ಅವರು ಪಿಜ್ಜಾವನ್ನು ಅರ್ಧಂಬರ್ಧ ತಿಂದು ಉಳಿದನ್ನು ಕಸದ ತೊಟ್ಟಿಯಲ್ಲಿ ಬಿಸಾಕಿ ಹೋಗುತ್ತಿದ್ದರಂತೆ . ಇದೇ ವೇಳೆ ಆಹಾರಕ್ಕಾಗಿ ಕಾಯುತ್ತಿದ್ದ ಭಿಕ್ಷುಕರು ಕಸದ ತೊಟ್ಟಿಯಿಂದ ಅದನ್ನು ಎತ್ತಿಕೊಂಡು ತಿನ್ನುತ್ತಿದ್ದರು.ಕೆಲವು ನಿರಾಶ್ರಿತರು ಕಸದ ತೊಟ್ಟಿಯಲ್ಲಿ ಬಿಸಾಡಿದ್ದ ತುಂಡುಗಳನ್ನು ಎತ್ತಿಕೊಂಡು ತಿನ್ನುತ್ತಿದ್ದರು. ಇದನ್ನು ನೋಡಿದ ಮಿಶೆಲ್ ಲುಸಿಯರ್ ಅವರು ಭಿಕ್ಷುಕರಿಗಾಗಿ ಒಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದರು. ಮಿಶೆಲ್ ಅವರು ಕೂಡಲೇ ತಮ್ಮ ಅಂಗಡಿ ಹೊರಗೆ ಬೋರ್ಡ್‍ಯೊಂದನ್ನು ಹಾಕಿ, ಪಿಜ್ಜಾವನ್ನು ನಿರಾಶ್ರಿತರಿಗೆ ಉಚಿತವಾಗಿ ನೀಡಲಾರಂಭಿಸಿದ್ದರು.

 

 

 

ಆ ಬೋರ್ಡಿನಲ್ಲಿ “ಕಸದ ತೊಟ್ಟಿಯಲ್ಲಿ ಎತ್ತಿಕೊಂಡು ತಿನ್ನುವ ವ್ಯಕ್ತಿಗಳೇ, ನೀವೂ ನಮ್ಮಂತೆ ಮನುಷ್ಯರು, ಆದ್ದರಿಂದ ಕಸದ ಬುಟ್ಟಿಯಲ್ಲಿ ಹಾಕಿರುವ ಆಹಾರಕ್ಕಿಂತ ಉತ್ತಮ ಆಹಾರ ತಿನ್ನಲು ನೀವು ಯೋಗ್ಯರಾಗಿದ್ದೀರಿ. ನೀವು ಬೇರೊಬ್ಬರ ಪಿಜ್ಜಾ ತಿನ್ನಬೇಡಿ, ನಮ್ಮ ಅಂಗಡಿಯೊಳಗೆ ಬಂದು ಉಚಿತವಾಗಿ ಪಿಜ್ಜಾ ಮತ್ತು ನೀರನ್ನು ತೆಗೆದುಕೊಂಡು ಹೋಗಿ” ಎಂದು ಮನವಿ ಮಾಡಿಕೊಂಡಿದ್ದಾರೆ.

 

 

 

ಯಾವುದೇ ಹಿಂಜರಿತ ಸಂಕೋಚವಿಲ್ಲದೇ ನಮ್ಮ ಅಂಗಡಿಗೆ ಬಂದು ಪಿಜ್ಜಾ ತಿಂದು ಹೋಗಿ. ನೀವು ಅಂಗಡಿಗೆ ಬಂದರೆ ನಿಮ್ಮನ್ನು ಇಲ್ಲಿ ಯಾರೂ ಪ್ರಶ್ನೆ ಮಾಡಲ್ಲ ಎಂದು ಮಿಶೆಲ್ ಬೋರ್ಡ್ ಹಾಕಿದ್ದಾರೆ. ಈ ರೀತಿ ಬರೆದಿರುವ ಫೋಟೋವನ್ನು ಟ್ವೀಟ್ ನಲ್ಲಿ ಪೋಸ್ಟ್ ಮಾಡಲಾಗಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ಈಗವೈರಲ್ ಆಗಿದು ಮಿಶೆಲ್ ಲುಸಿಯರ್ ರ ಈ ಕಾರ್ಯಕ್ಕೆ ಜನ ಮೆಚ್ಚುಗೆ ಸೂಚಿಸಿದ್ದಾರೆ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top